Featured
ಬುದ್ಧಿ ಜೀವಿಗಳು ಲದ್ದಿ ತಿನ್ನುತ್ತಿದ್ದಾರೆ..ಬೆಂಗಳೂರು ಗಲಭೆ ಬಳಿಕ ಬುದ್ಧಿಜೀವಿಗಳು ಮಾಯ-ಸಿ.ಟಿ.ರವಿ ವ್ಯಂಗ್ಯ..!
![](https://risingkannada.com/wp-content/uploads/2020/08/CT-RAVI.jpg)
ರೈಸಿಂಗ್ ಕನ್ನಡ:
ಚಿಕ್ಕಮಗಳೂರು:
ಬುದ್ದಿಜೀವಿಗಳು ಎಂದು ಕರೆಸಿಕೊಳ್ಳುವ ಕೆಲವರು ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಬಳಿಕ ಮಾಯವಾಗಿದ್ದಾರೆ ಎಂದು ಸಚಿವ್ ಸಿ.ಟಿ.ರವಿ. ವ್ಯಂಗ್ಯವಾಡಿದ್ದಾರೆ. ಡಿಜೆ ಹಳ್ಳಿಯಲ್ಲಿ ಶಾಸಕರು, ಪೊಲೀಸ್ ಠಾಣೆ, ಜನರ ಮನೆ ಮನೆಗೆ ನುಗ್ಗಿ ದಾಂಧಲೆ ನಡೆಸಿ, ಲೂಟಿ ಮಾಡಿ ಅಮಾನವೀಯ. ಇದು ಅಕ್ಷಮ್ಯ ಅಪರಾಧ. ದೇಶದಲ್ಲೇ ಏನೇ ಬೆಳವಣಿಗೆ ಆದರೂ ಪ್ರತಿಕ್ರಿಯೆ ನೀಡುವ ‘ಬುದ್ಧಿ ಜೀವಿ’ಗಳು ಈಗ ಎಲ್ಲಿದ್ದಾರೆ ಎಂದು ಸಚಿವ ಸಿಟಿ ರವಿ ಪ್ರಶ್ನಿಸಿದ್ದಾರೆ.
ಬುದ್ಧಿ ಜೀವಿಗಳು ಈಗ ಲದ್ದಿ ತಿನ್ನುತ್ತಿದ್ದಾರೆ. ದಲಿತ ಶಾಸಕನ ಮನೆ ಮೇಲಿನ ದೌರ್ಜನ್ಯಕ್ಕೆ ಯಾಕೆ ಸುಮ್ಮನಿದ್ದಾರೆ. ಎಲ್ಲಿದೆ ಅಹಿಂದ ಪ್ರೇಮ ಎಂದು ರವಿ ಟಾಂಗ್ ನೀಡಿದರು. ಇದರ ಮಧ್ಯೆ ಕಾಂಗ್ರೆಸ್ ಅನ್ನು ಕೂಡ ಟಾರ್ಗೆಟ್ ಮಾಡಿದ ಸಿ.ಟಿ,ರವಿ ಒಂದು ಹೇಳಿಕೆ ನೀಡಿದ್ದಕ್ಕೆ 6 ಬಾರಿ ಶಾಸಕರಾಗಿದ್ದ ರೋಷನ್ ಬೇಗ್ರನ್ನು ಕಾಂಗ್ರೆಸ್ ಅಮಾನತು ಮಾಡಿತ್ತು. 30 ವರ್ಷದ ರಾಜಕೀಯಕ್ಕೆ ಬೆಲೆ ಕೊಡಲಿಲ್ಲ. ಆದರೆ ಈಗ ತನ್ನದೇ ಶಾಸಕರಿಗೆ ಅದರಲ್ಲೂ ಹಿಂದುಳಿದ ವರ್ಗದ ಶಾಸಕರ ಮನೆ ಮೇಲೆ ದಾಳಿ ನಡೆದರೂ ಕಾಂಗ್ರೆಸ್ ಒಂದೇ ಒಂದು ಆ್ಯಕ್ಷನ್ ತೆಗೆದುಕೊಂಡಿಲ್ಲ. ಕಾಂಗ್ರೆಸ್ ವೋಟ್ ಬ್ಯಾಂಕ್ ಭದ್ರವಾಗಿ ಇರುವಂತೆ ನೋಡಿಕೊಳ್ಳುತ್ತಿದೆಯೇ ವಿನಃ ತನ್ನ ಶಾಸಕರನ್ನಲ್ಲ ಎಂದು ರವಿ ಟಾಂಗ್ ನೀಡಿದ್ರು.
ದೇಶದಲ್ಲಿ ಏನೇ ನಡೆದರೂ ಟಾರ್ಗೆಟ್ ಮಾತ್ರ ಹಿಂದೂಗಳು. ಆಗ ಕಾಂಗ್ರೆಸ್ ಹಿಂದೂಗಳನ್ನು ವಿರೋಧಿಸಿ ಎದ್ದುನಿಲ್ಲುತ್ತದೆ. ಈಗ ಬಾಯಿಗೆ ಬೀಗ ಹಾಕಿ ಕುಳಿತುಕೊಂಡಿದೆ ಎಂದು ರವಿ ಕಿಡಿಕಾರಿದ್ರು. ಬೆಂಗಳೂರಿನಲ್ಲಿ ಸಿಕ್ಕಸಿಕ್ಕವರ ಮೇಲೆ ಹಲ್ಲೆ ನಡೆದಿಲ್ಲ. ಪೊಲೀಸರು, ಹಿಂದೂಗಳು ಈಗ ಟಾರ್ಗೆಟ್ ಆಗುತ್ತಿದ್ದಾರೆ ಇವೆಲ್ಲವೂ ಪೂರ್ವ ನಿಯೋಜಿತ ಕೃತ್ಯ ಎಂದು ಚಿಕ್ಕಮಗಳೂರಿನಲ್ಲಿ ಸಚಿವ ಸಿ.ಟಿ. ರವಿ ತಿಳಿಸಿದರು.
You may like
ಸಿಟಿ ರವಿಗೆ ಜಾಡಿಸಿದ ಸಿದ್ದು : ಯಾರಿಗೆ ಹುಟ್ಟಿದ್ರು..? ಛೀ.. ಥೂ.. ಏನಿದು ಅಸಹ್ಯ..!? ನೀವೇನಂತೀರಿ.? ಕಾಮೆಂಟ್ ಮಾಡಿ..
ಸಿಎಂ ಬದಲಾವಣೆ ಸತ್ಯಕ್ಕೆ ದೂರವಾದ ಮಾತು – ಸಚಿವ ಸಿ.ಟಿ ರವಿ ಸ್ಪಷ್ಟನೆ! – ಹಾಗಾದ್ರೆ, ಸವದಿ ದೆಹಲಿಗೆ ಹೋಗಿದ್ದೇಕೆ?
SSLC ಪರೀಕ್ಷೆ ಮುನ್ನ ಟೀಚರ್ಗಳಿಗೆ ಟ್ರೇನಿಂಗ್- ವಿದ್ಯಾರ್ಥಿಗಳು ಬರೋ ಮುನ್ನ ಶಿಕ್ಷಕರು ಏನೇನು ಮಾಡ್ಬೇಕು..?
ಪುತ್ರನ ಜೊತೆ ಸಚಿವರ ಯೋಗಾಭ್ಯಾಸ- ವಿಶ್ವ ಯೋಗ ದಿನಾಚಾರಣೆ ಆಚರಿಸಿದ ಸಿ.ಟಿ. ರವಿ
ಟಿಪ್ಪು ಆಡಳಿತ ಇದ್ದಿದ್ರೆ, ಸಿದ್ದರಾಮಯ್ಯನೂ ಬದಲಾಗ್ತಿದ್ರು..! : ಸಿಟಿ ರವಿ ಗುದ್ದು..!
ByElection : ಸಿದ್ದರಾಮಯ್ಯ ಭೇಟಿ ಆಗಿದ್ದು ಯಾಕೆ ಶರತ್ ಬಚ್ಚೇಗೌಡ..? ಸಿ.ಟಿ. ರವಿ ಹೇಳಿದ್ದೇನು..?