Featured
ಚೀನಾದಲ್ಲಿ ಮತ್ತೊಂದು ಸೋಂಕು – ಮುಂಗೂಸಿ ಮಾಂಸ ತಿಂದ್ರೆ ಮಟಾಷ್..!

ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಕೊರೊನಾದಿಂದಲೇ ತತ್ತರಿಸಿರೋ ಚೀನಾಗೆ ಇದೀಗ ಮತ್ತೊಂದು ಸಾಂಕ್ರಾಮಿಕ ಆತಂಕ ಶುರುವಾಗಿದೆ. ಇದೀಗ ಬಬೂನಿಕ್ ಪ್ಲೇಗ್ ಅನ್ನೋ ರೋಗ ಜನರನ್ನ ಆತಂಕಕ್ಕೀಡುಮಾಡಿದೆ. ಈ ಖಾಯಿಲೆ ಚೀನಾ ವ್ಯಾಪ್ತಿಯಲ್ಲಿರೋ ಮಂಗೋಲಿಯಾದ ಬಯನ್ನೂರು ಎಂಬ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಬಬೂನಿಕ್ ಪ್ಲೇಗ್ ಶನಿವಾರ ವರದಿಯಾಗಿದ್ದು, ಸ್ಥಳೀಯ ಆಡಳಿತ 2020ರ ಕೊನೆವರೆಗೂ ಜನರು ಎಚ್ಚರಿಕೆಯಿಂದ ಇರಬೇಕು ಎಂದಿದೆ.

ಈ ರೋಗವು ಮಾನವರಿಂದ ಮಾವರಿಗೆ ಹರಡುವ ಅಪಾಯವಿದ್ದು, ಅಸ್ವಾಭಾವಿಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೇ ಕೂಡಲೇ ವರದಿ ಮಾಡಬೇಕು ಎಂದು ಸ್ಥಳೀಯ ಆಡಳಿತ ಹಾಗೂ ಆರೋಗ್ಯ ಅಧಿಕಾರಿಗಳು ಜನರಿಗೆ ತಿಳಿಸಿದ್ದಾರೆ. ಈಗಾಗಲೇ ಬಬೋನಿಕ್ ಪ್ಲೇಗ್ ಪ್ರಕರಣಗಳು ಪರೀಕ್ಷೆಯಿಂದ ದೃಢಪಟ್ಟಿವೆಯಂತೆ. 27 ಮತ್ತು 17 ವರ್ಷದ ಸಹೋದರರಿಬ್ಬರು ಮುಂಗೂಸಿ ಹಸಿ ಮಾಂಸವನ್ನ ತಿಂದಿರೋದೆ ಇದಕ್ಕೆ ಕಾರಣ ಎನ್ನಲಾಗಿದೆ. ಆದ್ದರಿಂದ ಯಾರೂ ಮುಂಗೂಸಿ ಮಾಂಸ ತಿನ್ನಬಾರದೆಂದು ಎಚ್ಚರಿ ನೀಡಲಾಗಿದೆ.
ಬಬೂನಿಕ್ ಪ್ಲೇಗ್ ಬ್ಯಾಕ್ಟೀರಿಯಾದಿಂದ ಹರಡುವ ರೋಗವಾಗಿದ್ದು, ಇದು ಮುಂಗೂಸಿಯಂತಹ ಪ್ರಾಣಿಗಳ ಮೇಲೆ ಉತ್ಪತ್ಥಿಯಾಗುವ ಚಿಗಟೆಗಳಿಂದ ಹರಡುತ್ತಂತೆ. ಇದೇ ಕಾರಣಕ್ಕಾಗಿ ಯಾರೂ ಕೂಡ ಮುಂಗೂಸಿ ಮಾಂಸವನ್ನೇ ಸೇವಿಸಬಾರದು ಎಂದು ಎಚ್ಚರಿಸಲಾಗಿದೆ. ಈ ಸಹೋದರರ ಸಂಪರ್ಕದಲ್ಲಿದ್ದ 146 ಮಂದಿಯನ್ನ ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 24 ಗಂಟೆಗಳಲ್ಲಿ ಈ ಸೋಂಕು ಕಾಣಿಸಿಕೊಂಡವರಿಗೆ ಚಿಕಿತ್ಸೆ ಸಿಗದಿದ್ರೆ, ಮೃತ್ಯು ಗ್ಯಾರೆಂಟಿಯಂತೆ. ಒಟ್ಟಿನಲ್ಲಿ ಈ ಚೀನಿಯರು ಮಾಡು ಯಡವಟ್ಟುಗಳಿಂದಾಗಿ ಇಡೀ ವಿಶ್ವವೇ ತಲೆಕೆಡಿಸಿಕೊಳ್ಳಬೇಕಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?