Featured
ಸಿಎಂ ಬಿಎಸ್ವೈಗೆ ಕೊರೊನಾ: ಪಶುಸಂಗೋಪನಾ ಸಚಿವ ಪ್ರಭುಚೌಹಾಣ್ರಿಂದ ಹೋಮಹವನ
![](https://risingkannada.com/wp-content/uploads/2020/08/Prabhu-chouan-homa-2.jpg)
ರೈಸಿಂಗ್ ಕನ್ನಡ:
ಬೀದರ್:
ಸಿಎಂ ಯಡಿಯೂರಪ್ಪ ಅವರಿಗೆ ಕೋವಿಡ್ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಆದಷ್ಟು ಬೇಗ ಗುಣಮುಖರಾಗಿ ಹೊರಬರಲಿ ಎಂದು ಹಾರೈಸಿ ಪಶುಸಂಗೋಪನಾ ಸಚಿವ ಪ್ರಭುಚೌಹಾಣ್ ತಮ್ಮ ಸ್ವಗ್ರಾಮ ತಾಂಡಾದಲ್ಲಿ ಹೋಮ ಹವನ ಮಾಡಿಸಿದ್ದಾರೆ.
ಸಿ.ಎಂ.ಯಡಿಯೂರಪ್ಪ ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಜನರ ಸೇವೆಗೆ ಯಡಿಯೂರಪ್ಪ ನಿಲ್ಲಲಿ ಎಂದು ಪಶುಸಂಗೋಪನಾ ಸಚಿವ ಪ್ರಭುಚೌಹಾಣ್ ತಮ್ಮ ಸ್ವಗ್ರಾಮ ಬೋಂತಿಯ ಘಮಸುಬಾಯಿ ತಾಂಡಾದಲ್ಲಿನ ಶ್ರೀ ಸಂತ ಸೇವಾಲಾಲ್ ಮಹಾರಾಜರು ಮತ್ತು ಇಚ್ಛಾ ಮಾತಾ ಜಗದಂಬಾ ದೇವಸ್ಥಾನದಲ್ಲಿ ಇಂದು ಹೋಮ, ಹವನ ಮತ್ತು ವಿಶೇಷ ಪೂಜೆ ನಡೆಸಿದರು.
ಕೋವಿಡ್-19 ಸೋಂಕು ದೇಶವನ್ನು ಪ್ರವೇಶಿಸಿದಾಗ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಕೂಡ ಲಾಕ್‌ಡೌನ್ ಕಟ್ಟುನಿಟ್ಟಿನ ಜಾರಿಗೆ ನಿರ್ದೇಶಿಸಿ, ರಾಜ್ಯದಲ್ಲಿ ಆರಂಭದಲ್ಲಿ ಸೋಂಕು ಹರಡದಂತೆ ಕ್ರಮವಹಿಸಿದರು. ಈ ಹಿನ್ನೆಲೆಯಲ್ಲಿ ಎದುರಾದ ಎಲ್ಲ ಸವಾಲುಗಳನ್ನು ಮಾನ್ಯ ಮುಖ್ಯಮಂತ್ರಿಗಳು, ಎಲ್ಲ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸೇರಿ ಸಮರ್ಥವಾಗಿ ಎದುರಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರು, ಅಧಿಕಾರ ಸ್ವೀಕರಿಸಿದ ದಿನಗಳಿಂದ ಹಿಡಿದು ಹತ್ತು ಹಲವಾರು ಸವಾಲುಗಳನ್ನು ಎದುರಿಸುತ್ತಲೇ ರಾಜ್ಯವನ್ನು ಪ್ರಗತಿಪಥದತ್ತ ಕೊಂಡೋಯ್ಯಲು ಶತಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬರದ ಛಾಯೆ ಆವರಿಸಿದಾಗ, ಆನಂತರ ಅತೀವೃಷ್ಟಿ ಬಂದಾಗಲೂ ಕುಗ್ಗದೇ, ರಾಜ್ಯದ ಜನರ ಹಿತ ಕಾಯಲು ಶ್ರಮ ವಹಿಸಿದ್ದಾರೆ. ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ಕೋವಿಡ್‌ನಿಂದ ಬೇಗ ಗುಣಮುಖರಾಗಬೇಕು ಎಂದು ಸಚಿವರಾದ ಪ್ರಭು ಚವ್ಹಾಣ್ ಅವರು ದೇವರಲ್ಲಿ ಪ್ರಾರ್ಥಿಸಿದ್ದೆನೆ ಎಂದು ಹೇಳಿದರು.
You may like
ಕರ್ನಾಟಕಕ್ಕೆ ಆಗಮಿಸಿದ ಕೇಂದ್ರ ಗೃಹಸಚಿವ
ಸ್ಮಾರ್ಟ್ ಸಿಟಿ ಯೋಜನೆ ಶೀಘ್ರವೇ ಪೂರ್ಣಗೊಳಿಸಲು ಮುಖ್ಯಮಂತ್ರಿ ಸೂಚನೆ
ಕೊನೆಗೂ ಗೆದ್ದು ಸಮಾಧಾನ ಪಟ್ಟ ಟೀಮ್ ಇಂಡಿಯಾ
ಗೃಹ ಸಚಿವ ಬಸವರಾಜ್ ಬೊಮ್ಮಾಯಿಗೆ ಕೊರೊನಾ ಸೋಂಕು ಧೃಢ
ಹೊಸ ದಾಖಲೆ ಬರೆದ ಕೊರೊನಾ: ಒಂದೇ ದಿನ 90 ಸಾವಿರ ಹೊಸ ಕೇಸ್:1,605 ಮಂದಿ ಬಲಿ
2021ರ ಮಧ್ಯಭಾಗದವರೆಗೆ ಸಾರ್ವತ್ರಿಕಾ ಕೊರೊನಾ ಲಸಿಕೆ ಅಲಭ್ಯ: ಡಬ್ಲ್ಯುಎಚ್ಒ