Featured
ಸ್ಮಶಾನ ಭೂಮಿ ಒತ್ತುವರಿ ಪ್ರಕರಣ – ಸೂಕ್ತ ಕ್ರಮಕ್ಕೆ ತಹಶಿಲ್ದಾರ್ಗೆ ಸೂಚಿಸಿದ ಶಾಸಕ

ನಾಗರಾಜ್.Y.ಕೊಪ್ಪಳ
ಸರ್ಕಾರ ಮೀಸಲಿಟ್ಟ ಸ್ಮಶಾನ ಭೂಮಿಯನ್ನು ಕೆಲವರು ಅತಿಕ್ರಮಣ ಮಾಡಿ, ಆ ಭೂಮಿಯ ಮಣ್ಣನ್ನು ಬೇರೆಡೆಗೆ ಸಾಗಾಸುತ್ತಿರುವ ವಿಷಯ ಗಮನಕ್ಕೆ ಬಂದಿದ್ದು ಅಂತವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ತಹಶಿಲ್ದಾರ್ಗೆ ಸೂಚಿಸಲಾಗುವುದು ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹೇಳಿದ್ರು. ಗಂಗಾವತಿ ತಾಲೂಕಿನ
ಬಂಡಿ ಬಸಪ್ಪ ಕ್ಯಾಂಪ್ ಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಈ ಗ್ರಾಮದ ಸರ್ವೇ ನಂಬರ್ 16 ರಲ್ಲಿ ಸರ್ಕಾರದ ವತಿಯಿಂದ ಭೋವಿ ಹಾಗೂ ಸಾಮಾನ್ಯ ವರ್ಗದ ಸಮಾಜಗಳ ಸ್ಮಶಾನಕ್ಕಾಗಿ ಸರ್ಕಾರ ಭೂಮಿಯನ್ನು ಕೊಟ್ಟಿದೆ. ಆದ್ರೆ ಇದೇ ಭೂಮಿಯನ್ನು ಕೆಲವರು ಅತಿಕ್ರಮ ಮಾಡಿಕೊಂಡು, ಇಲ್ಲಿನ ಮಣ್ಣನ್ನು ಕೆಲ ಕಾಮಗಾರಿಗಳಿಗೆ ಬಳಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರು ನೀಡಿದ್ದಾರೆ. ತಕ್ಷಣವೇ ಈ ಮನವಿಯನ್ನು ಪರಿಗಣಿಸಿ ಇಂತಹ ಕೆಲಸಕ್ಕೆ ಕೈ ಹಾಕಿದವರ ವಿರುದ್ದ ಕ್ರಮಕ್ಕೆ ತಹಶಿಲ್ದಾರ್ಗೆ ಸೂಚಿಸಲಾಗುವುದು ಎಂದ್ರು. ಶಾಸಕರಿಗೆ ತಹಶಿಲ್ದಾರ್ ಎಲ್.ಡಿ ಚಂದ್ರಕಾಂತ್, ಪಿಎಸ್ಐ ದೊಡ್ಡಪ್ಪ, ಕಂದಾಯ ನೀರಿಕ್ಷಕರಾದ ಮಂಜುನಾಥ ಹಿರೇಮಠ, ಮಾಜಿ ಜಿಲ್ಲಾಪಂಚಾಯತ್ ಸದಸ್ಯ ಸಿದ್ದರಾಮಯ್ಯಸ್ವಾಮಿ, ಗ್ರಾಮಸ್ಥರಾದ ಬಸಣ್ಣ, ಯಮನೂರಪ್ಪ, ಕೃಷ್ಣ, ರವಿಕುಮಾರ್, ಜೈಶಂಕರ್, ಕಳಕಪ್ಪ ಸೇರಿದಂತೆ ಮತ್ತಿತರರು ಇದ್ದರು.
You may like
ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ 21 ಕುರಿಗಳ ಬಲಿ
ಅಗ್ನಿಗೆ 5 ಬಣವಿಗಳು ಆಹುತಿ, ರೈತರಿಗೆ ಪರಿಹಾರ ನೀಡುವುದೇ ಸರಕಾರ
ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಯಾಕಾಯ್ತು ಗೊತ್ತಾ?
ಕೊಪ್ಪಳದಲ್ಲಿ ನೀರಿನ ಬರ : ಶಾಲೆ ಬಿಟ್ಟರೂ ಕೊಡ ಹಿಡಿದು ನಿಂತರು
ಅಕ್ರಮ ಮರಳು ಅಡ್ಡೆ ಮೇಲೆ ತಹಶೀಲ್ದಾರ್ ದಾಳಿ: ಲಕ್ಷಾಂತರ ರೂ. ಮರಳು ವಶ
ಹಳ್ಳದಲ್ಲಿ ಕೊಚ್ಚಿ ಹೋದ ಇಬ್ಬರು ಮಹಿಳೆಯರು: ಕೊಪ್ಪಳದ ಕರಮುಡಿ ಗ್ರಾಮದಲ್ಲಿ ದುರ್ಘಟನೆ