Featured
ಚನ್ನಪಟ್ಟಣದಲ್ಲಿ ಸೈನಿಕನ ಶೌರ್ಯ – ಹೆಚ್‌ಡಿಕೆ – ಡಿಕೆಶಿ ವಿರುದ್ಧ ವ್ಯಂಗ್ಯವಾಡಿದ ನೂತನ MLC
ರೈಸಿಂಗ್ ಕನ್ನಡ :
ರಾಮನಗರ :
ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇಬ್ಬರು ನಿವೃತ್ತಿಯಾಗಿರೋ ಕುದುರೆಗಳು ಎಂದು ಬಿಜೆಪಿ ನೂತನ ಎಂಎಲ್‌ಸಿ ಸಿ.ಪಿ.ಯೋಗೀಶ್ವರ್ ವ್ಯಂಗ್ಯವಾಡಿದ್ದಾರೆ. ಎಂಎಲ್‌ಸಿ ಆದ ಬಳಿಕ ರಾಮನಗರ ಜಿಲ್ಲೆ ಚನ್ನಪಟ್ಟಣಕ್ಕೆ ಮೊದಲ ಬಾರಿಗೆ ಭೇಟಿ ನೀಡಿ ಮಾತನಾಡಿದ್ರು.
ಕ್ಷೇತ್ರದ ಜನರು ನನ್ನ ಕೈಬಿಟ್ಟರು ಸಹ ಕೂಡ ಪಕ್ಷ ಕೈಹಿಡಿದಿದೆ. ಮುಂದಿನ ದಿನಗಳಲ್ಲಿ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನಕೊಡುತ್ತೇನೆ. ಕುಮಾರಸ್ವಾಮಿಯವರು ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದರು. ಯಾವೆಲ್ಲ ಕೆಲಸಕಾರ್ಯ ಆಗಿವೆ ಎಂದು ಪರಿಶೀಲನೆ ಮಾಡುತ್ತೇನೆ ಎಂದು ಸಿ.ಪಿ ಯೋಗೀಶ್ವರ್ ತಿಳಿಸಿದ್ದಾರೆ. ಕುಮಾರಸ್ವಾಮಿಯವರು ಹೇಳ್ತಾರೆ ನನ್ನ ಮಾತನ್ನ ಸಿಎಂ ಕೇಳ್ತಾರೆಂದು. ಬಿಜೆಪಿ ಸರ್ಕಾರದಲ್ಲಿ ಕ್ಷೇತ್ರದ ಅಭಿವೃದ್ಧಿ ಎಷ್ಟು ಮಾಡಿದೆ ಮಾಹಿತಿ ಪಡೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಅಭಿವೃದ್ಧಿ ವಿಚಾರದಲ್ಲಿ ನಾನು ಯಾವ ಹಸ್ತಕ್ಷೇಪವನ್ನೂ ಮೋಡೋಲ್ಲ. ಕುಮಾರಸ್ವಾಮಿಗೆ ನಾನು ಸಹಕಾರ ಕೊಡುತ್ತೇನೆ. ಬಿಜೆಪಿ ಪಕ್ಷ ನನಗೊಂದು ಜವಾಬ್ದಾರಿ ನೀಡಿದೆ. ಇದನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಸಿಕೊಳ್ಳುತ್ತೇನೆ ಎಂದಿದ್ದಾರೆ ಯೋಗೀಶ್ವರ್.
ಈ ಜಿಲ್ಲೆಯ ಇಬ್ಬರು ನಾಯಕರ ರಿಟೈರ್ಡ್ ಕುದುರೆಗಳು ಇದ್ದ ಹಾಗೆ. ಮುಂದೆ ಹೆಚ್ಚಿನ ಜವಾಬ್ದಾರಿಯೂ ಪಕ್ಷ ಕೊಡಬಹುದು ಕಾದು ನೋಡೋಣ ಎಂದು ಯೋಗೀಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ, ಸಚಿವ ಸ್ಥಾನ ಸಿಗೋ ಸುಳಿವನ್ನ ನೀಡಿದ್ದಾರೆ ಅನ್ಸುತ್ತೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?