Featured
SSLC ಪರೀಕ್ಷೆ ಬರೆಯುವವರಿಗೆ ಸ್ಪೆಷಲ್ ಕಿಟ್- ಮಾಸ್ಕ್, ಸ್ಯಾನಿಟೈಸರ್ ಜೊತೆಗೆ ಕಂಪಾಸ್ ಬಾಕ್ಸ್..!

ರೈಸಿಂಗ್ ಕನ್ನಡ:
ಬೆಳಗಾವಿ:
SSLC ವಿದ್ಯಾರ್ಥಿಗಳಿಗೆ ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ನೆರವಿಗೆ ನಿಂತಿದ್ದಾರೆ. ಖಾನಾಪುರ ಮತಕ್ಷೇತ್ರದಲ್ಲಿ ಪರೀಕ್ಷೆ ಬರೆಯುತ್ತಿರುವ 4500 ವಿದ್ಯಾರ್ಥಿಗಳ ಬಗ್ಗೆ ಶಾಸಕಿ ಅಂಜಲಿ ಹೇಮಂತ್ ನಿಂಬಾಳ್ಕರ್ ವಿಶೇಷ ಕಾಳಜಿ ತೋರಿಸುತ್ತಿದ್ದಾರೆ.
ವಿದ್ಯಾರ್ಥಿಗಳಿಗೆ ವಿಶೇಷವಾದ ಕಿಟ್ ಈ ಹಿಂದೆಯೂ ಶಾಲಾ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳ ನೀಡಿ ನೆರವು ನೀಡಿದ್ದರು. ಬಡ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ತೋರಿಸಿದ್ದರು. ಈಗಲೂ ಶಾಸಕಿ ಅಂಜಲಿ ತಮ್ಮ ಡಾ.ಅಂಜಲಿ ತಾಯಿ ಫೌಂಡೇಶನದಿಂದ 4500 ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸವನ್ನ ಮಾಡುತ್ತಿದ್ದಾರೆ. 4500 ವಿದ್ಯಾರ್ಥಿಗಳಿಗೆ ವಿಶೇಷವಾದ ಕಿಟ್ ನೀಡುತ್ತಿದ್ದಾರೆ ಶಾಸಕಿ ನಿಂಬಾಳ್ಕರ್.
ಶಾಸಕಿ ಅಂಜಲಿ ನಿಂಬಾಳ್ಕರ್ ಸ್ವಯಂ ತಮ್ಮ ಕುಟುಂಬ ಸದಸ್ಯರೊಂದಿಗೆ ಸೇರಿ 4500 ಕಿಟಗಳನ್ನ ತಯಾರು ಮಾಡಿದ್ದಾರೆ. ಪರೀಕ್ಷೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಈ ಕಿಟ್ ನೀಡಲಾಗುತ್ತಿದೆ. ಈ ಕಿಟ್ನಲ್ಲಿ ಎರಡು ಮಾಸ್ಕ್, 1 ಸ್ಯಾನಿಟೈಜರ್, 1 ಕಂಪಾಸ್ ಬಾಕ್ಸ್, 4 ಸೋಪು ನೀಡುತ್ತಿದ್ದಾರೆ.
ಮಕ್ಕಳನ್ನು ಕೊರೊನಾ ವೈರಸ್ನಿಂದ ರಕ್ಷಿಸಲು, ಈ ಕಿಟ್ ನೀಡುವ ಮೂಲಕ ಮಕ್ಕಳಲ್ಲಿ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಲು ಪ್ರೋತ್ಸಾಹ ನೀಡುತ್ತಿದ್ದಾರೆ. ಖಾನಾಪುರ ತಾಲೂಕಿನ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳಿಗೆ ಡಾ.ಅಂಜಲಿತಾಯಿ ಫೌಂಡೇಶನದಿಂದ ಈ ವಿಶೇಷ ಕಿಟ್ ಕೊಡಲಾಗುತ್ತಿದೆ.

You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?