Featured
ಮೆಡಿಕಲ್ ಕಿಟ್ ಖರೀದಿ ಅವ್ಯವಹಾರ ಸರ್ಕಾರ ಉತ್ತರ ಕೊಡಲಿ: ಕೈ ನಾಯಕರ ಆಗ್ರಹ
![](https://risingkannada.com/wp-content/uploads/2020/07/medical-kit-1.jpeg)
ರೈಸಿಂಗ್ ಕನ್ನಡ :
ಬೆಂಗಳೂರು :
ಮೆಡಿಕಲ್ ಕಿಟ್ ಖರೀದಿ ಅವ್ಯವಹಾರದ ಬಗ್ಗೆ ಸರ್ಕಾರ ಉತ್ತರ ಕೊಡಲಿ ಎಂದು ಕಾಂಗ್ರೆಸ್ ಮಾಜಿ ಸಚಿವರುಗಳಾದ ಹೆಚ್.ಕೆ.ಪಾಟೀಲ್ ಮತ್ತು ಯು.ಟಿ.ಖಾದರ್ ಹೇಳಿದ್ದಾರೆ.
ಮೆಡಿಕಲ್ ಕಿಟ್ ಖರೀದಿ ಅವ್ಯವಹಾರ ಭಾರೀ ಸದ್ದು ಮಾಡಿದೆ. ಈ ವಿಚಾರವಾಗಿ ಪ್ರತಿಪಕ್ಷ ಕಾಂಗ್ರೆಸ್ ಧ್ವನಿ ಎತ್ತಿದೆ. ನಾವು ಸರ್ಕಾರಕ್ಕೆ ಪ್ರಶ್ನೆ ಕೇಳಿದ್ದೆವು, ಕೊರೊನಾದಲ್ಲಿ ಮಾಡಿರುವ ಕರ್ಮಕಾಂಡ ಬಯಲಾಗುತ್ತಿದೆ. ವಿಚಾರ ರಾಜ್ಯದ ಜನರಿಗೆ ಎಲ್ಲವೂ ಈಗ ಅರ್ಥವಾಗುತ್ತಿದೆ.
![](https://risingkannada.com/wp-content/uploads/2020/07/h.k-patil-1024x680.jpg)
ಬಿಬಿಎಂಪಿ ಆಯುಕ್ತರ ವರ್ಗಾವಣೆ ಎಲ್ಲವೂ ಅನುಮಾನ ಮೂಡಿಸುತ್ತಿದೆ.ಅವರು ಜನರ ಬಳಿ ಹೋಗಿ ಮನವರಿಕೆ ಮಾಡಿಕೊಡ್ತಿದ್ರು.ಪ್ರಮಾಣಿಕ ಪ್ರಯತ್ನ ಮಾಡಿದ್ರು ಎಂದು ನನಗೆ ಅನ್ನಿಸಿದೆ.ಇದರ ಬಗ್ಗೆ ನಾನು ಹೆಚ್ಚೇನು ಮಾತನಾಡಲ್ಲಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕಾಂಗ್ರೆಸ್ನ ಮತ್ತೊಬ್ಬ ನಾಯಕ ಯು ಟಿ ಖಾದರ್, ಇದರಲ್ಲಿ ರಾಜಕೀಯ ಮಾಡುವುದಲ್ಲ , ನಾವು ಟೀಕೆ ಟಿಪ್ಪಣಿ ಮಾಡುತ್ತಿಲ್ಲ ಸರ್ಕಾರವನ್ನು ಉತ್ತಮವಾಗಿ ನೆಡೆಸುವುದಕ್ಕೆ ಒಂದು ಚುಚ್ಚುಮದ್ದು ಅಂತ ತಿಳಿದುಕೊಳ್ಳಿ. ಲೆಕ್ಕಾಚಾರವನ್ನು ಬರೆದುಕೊಟ್ಟದ್ದು ನಾವಲ್ಲ, ರಾಜ್ಯ ಸರ್ಕಾರ ತಾನೆ .
ಮಾಧ್ಯಮಗಳ ಸಹಾಯದಿಂದ ಮೆಡಿಕಲ್ ಕಿಟ್ ದಂಧೆ ಹೆಚ್ಚು ಬಯಲಾಗಿದೆ ತನಿಖೆ ಮಾಡುವುದಕ್ಕೆ ಸದನ ಸಮಿತಿ ರಚನೆ ಮಾಡಲಿ ಎಂದು ಆಗ್ರಹಿಸಿದ್ದಾರೆ.
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಕರ್ನಾಟಕದಲ್ಲಿ ಕೆಆರ್ ಕೆ ಸಂಸ್ಥೆಯಿಂದ ಪ್ರಭಾಸ್ ಆದಿಪುರುಷ್ ಬಿಡುಗಡೆ
ಕರ್ನಾಟಕದಲ್ಲಿ ಒಂದೇ ದಿನ 21,390 ಕೊರೋನಾ.! ಲಾಕ್ಡೌನ್ ಫಿಕ್ಸಾ.?