Featured
ರಾಯರ ದರ್ಶನಕ್ಕೆ ಸರಕಾರದಿಂದ ಅನುಮತಿ- ಜುಲೈ 2ರಿಂದ ಭಕ್ತರಿಗೆ ಷರತ್ತುಬದ್ಧ ಎಂಟ್ರಿ..!

ರೈಸಿಂಗ್ ಕನ್ನಡ:
ಮಂತ್ರಾಲಯ:
ಲಾಕ್ಡೌನ್ನಿಂದ ಜನಸಾಮಾನ್ಯರ ಬದುಕು ಮೂರಾಬಟ್ಟೆಯಾಗಿದೆ. ಈ ಮಧ್ಯೆ ಧಾರ್ಮಿಕ ಕೇಂದ್ರಗಳು ಕೂಡ ಬಾಗಿಲು ಮುಚ್ಚಿಕೊಂಡಿದ್ದವು. ಪ್ರತಿದಿನ ಸಾವಿರಾರು ಭಕ್ತರು ಸೇರುವ ಪುಣ್ಯಸ್ಥಳ ಮಂತ್ರಾಲಯ ಕೂಡ ಕಳೆದ 3 ತಿಂಗಳುಗಳಿಂದ ಬಂದ್ ಆಗಿತ್ತು. ಗುರುರಾಯರ ದರ್ಶನಕ್ಕೆ ಅವಕಾಶವಿರಲಿಲ್ಲ.
ದೇಶದೆಲ್ಲೆಡೆ ನಿಧಾನವಾಗಿ ಧಾರ್ಮಿಕ ಕೇಂದ್ರಗಳು ತೆರೆದುಕೊಳ್ಳುತ್ತಿವೆ. ಆಂಧ್ರಪ್ರದೇಶ ಸರಕಾರ ಶ್ರೀಮಠವನ್ನು ತೆರೆಯಲು ಷರತ್ತು ಬದ್ಧ ಅನುಮತಿ ನೀಡಿದೆ. ಈ ಹಿನ್ನಲೆಯಲ್ಲಿ ಮಂತ್ರಾಲಯದ ರಾಯರ ಮಠ ಜುಲೈ 2ರಿಂದ ಭಕ್ತರಿಗಾಗಿ ತೆರೆಯಲಿದೆ. ಮಠಕ್ಕೆ ಬರುವ ಭಕ್ತರಿಗೆ ಹಲವು ನಿಬಂಧನೆಗಳಿವೆ. ಅದನ್ನು ಪಾಲಿಸಿದರೆ ಮಾತ್ರ ಮಠದಲ್ಲಿ ರಾಯರ ದರ್ಶನ ಪಡೆಯಬಹುದಾಗಿದೆ.
ದರ್ಶನಕ್ಕೆ ಬರುವ ಭಕ್ತರ ಗಮನಕ್ಕೆ
- ಮಠಕ್ಕೆ ಬರುವ ಭಕ್ತರು ಆಧಾರ್ ಕಾರ್ಡ್, ಮೊಬೈಲ್ ನಂಬರ್ ಕೊಡುವುದು ಕಡ್ಡಾಯ.
- ಕಂಟೋನ್ಮೆಂಟ್ ಝೋನ್ ನಿಂದ ಬಂದವರಿಗೆ ಶ್ರೀಮಠದಲ್ಲಿ ದರ್ಶನಕ್ಕೆ ಅವಕಾಶ ಇಲ್ಲ.
- ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲನೆ ಕಡ್ಡಾಯ.
- ದರ್ಶನಕ್ಕೆ ಬರುವರಿಗೆ ಶ್ರೀಮಠದ ಹೊರಗಡೆ ಕೈ- ಕಾಲು ತೊಳೆದುಕೊಳ್ಳಲು ವ್ಯವಸ್ಥೆ.
- ಥರ್ಮಲ್ ಸ್ಕ್ಯಾನಿಂಗ್ ಮಾಡಿದ ಬಳಿಕವೇ ಭಕ್ತರಿಗೆ ದರ್ಶನಕ್ಕೆ ಅನುವು.
- 65 ವರ್ಷದ ಮೇಲ್ಪಟ್ಟವರಿಗೆ, ಗರ್ಭಿಣಿಯರಿಗೆ ದರ್ಶನಕ್ಕೆ ಅವಕಾಶ ಇಲ್ಲ.
- ವಯೋಸಂಬಂಧಿ ಕಾಯಿಲೆ ಇರುವ ಭಕ್ತರಿಗೆ ದರ್ಶನ ಭಾಗ್ಯ ಸಿಗಲ್ಲ.
- ಪ್ರಾಕಾರದಲ್ಲಿ ಪ್ರದಕ್ಷಿಣೆ, ಉರುಳುಸೇವೆ ಇತ್ಯಾದಿಗೆ ಅವಕಾಶ ಇಲ್ಲ.
- ತೀರ್ಥ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ ಇಲ್ಲ.
- ಶ್ರೀಮಠದಲ್ಲಿ ಶ್ರೀಗಳಿಂದ ಮುದ್ರಾ ಪ್ರದಾನ ಹಾಗೂ ಶ್ರೀಗಳ ಪಾದಪೂಜೆ ಇರುವುದಿಲ್ಲ.
- ಬೃಂದಾವನ ದರ್ಶನಕ್ಕೆ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮತ್ತು ಸಂಜೆ 4 ಗಂಟೆಯಿಂದ 6 ಗಂಟೆವರೆಗೆ ಮಾತ್ರ ಅವಕಾಶ.

You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?