Featured
#ByElection : ಮಂಡ್ಯದಲ್ಲಿ ಸಂಸದೆ ಸುಮಲತಾ ಬೆಂಬಲ ಯಾರಿಗೆ..?

ಮಂಡ್ಯ : ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಜಯ ಸಾಧಿಸಿದ ನಟಿ, ಸಂಸದೆ ಸುಮಲತಾ, ಮುಂಬರುವ ಉಪ ಚುನಾವಣೆಯಲ್ಲಿ ಯಾರಿಗೆ ಸಪೋರ್ಟ್ ಮಾಡ್ತಾರೆ..? ಸದ್ಯ ಹೀಗೊಂದು ಚರ್ಚೆ ಇಡೀ ರಾಜಕೀಯ ವಲಯದಲ್ಲಿ ಶುರುವಾಗಿದೆ.
ಯಾಕಂದ್ರೆ, ಮಂಡ್ಯ ಲೋಕಸಭಾ ಚುನಾವಣೆ ಸಮಯದಲ್ಲಿ ಸುಮಲತಾಗೆ ಬಿಜೆಪಿ ಬಹಿರಂಗವಾಗಿಯೇ ಬೆಂಬಲ ನೀಡಿತ್ತು. ಅಭ್ಯರ್ಥಿಯನ್ನೂ ಹಾಕಿರಲಿಲ್ಲ. ಅದರಂತೆ ಕಾಂಗ್ರೆಸ್ನ ಬಹುತೇಕ ನಾಯಕರು, ತೆರೆಮರೆಯಲ್ಲಿ ಬೆಂಬಲ ನೀಡಿದ್ರು.
ಭಾನುವಾರಷ್ಟೇ ಸಭೆ ನಡೆಸಿದ್ದ ಕಾಂಗ್ರೆಸ್ ಮಾಜಿ ಶಾಸಕ, ಕೆ.ಆರ್. ಪೇಟೆ ಕಾಂಗ್ರೆಸ್ ಮುಖಂಡ ಕೆ.ಬಿ. ಚಂದ್ರಶೇಖರ್ ಮಾತ್ನಾಡಿ, ಸುಮಲತಾ ಗೆಲುವಿಗೆ ಕಾಂಗ್ರೆಸ್ ನಾಯಕರೇ ಕಾರಣ. ಶೇಕಡಾ 90ರಷ್ಟು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಸುಮಲತಾ ಬೆಂಬಲಿಸಿದ್ವಿ ಎಂದು ಸೀಕ್ರೆಟ್ ಬಿಚ್ಚಿಟ್ಟಿದ್ದರು.
ಇದೀಗ, ಕೆ.ಆರ್. ಪೇಟೆಗೆ ಬೈ ಎಲೆಕ್ಷನ್ ಬಂದಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಜೊತೆಗೆ ಬಿಜೆಪಿಯೂ ಅಭ್ಯರ್ಥಿಯನ್ನ ಹಾಕಲಿದೆ. ಎಲ್ಲರಿಗೂ ಪ್ರತಿಷ್ಠೆ. ಹೀಗಾಗಿ ಸಂಸದೆ ಸುಮಲತಾ ಬೆಂಬಲ ಯಾರಿಗೆ ಅನ್ನೋದು ಕುತೂಹಲ ಮೂಡಿಸಿದೆ.
ಈ ಬಗ್ಗೆ ಸುಮತಲಾ ಅಥವಾ ಬೆಂಬಲಿಗರು ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಈ ಹಿಂದೆ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಬಂದಾಗ, ಸುಮಲತಗೆ ಮತ ನೀಡುವಂತೆ ಹೇಳಿದ್ರು. ಇದೀಗ, ಸುಮಲತಾ ಬೆಂಬಲ ಯಾರಿಗೆ..? ಕಾಂಗ್ರೆಸ್ಗಾ..? ಬಿಜೆಪಿಗಾ..? ಕಾದುನೋಡೋಣ..
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















