Featured
ಕಾಲಲ್ಲೇ ಪರೀಕ್ಷೆ ಬರೆದು ಸಚಿವರ ಮನಗೆದ್ದ ವಿದ್ಯಾರ್ಥಿ- ಕೌಶಿಕ್ ಸಾಹಸಕ್ಕೆ ಸುರೇಶ್ ಕುಮಾರ್ ಸಲಾಂ

ರೈಸಿಂಗ್ ಕನ್ನಡ:
ಮಂಗಳೂರು:
ಕೊರೋನಾದಿಂದ SSLC ಪರೀಕ್ಷೆ ಬರೆಯುವುದೇ ಕಷ್ಟ ಎಂದು ಕೊಂಡಿದ್ದ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡದ ಬಂಟ್ವಾಳ ವಿದ್ಯಾರ್ಥಿಯೋರ್ವ ಮಾದರಿಯಾಗಿದ್ದಾನೆ.ತನ್ನ ಅಂಗವೈಕಲ್ಯಕ್ಕೆ ಸೆಡ್ಡು ಹೊಡೆದು ಪರೀಕ್ಷೆ ಬರೆದು ಶಿಕ್ಷಣ ಸಚಿವರೇ ಫಿದಾ ಆಗುವಂತೆ ಮಾಡಿದ್ದಾನೆ. ಬಂಟ್ವಾಳದ ಎಸ್ ವಿಎಸ್ ಪ್ರೌಢಶಾಲೆಯಲ್ಲಿ ಕೌಶಿಕ್ ಎಂಬ ವಿದ್ಯಾರ್ಥಿ ತನ್ನ ಕಾಲಿನಿಂದಲೇ ಪರೀಕ್ಷೆ ಬರೆದು ಎಲ್ಲರ ಪ್ರಶಂಸೆಗೆ ಪಾತ್ರನಾಗಿದ್ದಾನೆ.
ಎರಡೂ ಕೈಗಳು ಇಲ್ಲದ ಕೌಶಿಕ್ ಪರೀಕ್ಷಾ ಕೇಂದ್ರದಲ್ಲಿ ನೆಲದ ಮೇಲೆ ಕೂತು ಕಾಲಿನಲ್ಲೇ ಪರೀಕ್ಷೆ ಬರೆದಿದ್ದಾನೆ. ಈತನ ಫೋಟೋವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ತನ್ನ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಯಾರ ಸಹಾಯವೂ ಇಲ್ಲದೇ ಪರೀಕ್ಷೆ ಬರೆದ ಕೌಶಿಕ್ ಗೆ ಹೃದಯಪೂರ್ವಕ ಮೆಚ್ಚುಗೆ ಎಂದು ಟ್ವೀಟ್ ಮಾಡಿದ್ದಾರೆ. ಕಾಲಿನಲ್ಲೇ ಎಲ್ಲಾ ಕೆಲಸ,ಸಾಹಸಗಳನ್ನು ಮಾಡುವ ಕೌಶಿಕ್ ಪರೀಕ್ಷೆಗೂ ಯಾವುದೇ ಹೆದರಿಕೆ ಇಲ್ಲದೆ ಬಂದು ಬರೆದಿದ್ದು ಅಂಗವೈಕಲ್ಯತೆಗೆ ಸಡ್ಡು ಹೊಡೆದು ಇತರರಿಗೆ ಮಾದರಿಯಾಗಿದ್ದಾನೆ.

You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?