Featured
ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಸಂಸದ ಡಿ.ಕೆ ಸುರೇಶ್..! – ಕುಟಂಬಸ್ಥರಿಗೆ ಸಾಂತ್ವನ ಹೇಳಿದ ಸಂಸದ
![](https://risingkannada.com/wp-content/uploads/2020/07/WhatsApp-Image-2020-07-19-at-3.10.05-PM.jpeg)
ರೈಸಿಂಗ್ ಕನ್ನಡ :
ರಾಮನಗರ :
ಕೊರೊನಾ ಅನ್ನೋ ಮಹಾಮಾರಿಯನ್ನ ಎಲ್ಲರೂ ಒಟ್ಟಾಗಿ ಎದುರಿಸಬೇಕು. ಆದ್ರೆ, ಯಾವುದೇ ಹಂತದಲ್ಲೂ ಮಾನವೀಯತೆ ಮರೆತು ವರ್ತಿಸಬಾರದು ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ ಸುರೇಶ್ ತಿಳಿಸಿದ್ದಾರೆ. ಕೊರೊನಾದಿಂದ ಮೃತಪಟ್ಟವರನ್ನ ಕೆಟ್ಟ ಸ್ಥಿತಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದ ಘಟನೆಗಳನ್ನ ನಾವುಗಳು ನೋಡಿದ್ದೇವೆ. ಆದ್ರೆ, ಹಿಂದೂ ಸಂಸ್ಕೃತಿಯಲ್ಲಿ ಹೀಗೆ ಮಾಡಬಾರದು. ಸೋಂಕಿನಿಂದ ಮೃತಪಟ್ಟವರನ್ನ ಕೂಡ ಉತ್ತಮ ಸ್ಥಿತಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಬೇಕು ಎಂದಿದ್ದಾರೆ.
![](https://risingkannada.com/wp-content/uploads/2020/07/WhatsApp-Image-2020-07-19-at-3.10.04-PM-484x1024.jpeg)
ರಾಮನಗರ ಜಿಲ್ಲೆ ಕನಕಪುರದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಡಿ.ಕೆ ಸುರೇಶ್ ಮಾತನಾಡಿದ್ರು. ಕಳೆದ ಮೂರು ದಿನಗಳ ಹಿಂದೆ ಇಲ್ಲಿನ ಸಪ್ತಗಿರಿ ಜೂವೆಲರ್ಸ್ ಮಾಲೀಕರಾದ ನರಸಿಂಹ ಶೆಟ್ಟಿ ಕರೋನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರ ಕೊನೆಯುಸಿರೆಳೆದಿದ್ದರು.
ಮೃತರ ಅಂತ್ಯಕ್ರಿಯೆ ಕನಕಪುರದ ದೇಗುಲ ಮಠದ ಸಮೀಪದ ಸ್ಮಶಾನದಲ್ಲಿ ನೆರವೇರಿತು. ಈ ವೇಳೆ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಸಂಸದ ಡಿ.ಕೆ ಸುರೇಶ್ ಹಾಗೂ ಎಂಎಲ್‌ಸಿ ರವಿ, ಮೃತರ ಕುಟುಂಬಸ್ಥರ ಜೊತೆ ಸೇರಿ ಅಂತ್ಯಕ್ರಿಯೆಯಲ್ಲಿ ಭಾಗಿಯಾದರು.
ಆರೋಗ್ಯ ಇಲಾಖೆ ಸಿಬ್ಬಂದಿ, ನಗರಸಭೆ ಸಿಬ್ಬಂದಿಗಳು ಅಂತ್ಯಕ್ರಿಯೆ ನಡೆಸಿದರು. ಸಂಸದ ಡಿ.ಕೆ ಸುರೇಶ್ ಪಿಪಿಟಿ ಕಿಟ್ ತೊಟ್ಟು, ಸೂಕ್ತ ಕಾಳಜಿಯೊಂದಿಗೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?