Featured
ಕಂಟೇನ್‌ಮೆಂಟ್ ಝೋನ್‌ಗಳ ಬಗ್ಗೆ ಎಚ್ಚರಿಕೆ – ನಿಯಮಗಳನ್ನ ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಲೇಬೇಕು ಅಂದ್ರು, ಪ್ರಧಾನಿ ಮೋದಿ
ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಪ್ರಧಾನಿ ನರೇಂದ್ರ ಮೋದಿಯವರ ಈ ಬಾರಿಯ ಭಾಷಣ ಸಾಕಷ್ಟು ಕುತೂಹಲ ಮತ್ತು ಸಣ್ಣ ಆತಂಕವನ್ನೂ ಸೃಷ್ಠಿಸಿತ್ತು. ಮಾತು ಆರಂಭಿಸುತ್ತಲೆ ಎಲ್ಲಿ ಲಾಕ್‌ಡೌನ್ ಅಂದು ಬಿಡ್ತಾರೋ ಅಥವಾ ಚೀನಾ ವಿರುದ್ಧ ಡಿಜಿಟಲ್ ಸ್ಟ್ರೈಕ್ ಬಗ್ಗೆ ಮಾತನಾಡ್ತಾರೋ ಅನ್ನೋ ಪ್ರಶ್ನೆಗಳು ಎದುರಾಗಿದ್ದವು. ಆದ್ರೆ, ಮಾತು ಆರಂಭಿಸುತ್ತಲೇ ಕೊರೊನಾ ಮಹಾಮಾಹಿ ಅಂದಾಗ, ಲಾಕ್‌ಡೌನ್ ಫಿಕ್ಸ್ ಅಂದುಕೊಂಡೆವು. ಕೊರೊನಾ ಜೊತೆಯಲ್ಲೇ ಮಳೆಗಾಲದ ಕಡೆ ಹೆಜ್ಜೆಹಾಕುತ್ತಿದ್ದೇವೆ ನಗಡಿ, ಚಳಿ, ಜ್ವರ, ಶೀತ ಮತ್ತಷ್ಟು ಹೆಚ್ಚಾಗಬಹುದು ಅಂದ್ರು. ಆದ್ರೆ, ಅನೇಕ ರಾಷ್ಟ್ರಗಳಿಗೆ ಹೋಲಿಸಿದ್ರೆ, ನಾವು ಕೊರೊನಾ ವಿಚಾರದಲ್ಲಿ ಉತ್ತಮ ಪರಿಸ್ಥಿತಿಯಲ್ಲಿ ಇದ್ದೀವಿ ಅಂತ ತೃಪ್ತಿ ವ್ಯಕ್ತಪಡಿಸಿದ್ರು. ಆಗ ಲಾಕ್‌ಡೌನ್ ಮಾಡೋಲ್ಲ ಅನ್ನೋದು ಕನ್‌ಫರ್ಮ್ ಆಯ್ತು.
ಸೂಕ್ತ ಸಮಯದಲ್ಲಿ ತೆಗೆದುಕೊಂಡ ಸೂಕ್ತ ನಿರ್ಧಾರದಿಂದಾಗಿ ಲಕ್ಷಾಂತರ ಮಂದಿ ಜೀವನ್ನ ರಕ್ಷಿಸಿದ್ದೇವೆ. ಆದ್ರೆ, ಮುಂದಿನ ದಿನಗಳಲ್ಲಿ ನಾವು ಮತ್ತಷ್ಟು ಜಾಗರೂಕರಾಗಬೇಕು. ಮಾಸ್ಕ್, ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳಲೇಬೇಕು ಅಂದ್ರು. ರಾಜ್ಯ ಸರ್ಕಾರಗಳು, ಸ್ಥಳೀಯ ಆಡಳಿತ ಸಂಸ್ಥೆಗಳು ಅಷ್ಟೆಯಾಕೆ ಪ್ರತಿಯೊಬ್ಬ ನಾಗರೀಕನೂ ಕೂಡ ಸ್ವಯಂ ಪ್ರೇರಿತವಾಗಿ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸಬೇಕು ಅಂದ್ರು.
ಕಂಟೇನ್‌ಮೆಂಟ್ ಝೋನ್‌ಗಳ ಬಗ್ಗೆ ಎಚ್ಚರವಿರಲಿ..!
ಕಂಟೇನ್‌ಮೆಂಟ್ ಝೋನ್‌ಗಳಲ್ಲಂತೂ ಕಟ್ಟುನಿಟ್ಟಾಗಿ ಎಲ್ಲಾ ನಿಯಮಗಳನ್ನೂ ಪಾಲಿಸಲೇಬೇಕು. ಅಲ್ಲಿ ಯಾರಾದರೂ ಅಜಾಗರೂಕರಾಗಿ ವರ್ತಿಸಿದ್ರೆ, ತಿಳಿಹೇಳೋ ಪ್ರಯತ್ನ ಮಾಡಿ. ಕೇಳಲಿಲ್ಲ ಅಂದ್ರೆ ಸಂಬಂಧಪಟ್ಟವರಿಗೆ ತಿಳಿಸಿ ಕ್ರಮಕೈಗೊಳ್ಳಿ ಎಂದ್ರು. ಈ ಸಂದರ್ಭದಲ್ಲಿ ಬಗ್ಲೇರಿಯಾ ಪ್ರಧಾನಿ ಮಾಸ್ಕ್ ಹಾಕದೆ ದಂಡ ಕಟ್ಟಿದ್ದನ್ನ ಉದಾಹರಣೆಯಾಗಿ ಹೇಳಿದ್ರು. ಇಷ್ಟೆಲ್ಲಾ ಹೇಳಿದ ಬಳಿಕ ನೇರವಾಗಿ ವಿಷ್ಯಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನ ಪ್ರಕಟಿಸಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?