Featured
ಮಲೆನಾಡಿನಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ: ಆಧುನಿಕ ಯುಗದಲ್ಲಿ ಜೀವಂತವಾಗಿದೆ ಗದ್ದೆ ನಾಟಿಯ ಹಾಡುಗಳು

ರೈಸಿಂಗ್ ಕನ್ನಡ :
ಭರತ್ ಕುಮಾರ್, ಚಿಕ್ಕಮಗಳೂರು:
ಎಲ್ಲೆಡೆ ಮುಂಗಾರು ಶುರುವಾಗಿದೆ.ಮಲೆನಾಡಿನಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಚಿಕ್ಕಮಗಳೂರಿನಲ್ಲಿ ಮಳೆ ಚೆನ್ನಾಗಿ ಸುರಿಯುತ್ತಿರುವುದರಿಂದ ಇಲ್ಲಿನ ರೈತರ ಸಂಭ್ರಮವನ್ನ ಹೆಚ್ಚಾಗುವಂತೆ ಮಾಡಿದೆ. ಇಲ್ಲಿನ ರೈತರು ಖುಷಿಯಿಂದಲೇ ಹೊಲದಲ್ಲಿ ನಾಟಿ ಮಾಡಿ ಸಂತಸಪಡುತ್ತಿದ್ದಾರೆ.
ಇತ್ತಿಚ್ಚಿನ ದಿನಗಳಲ್ಲಿ ಗದ್ದೆ ಕೆಲಸದಲ್ಲಿ ಆಳುಗಳಿಗಿಂತ ಹೆಚ್ಚಾಗಿ ಯಂತ್ರೋಪಕರಣಗಳೆ ಕಾಣುತ್ತವೆ ಮನುಷ್ಯ ಆಧುನಿಕತೆಗೆ ಹೊಂದಿಕೊಂಡತೆ. ಪುರಾತನ ಪದ್ಧತಿಗಳು ಮರೆ ಮಾಚುತ್ತಿವೆ ಆದರೆ ಚಿಕ್ಕಮಗಳೂರಿನ ರೈತರೊಬ್ಬರು ಗದ್ದೆಯಲ್ಲಿ ಇಂದಿಗೂ ಪುರಾತನ ಶೈಲಿಯ ಗದ್ದೆ ನಾಟಿಯನ್ನು ಮಾಡುತ್ತಿರುವುದು ಕಾಣಬಹುದು.

ಜೊತೆಗೆ…ನೀರಿನಲ್ಲಿ ನೆಂದು ಕೆಲಸ ಮಾಡುವ ಸಂದರ್ಭ ಕೊಂಚ ದಣಿವು ನೀವಾರಿಸಿಕೊಳ್ಳಲು ರೈತ ಮಹಿಳೆಯರು ಹಾಡುವ ಹಾಡುಗಳು ತಮಾಷೆ ಮಾತುಗಳನ್ನ ಇಂದಿಗೂ ಇಲ್ಲಿ ಕೇಳಬಹುದಾಗಿದೆ. ಮಲೆನಾಡಿನಲ್ಲಿ ಈ ಬಾರಿ ಮುಂಗಾರು ಚುರುಕಾಗಿರುವುದರಿಂದ ರೈತರಿಗೆ ಗೆದ್ದೆಯಲ್ಲಿ ಕೆಲಸ ಮಾಡಲು ಉತ್ಸಾಹ ತುಂಬಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?