Connect with us

Featured

ಮಂಗಳಗೌರಿ ವ್ರತ ಮಾಡಿ ಅಲ್ಪ ಆಯುಷ್ಯ ಗಂಡನನ್ನು ಬದುಕಿಸಿದಳು ಪತಿವ್ರತೆ

ಡಾ.ಬಸವರಾಜ್ ಗುರೂಜಿ,
ವೈದಿಕ ಜ್ಯೋತಿಷಿ ಮತ್ತು ವಾಸ್ತು ತಜ್ಞರು

ಶ್ರಾವಣ ಮಾಸದ ಸುಮಾರು 5 ಮತ್ತು ನಾಲ್ಕು ಮಂಗಳವಾರಗಳಲ್ಲಿ ಈ ಮಂಗಳಗೌರಿ ವ್ರತವನ್ನು ಆಚರಣೆ ಮಾಡುತ್ತಾರೆ. ಮದುವೆಯಾದ ನಂತರ ಮೊದಲಿಗೆ ತಾಯಿ ಮನೆಯಲ್ಲಿ ಈ ವ್ರತವನ್ನು ಮಾಡುತ್ತಾರೆ. ತದ ನಂತರ ಗಂಡನ ಮನೆಯಲ್ಲಿ ಐದು ವರ್ಷಗಳ ಕಾಲ ಈ ವ್ರತವನ್ನು ಮಾಡಬೇಕು. 5 ವರ್ಷಗಳ ನಂತರ ಉದ್ಯಾಪನ ಮಾಡಬೇಕು.

Advertisement


ಮದುವೆಯಾದ ಹೊಸತರಲ್ಲಿ ಏನು ಸಂತೋಷ ಕಂಡು ಬಂದಿರುತ್ತದೆ, ಅದು ಜೀವನದ ಉದ್ದಕ್ಕೂ ಇರಬೇಕು ಎಂದು ಕೋರಿ ಮಂಗಳ ಗೌರಿ ವ್ರತವನ್ನು ಆಚರಿಸಲಾಗುತ್ತದೆ. ಪರಮೇಶ್ವರ ಜೊತೆಗೆಯಾಗಿ ಗೌರಿಗೆ ಪೂಜೆ ಸಲ್ಲಿಸಲಾಗುತ್ತದೆ. ಇಷ್ಠಾರ್ಥ ಸಿದ್ಧಿಗಾಗಿ ಮಂಗಳಗೌರಿ ಪೂಜೆ ಮಾಡಲಾಗುತ್ತದೆ. ಈ ಪೂಜೆಯಿಂದ ಸರ್ವ ಸಮಸ್ಯೆಗಳು ಪರಿಹಾರವಾಗಲಿದೆ ಎಂದು ಹೇಳಲಾಗುತ್ತದೆ.


ಮಂಗಳಗೌರಿ ವ್ರತದ ಪೂಜೆ ವಿಧಾನ ಹೇಗೆ?

ಮಂಗಳಗೌರಿ ವ್ರತದ ದಿನದಂದು ಮಂಗಳ ಸ್ನಾನ ಮುಗಿಸಿ, ದೇವರ ಕೋಣೆಯಲ್ಲಿ ಚೆನ್ನಾಗಿ ಅಲಂಕರಿಸಿದ ಸ್ಥಳದಲ್ಲಿ ಅಕ್ಕಿಯ ಮೇಲೆ ಕಳಶವನ್ನಿಟ್ಟು, ಮಂಗಳ ಗೌರಿ ಪ್ರತಿಮೆಯನ್ನಿಟ್ಟು ಪೂಜಿಸಬೇಕು. ಆ ಮಂಗಳಗೌರಿಯ ಪೂಜೆಯ ವೇಳೆಗೆ ಶಿವ ಪಾರ್ವತಿ ಅಷ್ಟೋತ್ತರಗಳನ್ನು ಹೇಳಿ, ಪುಷ್ಪ, ಪತ್ರ ಮತ್ತು ಅರಿಶಿನ ಕುಂಕುಮದಿಂದ ಅರ್ಚನೆ ಮಾಡಬೇಕು. ಅದರಲ್ಲೂ ಪ್ರಧಾನವಾಗಿ ಅರಿಶಿನ ಕುಂಕುಮ ಅರ್ಚನೆ ದೇವಿಗೆ ಶ್ರೇಷ್ಠವಾಗಿರುತ್ತದೆ.


ಮಂಗಳಗೌರಿಗೆ ಯಾವ ನೈವೇದ್ಯ ಶ್ರೇಷ್ಠ?


ಮೊಸರನ್ನ ದೇವಿಗೆ ಶ್ರೇಷ್ಠವಾಗಿರುತ್ತದೆ. ಹಾಲಿನ ಅನ್ನ ನೈವೇದ್ಯವನ್ನು ಅರ್ಪಿಸಬೇಕು. ತದ ನಂತರ ಮನೆ ಮಂದಿಯಲ್ಲೇ ಒಟ್ಟಿಗೆ ಸೇರಿ ಈ ಪ್ರಸಾದವನ್ನು ಸೇವಿಸಬೇಕು.

Advertisement

ಮಂಗಳಗೌರಿ ಪೂಜೆಯಲ್ಲಿ ಬಾಗಿನ ಕೊಡುವುದರ ಮಹತ್ವವೇನು?


ಮುತ್ತೈದೆಯರನ್ನು ಮನೆಗೆ ಕರೆದು ಅವರಿಗೆ ಬಾಗಿನ ಕೊಡಬೇಕು. ಗೌರಿಯ ಪ್ರತೀಕವಾಗಿರುವಂತಹ ಮುತೈದೆಯರಿಗೆ ಪೂಜೆಯನ್ನು ಸಲ್ಲಿಸಿ, ಅವರ ಪಾದ ತೊಳೆದು ತಲೆಗೆ ಹೂವು ಮುಡಿಸಿ, ಅರಿಶಿನ ಕುಂಕುಮ ನೀಡಿ, ಹುಡಿಯನ್ನು ತುಂಬಿಸಿ ಆರಾಧಿಸಿ, ಗೌರಿಯ ಪೂರ್ಣವಾದ ಅನುಗ್ರಹ ನಮಗೆ ಆಗಲಿ ಎಂದು ಅವರ ಕೈಯಿಂದ ಮಂತ್ರಾಕ್ಷತೆಯನ್ನು ಸೆರಗಿನ ಮೂಲಕ ಹಿಡಿದು ಭಗವಂತನನ್ನು ಪ್ರಾರ್ಥಿಸಿ ವ್ರತದ ಆಚರಣೆಯನ್ನು ಮುಕ್ತಾಯ ಮಾಡಬೇಕು.


ಮಂಗಳ ಗೌರಿ ಪೂಜೆಗಳ ಫಲಗಳೇನು?

ಬದುಕಿನಲ್ಲಿ ಸಾಮರಸ್ಯ, ಆಯಸ್ಸು, ಆರೋಗ್ಯ, ವಿದ್ಯೆ ಮತ್ತು ಯಾವುದೇ ರೀತಿಯ ದೋಷಗಳನ್ನು ಪರಿಹರಿಸುವಂತಹ ಶಕ್ತಿ ಈ ವ್ರತಕ್ಕೆ ಇದೆ.


ಮಂಗಳಗೌರಿ ಪೂಜೆಯ ಹಿಂದಿರುವ ಪೌರಾಣಿಕ ಹಿನ್ನಲೆ ಏನು?

ಧರ್ಮಪಾಲ ಎಂಬ ಒಬ್ಬ ವೈಶ್ಯನಿಗೆ ಬಹಳ ಕಾಲದ ನಂತರ ಮದುವೆಯಾಗುತ್ತದೆ. ಆದರೆ, ಮದುವೆಯಾದ ನಂತರ ಮಕ್ಕಳು ಆಗಲಿಲ್ಲ ಎಂಬ ಕೊರಗು ಆತನನ್ನು ಕಾಡುತ್ತಾ ಇರುತ್ತದೆ. ವಿಶೇಷವಾಗಿ ಭಗವಂತನನ್ನು ಪ್ರಾರ್ಥನೆ ಮಾಡಿ ಪೂಜಿಸಿದ ನಂತರವೂ ಫಲ ಸಿಗದೇ ಇದ್ದಾಗ, ಯಾತ್ರೆಗೆ ಹೊರಡುತ್ತಾನೆ, ಯಾತ್ರೆಯ ಮದ್ಯದಲ್ಲಿ ಅನೇಕ ಕ್ಷೇತ್ರಗಳಿಗೆ ತೆರಳಿ ಸಾಧುಗಳಿಗೆ ಸೇವೆ ಸಲ್ಲಿಸುತ್ತಾನೆ.


ಆಗ ಅಲ್ಲಿರುವ ಸಾಧುಗಳು ಅವನನ್ನು ಅನುಗ್ರಹಿಸಿ ಹೇಳುತ್ತಾರೆ, ನಿನ್ನ ಈ ವ್ರತ ಆಚರಣೆ ಮತ್ತು ನಿಷ್ಠೆಯಿಂದ ನಾವು ಸಂತೃಷ್ಟರಾಗಿದ್ದೇವೆ. ನಿನ್ನ ಮನಸ್ಸಿನಲ್ಲಿ ಏನಾದರೂ ಕೊರಗು ಇದ್ದರೆ ಹೇಳು ಎಂದು ಕೇಳುತ್ತಾರೆ. ಆಗ ತನಗೆ ಮಕ್ಕಳಾಗಿಲ್ಲ ಎಂಬ ಸಂಗತಿಯನ್ನು ಸಾಧುಗಳಿಗೆ ಹೇಳುತ್ತಾನೆ. ಆಗ ಅವನ ಮುಖಛರ್ಯೆ ಮತ್ತು ಹಿನ್ನಲೆಯನ್ನು ಗಮನಿಸಿದ ಸಾಧುಗಳು, ಮಕ್ಕಳು ಆಗುವಂತಹ ಪರಿಸ್ಥಿತಿ ಇಲ್ಲ, ಆದರೂ ನಮ್ಮ ತಪೋ ಬಲದಿಂದ ಹೀಗೊಂದು ಆಯ್ಕೆಯನ್ನು ನೀಡಬಹುದು.


ಒಂದು ಅಲ್ಪ ಆಯುಷ್ಯನಾದಂತಹ ಮಗ ಅಥವಾ ಕಣ್ಣಿಲ್ಲದಂತ ಮಗ ಹುಟ್ಟುತ್ತಾನೆ. ಆದರೆ ನಿನಗೆ ಯಾವುದು ಬೇಕು ಅದನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಕೇಳುತ್ತಾರೆ. ಕುರುಡುನಾದಂತಹ ಮಗನನ್ನು ಕಟ್ಟಿಕೊಂಡು ತಾನು ಯಾವ ಸುಖವನ್ನು ಪಡೆಯಲು ಸಾಧ್ಯವಿಲ್ಲ ಎಂದು ಭಾವಿಸಿ ಅಲ್ಪಆಯುಷ್ಯ ಮಗನೇ ಸಾಕು ಎಂದು ಯೋಚಿಸಿ, ಅಲ್ಪಆಯುಷ್ಯ ಮಗನನ್ನೇ ಕೇಳುತ್ತಾನೆ.

Advertisement

ಸಾಧುಗಳ ಅನುಗ್ರಹದಿಂದ ಆತನಿಗೆ ಅಲ್ಪಆಯುಷ್ಯ ಮಗ ಜನಿಸುತ್ತಾನೆ. ಮಗ 16 ವರ್ಷಕ್ಕೆ ಬೆಳೆಯುವ ತನಕವೂ, ತಂದೆಯಾಗಿ ಮಗನ ಏನು ಸಂತೋಷವನ್ನು ಪಡೆಯಬೇಕೋ ಅದೆಲ್ಲವನ್ನು ಪಡೆಯುತ್ತಾನೆ. ಕಾಲ ಕಳೆಯುತ್ತಿದ್ದಂತೆ, ಮಗನ ಅಲ್ಪಆಯುಷ್ಯದ ನೆನಪಾಗಿ ದುಃಖ ಕಾಡಲು ಶುರುವಾಗುತ್ತದೆ. ಕೊನೆಗೆ, ಈ ಹೊತ್ತಿಗೆ ಇವನಿಗೆ ಮದುವೆ ಮಾಡಿದರೆ ಸರಿ ಎಂದು ಯೋಚಿಸಿ, 18 ವಯಸ್ಸು ದಾಟುವುದರಲ್ಲೇ ಯೋಗ್ಯವಾದಂತಹ ಹುಡುಗಿಯನ್ನ ನೋಡಿ ಮದುವೆ ಮಾಡಿಸುತ್ತಾನೆ.


ಮದುವೆಯಾಗುವ ಸಂದರ್ಭದಲ್ಲಿ ಹುಡುಗಿಗೆ ಈ ವಿಚಾರವನ್ನು ಮೊದಲೇ ತಿಳಿಸಿರುತ್ತಾರೆ. ಮದುವೆಯಾದ ನಂತರ ಮಗನ ಪತ್ನಿಯು ಕುಲದೈವರಾದಂತಹ ಪಾರ್ವತಿ ಪರಮೇಶ್ವರನಲ್ಲಿ ಗಂಡನ ಆಯುಷ್ಯದ ಪ್ರಾರ್ಥಿಸುತ್ತಾ 5 ವರ್ಷಗಳ ಕಾಲ ನಿರಂತರ ಪೂಜೆ ಸಲ್ಲಿಸುತ್ತಾಳೆ. ಇನ್ನೇನು ಗಂಡನ ಪ್ರಾಣ ಹೋಗುವ ಕಾಲದಲ್ಲಿ ಆಕೆಗೆ ಭಗವಂತನ ದರ್ಶನ ಆಗುತ್ತದೆ.


ನಿನ್ನ ಗಂಡನ ಆಯುಸ್ಸು ಮುಗಿದಿದೆ ಎಂದು ಭಗವಂತ ಹೇಳುವಾಗ, ನಾನು ಇಷ್ಟು ವರ್ಷ ಮಾಡಿದ ವ್ರತ, ಪೂಜೆ, ಧರ್ಮ ನಾನು ಇಟ್ಟ ಶ್ರದ್ಧೆ ಸತ್ಯವಾಗಿದ್ದರೆ, ನನ್ನ ಗಂಡನಿಗೆ ಇನ್ನಷ್ಟು ಆಯುಸ್ಸನ್ನು ಕೊಡಬೇಕು. ನಿನ್ನನ್ನು ನಂಬಿದವರನ್ನು ಯಾವುತ್ತು ಕೈಬಿಡಿಲ್ಲ ಎಂಬ ಮಾತನ್ನು ನಡೆಸಿಕೊಡಬೇಕು ಎಂದು ಕೇಳಿಕೊಂಡು, ಬೇಕಾದರೆ, ತನ್ನ ಆಯುಸ್ಸನ್ನು ತಾನು ದಾನ ಮಾಡಲಿಕ್ಕೆ ಸಿದ್ಧನಿದ್ದೇನೆ ಎಂದು ಅವಳು ಹೇಳಿ ಭಂಗವಂತನಲ್ಲಿ ಅಂಗಲಾಚುತ್ತಾಳೆ. ಆಕೆಯ ಬೇಡಿಕೆಗೆ ಒಲಿದ ಭಗವಂತನು ಗಂಡನ ಆಯುಸ್ಸನ್ನು ವೃದ್ಧಿಗೊಳಿಸುತ್ತಾನೆ.

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ