Featured
80 ಕೋಟಿ ಜನರಿಗೆ ನವೆಂಬರ್‌ವರೆಗೂ ಉಚಿತ ರೇಷನ್ – 5 ಕೆ.ಜಿ ಅಕ್ಕಿ ಅಥವಾ ಗೋಧಿ, ಒಂದು ಕೆ.ಜಿ ಬೇಳೆ ಉಚಿತ
![](https://risingkannada.com/wp-content/uploads/2020/06/Modi-2-1.jpg)
ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ. ನಿಜಕ್ಕೂ ಎಂತ ಸುಂದರ ಕಲ್ಪನೆ. ದೇಶದ 80 ಕೋಟಿ ಜನರಿಗೆ ಉಚಿತವಾಗಿ ಸರ್ಕಾರದಿಂದಲೇ ರೇಷನ್ ನೀಡೋ ವ್ಯವಸ್ಥೆಯನ್ನ ಮೋದಿ ಘೋಷಿಸಿದ್ದಾರೆ. ಇದು ವಿಶ್ವ ಇತಿಹಾಸದಲ್ಲೇ ಮೊದಲು ಅಂದ್ರೂ ತಪ್ಪಾಗೋದಿಲ್ಲ. ವಿಶ್ವದ ಯಾವುದೇ ದೇಶವೂ ಘೋಷಿಸದ ಇಂತದ್ದೊಂದು ಯೋಜನೆಯನ್ನ ನವೆಂಬರ್‌ವರೆಗೂ ಮುಂದವರಿಸೋಕೆ ನಿರ್ಧರಿಸಿದ ಮೋದಿ ಕ್ರಮಕ್ಕೆ ಹ್ಯಾಟ್ಸ್ ಆಫ್ ಹೇಳಲೇಬೇಕು.
5 ಕೆಜಿ ಅಕ್ಕಿ ಅಥವಾ ಗೋಧಿ, 1 ಕೆಜಿ ಬೇಳೆ
ಯೆಸ್, ದೇಶದಲ್ಲಿ ಯಾರೂ ಕೂಡ ಹಸಿವಿನಿಂದ ಬಳಲಬಾರದು. ವಿಶ್ವಕ್ಕೆ ಕೊರೊನಾ ಸಂಕಷ್ಟ ಎದುರಾಗಿದೆ. ಭಾರತೀಯರಾಗಿ ನಾವು ಯಾವುದಕ್ಕೂ ಹೆದರಬಾರದು. ಈ ಪವಿತ್ರ ದೇಶದ ಜನ ಹಸಿವಿನಿಂದ ಬಳಲಬಾರದು. ಇದೇ ಕಾರಣಕ್ಕಾಗಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನ ನವೆಂಬರ್‌ವರೆಗೂ ವಿಸ್ತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಒಂದೂವರೆ ಲಕ್ಷ ಕೋಟಿ ಮೀಸಲು
ಈಗಾಗಲೇ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ್ದ ಪ್ರಧಾನಿ ಮೋದಿ, ಇದೀಗ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಗಾಗಿ ಒಂದೂವರೆ ಲಕ್ಷ ಕೋಟಿ ಮೀಸಲಿಡೋದಾಗಿ ತಿಳಿಸಿದ್ರು.
ಒಂದು ರಾಷ್ಟ್ರ, ಒಂದು ರೇಷನ್ ಕಾರ್ಡ್
ಇದು ನಿಜಕ್ಕೂ ಅತ್ಯದ್ಭುತ ಕಲ್ಪನೆ. ದೇಶದಲ್ಲಿ ಆಯಾ ರೇಷನ್ ಕಾರ್ಡ್‌ಗೆ ಸಂಬಂಧ ಪಟ್ಟವರು ಅಲ್ಲೇ ರೇಷನ್ ಪಡಿಯಬೇಕು ಎಂದೇನಿಲ್ಲ. ಬಡವ, ಬಲ್ಲಿಗ ಅನ್ನೋ ಬೇಧವಿಲ್ಲ. ಎಲ್ಲರಿಗೂ ಒಂದೇ ರೀತಿಯ ರೇಷನ್. ಯಾರು ಎಲ್ಲಿಬೇಕಾದರು ತಮ್ಮ ರೇಷನ್ ಕಾರ್ಡ್ ಮೂಲಕ, ದಿನಸಿಯನ್ನ ಖರೀದಿಸಬಹುದು ಅನ್ನೋ ಅದ್ಭುತ ಕಲ್ಪನೆಯನ್ನ ಕಾರ್ಯರೂಪಕ್ಕೆ ತಂದಿದ್ದಾರೆ.
ನಿಜಕ್ಕೂ ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ ಇಂತಹ ಅದ್ಭುತ ಯೋಜನೆಯನ್ನ ಜಾರಿಗೆ ತಂದ ಮೋದಿಗೆ ಭಾರತೀಯರೆಲ್ಲರೂ ಸಲಾಂ ಹೇಳಲೇಬೇಕು.
![](https://risingkannada.com/wp-content/uploads/2020/04/RISING-KANNADA-logo-150px.jpg)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?