Featured
ಬಿಬಿಎಂಪಿ ವ್ಯಾಪ್ತಿಗೆ ಮತ್ತಷ್ಟು ಗ್ರಾಮಗಳ ಸೇರ್ಪಡೆ:ವಿಜಯ ನಗರ ಪ್ರತ್ಯೇಕ ಜಿಲ್ಲೆ ರಚನೆಗೆ ಸಂಪುಟ ಅನುಮೋದನೆ ಸಾಧ್ಯತೆ..!!
ರೈಸಿಂಗ್ ಕನ್ನಡ:
ಬೆಂಗಳೂರು:
ಬಿಬಿಎಂಪಿ ವಾರ್ಡಗಳ ಮರು ವಿಂಗಡನೆ ಮಾಡಿ ಚುನಾವಣೆ ಮುಂದೂ ಡುವ ಹುನ್ನಾರಿನಲ್ಲಿರುವ ಸರ್ಕಾರಕ್ಕೆ ಒಂದೆಡೆ ಹೈಕೋರ್ಟ್ ತೀರ್ಪು ಚುನಾವಣೆ ನಡೆಸುವ ಅನಿವಾರ್ಯತೆ ಸೃಷ್ಟಿಸಬಹುದು ಎಂಬ ಆತಂಕ ಎದುರಾಗಿದೆ.
ಹೀಗಾಗಿ ಬಿಬಿಎಂಪಿಗೆ ಮತ್ತಷ್ಟು ಗ್ರಾಮಗಳನ್ನು ಸೇರ್ಪಡೆ ಗೊಳಿಸುವ ಮೂಲಕ ವಾರ್ಡ ಮರು ವಿಂಗಡಣೆ ಮಾಡಿ ಹೈಕೋರ್ಟ್ ಆದೇಶವನ್ನು ಜಾರಿಗೊಳಿಸದಂತೆ ತಡೆಯಲು ತಂತ್ರ ರೂಪಿಸಿದೆ.
ವಿಧಾನ ಸೌಧದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಬಿಬಿಎಂಪಿಗೆ ಬೆಂಗಳೂರು ಉತ್ತರ ತಾಲೂಕು ಯಶವಂತಪುರ ಹೋಬಳಿಯ ಸೋಮಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಲಕ್ಷ್ಮೀಪುರ ಕಂದಾಯ ಗ್ರಾ ಮ,ಕಾನ್ಷರಾಂ ನಗರ,ಲಕ್ಷ್ಮೀಪುರದ ಎಲ್ಲಾ ಬಡಾವಣೆಗಳನ್ನು ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡ್ ನಂ. 12ಕ್ಕೆ ಸೇರ್ಪಡೆಗೊಳಿಸುವುದು.
ಮಲ್ಲಸಂದ್ರ ಹಾಗೂ ಉತ್ತರ ಹಳ್ಳಿ ಮನವರ್ತೆ ಕಾವಲ್ ಗ್ರಾಮದ ಭಾಗಶಃ ಪ್ರದೇಶಗಳನ್ನು ಬಿಬಿಎಂಪಿಗೆ ಸೇರ್ಪಡೆ ಮಾಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಲಿದೆ ಎನ್ನಲಾಗಿದೆ.ಆ ಮೂಲಕ ಹೈಕೋರ್ಟ್ ಹಾಲಿ 198 ವಾರ್ಡಗಳಿಗೆ ಚುನಾವಣೆ ನಡೆಸುವಂತೆ ಆದೇಶ ನೀಡಿದರೂ ಹೊಸ ಆದೇಶವನ್ನು ಮುಂದಿಟ್ಟುಕೊಂಡು,ಹಾಗೂ ಬಿಬಿಎಂಪಿ ಮರು ವಿಂಗಡಣೆ ವಿಧಾನ ಮಂಡಲ ಉಪ ಸಮಿತಿ ವರದಿ ಆಧಾರದ ಮೇಲೆ ವಾರ್ಡ್ ಮರು ವಿಂಗಡಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡ ಚುನಾವಣೆ ಯನ್ನು ಮುಂದೂಡುವುದು ಸರ್ಕಾರದ ಮುಂದಿರುವ ಲೆಕ್ಕಾಚಾರವಾಗಿದೆ.
ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯ ನಗರ ಪ್ರತ್ಯೇಕ ಜಿಲ್ಲೆ ರಚನೆ ಮಾಡಲು ಕಳೆದ ಸಚಿವ ಸಂಪುಟ ಸಭೆಯ ಲ್ಲಿ ತಾತ್ಕಾಲಿಕ ಒಪ್ಪಿಗೆ ನೀಡಿತ್ತು.ನಾಳಿನ ಸಂಪುಟ ಸಭೆಯಲ್ಲಿ ಯಾವೆಲ್ಲಾ ತಾಲೂಕುಗಳನ್ನು ಸೇರಿಸಿ ಪ್ರತ್ಯೇಕ ಜಿಲ್ಲೆ ರಚನೆ,ನಕ್ಷೆ,ಜಿಲ್ಲಾಧಿಕಾರಿ ಕಚೇರಿ,ಪೊಲೀಸ್ ವರಿಷ್ಠಾಧಿಕಾರಿ ಕಚೇರಿ,ಕಂದಾಯ ವಿಭಾಗಗಳು,ಉಪ ವಿಭಾ ಗಗಳನ್ನು ಹಾಗೂ ಜಿಲ್ಲೆ ರಚನೆಗೆ ಅಗತ್ಯ ಅನುದಾನ ಸೇರಿದಂತೆ ಉಳಿದಂತೆ ಕಾನೂನಾತ್ಮಕ ಹಾಗೂ ಇತರೆ ವಿಚಾರಗಳಿಗೆ ಸಂಪುಟ ಪೂರ್ಣ ಪ್ರಮಾಣದಲ್ಲಿ ಅನುಮೋದನೆ ನೀಡಲಿದೆ.
ಹಲವಾರು ದಿನಗಳಿಂದ ನೆನೆಗುದಿಗೆ ಬಿದ್ದದ್ದ ಹಾಗೂ ಮಸ್ಕಿ ಉಪ ಚುನಾವಣೆಯ ಪ್ರಮುಖ ಅಸ್ತ್ರವಾದ ಮಸ್ಕಿ ನಾಲಾ ಯೋಜನೆ ಬಲದಂತೆ ಮತ್ತು ಎಡದಂತೆ ಮುಖ್ಯ ಕಾಲುವೆಗಳ ಹಾಗೂ ವಿತರಣಾ ಕಾಲುವೆಗಳ ಆಧುನೀ ಕರಣ ಕಾಮಗಾರಿಗೆ 52.54 ಕೋಟಿ ರೂ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆಯನ್ನು ನಾಳಿನ ಸಚಿವ ಸಂಪುಟ ಸಭೆ ನೀಡಲಿದೆ.
ನೈಸ್ ಯೋಜನೆ ಅಡಿ ಬರುವ ಜಮೀನುಗಳ ಬಗ್ಗೆ ಇರುವ ವ್ಯಾಜ್ಯಗಳ ಕುರಿತು ಪರಿಶೀಲಿಸಿ ಸೂಕ್ತ ಶಿಫಾರಸ್ಸು ಮಾಡಲು ರಚಿಸಲಾಗಿರುವ ಸಚಿವ ಸಂಪುಟ ಉಪ ಸಮಿತಿಯನ್ನು ಪುನರ್ ರಚಿಸುವುದು.ಕರ್ನಾಟಕ ಗೃಹ ಮಂಡಳಿಯು 2020-21ನೇ ಸಾಲಿನಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 98 ಸ್ಥಳಗಳಲ್ಲಿ ಸಂಯುಕ್ತ ವಸತಿ ಯೋಜನೆ ನಿರಮ್ಇಸಲು 7275 ಕೋಟಿ ರೂ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಲಿದೆ.
ಎಸ್ ಟಿಪಿಐ ಸಹಯೋಗದಲ್ಲಿ ಉತ್ಕೃಷ್ಟತಾ ಕೇಂದ್ರವನ್ನು 26 ಕೋಟಿರು ಮೊತ್ತದಲ್ಲಿ ಬೆಂಗಳೂರಿನಲ್ಲಿ ಸ್ಥಾಪಿ ಸುವುದು,ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಬೆಳಗಾವಿ ಸಂಸ್ಥೆಯ ಕೇಂದ್ರ ಕಚೇರಿಯ ಹಾಗೂ ಪ್ರಾದೇಶಿಕ ಕಚೇರಿ ಅಭಿವೃದ್ದಿ ಕೈಗೊಳ್ಳಲು 42 ಕೋಟಿರೂ. ಆಡಳಿತಾತ್ಮಕ ಅನುಮೋದನೆ ನೀಡುವುದು.
ಪರಿಶಿಷ್ಟ ಜಾರಿ ಮತ್ತು ಪರಿಶಿಷ್ಟ ಪಂಗಡಗಳ ಹಿಂಬಾಕಿ (ಬ್ಯಾಕ್ ಲಾಗ್ )ಹುದ್ದೆಗಳನ್ನು ಭರ್ತಿ ಮಾಡಲು ಬಗ್ಗೆ ಸಚಿವ ಸಂಪುಟ ಉಪ ಸಮಿತಿ ಪುನರ್ ರಚನೆ.ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಕರ್ಪೆ ಗ್ರಾಮದ ದೋಟದಲ್ಲಿ ಕಿಂಡಿ ಅಣ್ಣೆಕಟ್ಟು ನಿರ್ಮಾಣಕ್ಕೆ 36 ಕೋಟಿರೂ ಯೋಜನೆಗೆ ಒಪ್ಪಿಗೆ ನೀಡುವುದು.
ಕರ್ನಾಟಕ ಗೆಜೆಟೆಡ್ ಪ್ರೊಬೇಷನರುಗಳ ನೇಮಕಾತಿ ನಿಮಯಗಳ ತಿದ್ದುಪಡಿ ಹಾಗೂ ಕರ್ನಾಟಕ ರಾಜ್ಯಸಿವಿಲ್ ಸೇವೆಗಳ ಸೇವಾ ತಿದ್ದಪಡಿ ವಿಧೇಯಕಕ್ಕೆ ಘಟನೋತ್ತರ ಅನುಮೋದನೆ ನೀಡುವ ಸಾಧ್ಯತೆ ಇದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯಿತಿಯಾಗಿ,ಕೋಲಾರ ಜಿಲ್ಲೆ ವೇಮಗಲ್ ಮತ್ತು ಕುರುಗಲ್ ಗ್ರಾಮ ಪಂಚಾಯಿತಿ, ಶೆಟ್ಟಿ ಹಳ್ಳಿ, ಚೌಡೇನಹಳ್ಳಿ ಗ್ರಾಮಗಳನ್ನು ಒಗ್ಗೂಡಿಸಿ ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೆ ಏರಿಸುವು ದು.ಹೊನ್ನಾಳಿ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸುವುದು.
ಬೆಳಗಾವಿಯ ಪೀರನವಾಡಿ ಗ್ರಾಮ ಪಂಚಾಯಿತಿ ಮತ್ತು ಮಚ್ಚೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಗೆ ಮೇಲ್ದ ರ್ಜೆಗೆ ಏರಿಸುವುದು.ದೇವದುರ್ಗ ತಾಲೂಕಿನ ಜಾಲಹಳ್ಳಿ ಮತ್ತು ಕರಡಿಗುಡ್ಡ ಗ್ರಾಮ ಪಂಚಾಯಿತಿ ಹಾಗೂ ಕೆಲ ವು ಗ್ರಾಮಗಳನ್ನು ಜಾಲಹಳ್ಳಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸುವುದು,ಯಲಹಂಕ ತಾಲೂಕಿನ ಜಾಲಹೋಬಳಿಯ ಹುಣಸಮಾರನಹಳ್ಳಿ ಮತ್ತು ಸೊಣ್ಣಪ್ಪನಹಳ್ಳಿ ಗ್ರಾಮ ಪಂಚಾಯ್ತಿಯಗಳನ್ನು ಒಟ್ಟುಗೂ ಡಿಸಿ ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸುವುದು,ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಾಗವಾಡ ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆ ಏರಿಸುವುದು ಸೇರಿದಂತೆ ಹಲವು ಪ್ರಮುಖ ಹಾಗು ಮಹತ್ವದ ನಿರ್ಣಯಗಳನ್ನು ಸಚಿವ ಸಂಪುಟ ಸಭೆ ಕೈಗೊಳ್ಳಲಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?