Featured
ಕೊರೊನಾ ಓಡಿಸಲು ಮಾಸ್ಟರ್ ಮೈಂಡ್- ಬುದ್ಧಿವಂತರಲ್ಲೇ ಬುದ್ಧಿವಂತ ಈ ರಿಂಗ್ ಮಾಸ್ಟರ್..!
ರೈಸಿಂಗ್ ಕನ್ನಡ:
ನಾಗರಾಜ್. Y. ಕೊಪ್ಪಳ:
ಇದು ಕೋವಿಡ್-19 ಕಾಲ. ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆ, ಸ್ಯಾನಿಟೈಸರ್ ಉಪಯೋಗಿಸುವುದು ಕೋವಿಡ್-19 ದೂರಮಾಡಲು ಇರುವ ಮಾರ್ಗ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಗೆ ಏನೊ ಮಾಡಲು ಹೋಗಿ ಮತ್ತೇನೊ ಮಾಡಿಕೊಂಡಿದ್ದಾರೆ ಕೊಪ್ಪಳದ ಉಪನೋಂದಣಾಧಿಕಾರಿ ರುದ್ರಮೂರ್ತಿ..!
ಹೌದು.. ಕೊಪ್ಪಳದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸಾಮಾಜಿಕ ಅಂತರಕ್ಕಾಗಿ ಎಡವಟ್ಟು ನಡೆದಿದೆ. ವಿವಿಧ ಕೆಲಸಗಳಿಗಾಗಿ ಕಚೇರಿಗೆ ಬರುವ ಸಾರ್ವಜನಿಕರು ಎರಡು ಗಜ ಇಲ್ಲವೇ ಮೂರು ಅಡಿ ಅಂತರ ಕಾಯ್ದುಕೊಳ್ಳಬೇಕು ಎಂದು ಎಲ್ಲೆಡೆ ಹೇಳಲಾಗುತ್ತದೆ. ಆದರೆ ಬಹುತೇಕ ಕಡೆ ಇದು ಪಾಲನೆಯಾಗದಿರುವುದು ಕಂಡು ಬರುವುದೇ ಜಾಸ್ತಿ. ಅದಕ್ಕಾಗಿ ಉಪನೋಂದಣಾಧಿಕಾರಿ ರುದ್ರಮೂರ್ತಿ ಅವರಿಗೆ ಯಾರು ಹೇಳಿದರೊ ಗೊತ್ತಿಲ್ಲ ಸುಮಾರು ಒಂದೂವರೆ ಅಡಿ ಎತ್ತರದ ಸಿಮೆಂಟ್ ರಿಂಗ್ ಮಾಡಿಸಿದ್ದಾರೆ..!
ಕಚೇರಿಯೊಳಗೆ ಎತ್ತರದ ಸಿಮೆಂಟ್ ರಿಂಗ್ ಹಾಕಿಸಿ ಜನರನ್ನು ಆ ರಿಂಗ್‌ನೊಳಗೆ ನಿಲ್ಲಲು ಸೂಚಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡ ಖುಷಿಯಲ್ಲಿ ಕೆಲಸ ಮಾಡಲಾಗುತ್ತಿತ್ತು. ಆದರೆ ವಯಸ್ಸಾದವರು, ಅಂಗವಿಕಲರು ಈ ರಿಂಗ್‌ನೊಳಗಡೆ ನಿಂತು ಆಯತಪ್ಪಿ ಬಿದ್ದು ಗಾಯಗೊಂಡದ್ದೇ ಹೆಚ್ಚು.
ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಅವೈಜ್ಞಾನಿಕ ಆಲೋಚನೆಗಳ ಅನುಷ್ಠಾನ ಎಷ್ಟರಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಪ್ರಶ್ನೆ
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?