Featured
ಸಿಯು ಸೂನ್ ಬಿಡಗಡೆಗೆ ಮಹೂರ್ತ ಫಿಕ್ಸ್- ಅಮೆಜಾನ್ ಪ್ರೈಂನಲ್ಲಿ ಮತ್ತೊಂದು ರೋಚಕ ಚಿತ್ರ

ರೈಸಿಂಗ್ ಕನ್ನಡ:
ಬೆಂಗಳೂರು:
ಅದಿತಿ ರಾವ್ ಹೈದರಿ ಮತ್ತು ಜಯಸೂರ್ಯರ ಸುಫಿಯುಂ ಸುಜಾತವುಂನ ಯಶಸ್ವಿ ವಿಶ್ವ ಪ್ರದರ್ಶನದ ನಂತರ, ಅಮೆಜಾನ್ ಪ್ರೈಂ ವೀಡಿಯೊ ಇಂದು ಮಲಯಾಳಿ ಚಲನಚಿತ್ರ ಸಿಯು ಸೂನ್ನ ನೇರ-ಸೇವೆಯ ವಿಶ್ವ ಪ್ರದರ್ಶನವನ್ನು ಪ್ರಕಟಿಸಿದೆ. ಮಹೇಶ್ ನಾರಾಯಣ್ ನಿರ್ದೇಶಿಸಿದ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಸೂಪರ್ ಸ್ಟಾರ್ ಫಹಾದ್, ರೋಷನ್ ಮ್ಯಾಥ್ಯು ಮತ್ತು ದರ್ಶನಾ ರಾಜೇಂದ್ರನ್ ನಟಿಸಿದ್ದಾರೆ. ಸಿಯು ಸೂನ್ ಕೇರಳದ ಒಬ್ಬ ಸಾಫ್ಟ್‍ವೇರ್ ಇಂಜಿನಿಯರ್ ಅವರ ಆಕರ್ಷಕ ಕಥೆಯಾಗಿದ್ದು, ಇದರಲ್ಲಿ ಅವರು ತಮ್ಮ ಕುಟುಂಬದ ಆಸೆಯಂತೆ ತನ್ನ ದುಬೈ ಮೂಲದ ಸೋದರರಿಗೆ ಅವರ ಕಾಣೆಯಾದ ಮದುಮಗಳನ್ನು ಹುಡುಕಲು ಸಹಾಯ ಮಾಡುತ್ತಾರೆ. ಕಾಣೆಯಾಗುವ ಮುನ್ನ ವಧುವು ಒಂದು ಆತ್ಮಹತ್ಯೆಯ ವೀಡಿಯೊ ಸಂದೇಶವನ್ನು ಕಳಿಸಿರುತ್ತಾರೆ. ಲಾಕ್‍ಡೌನ್ ಅವಧಿಯಲ್ಲಿ ಒಂದು ನಿಯಂತ್ರಿತ ಮತ್ತು ನಿರ್ಬಂಧಿತ ಪರಿಸರದಲ್ಲಿ ಒಂದು ವಿದೇಶದಲ್ಲಿ ಚಿತ್ರೀಕರಿಸಲಾಗಿರುವುದು ಈ ಚಿತ್ರದ ವಿಶೇಷತೆಯಾಗಿದೆ. ಸೆಪ್ಟಂಬರ್1 ರಂದು ಅಮೆಜಾನ್ ಪ್ರೈಂನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.
ಮಹೇಶ್ ರೊಂದಿಗೆ ಕೆಲಸ ಮಾಡುವುದು ಯಾವಾಗಲೂ ಒಂದು ಸ್ಫೂರ್ತಿದಾಯಕ ಅನುಭವವಾಗಿದೆ. ನಮ್ಮ ಹಿಂದಿನ ಬ್ಲಾಕ್ ಬಸ್ಟರ್ ಟೇಕ್ ಆಫ್‍ನಲ್ಲಿ ನಾವು ಅದ್ಭುತವಾದ ಅನುಭವ ಪಡೆದಿದ್ದೆವು. ಇಡೀ ಚಿತ್ರವನ್ನು ಲಾಕ್‍ಡೌನ್ ಅವಧಿಯಲ್ಲಿ ಚಿತ್ರೀಕರಿಸಲಾಗಿದ್ದು, ಇಂತಹ ಸಮಯದಲ್ಲಿಯೂ ನಮ್ಮ ವೀಕ್ಷಕರಿಗೆ ಆಕರ್ಷಕ ವಿಷಯಗಳನ್ನು ತಂದು ಅವರಿಗೆ ಮನರಂಜನೆ ನೀಡಲು ನಮಗೆ ಖುಷಿಯಾಗಿದೆ, ಮತ್ತು ವಿಶ್ವಾದ್ಯಂತ ನಮ್ಮ ಅಭಿಮಾನಿಗಳು ಈ ಚಿತ್ರವನ್ನು ಆನಂದಿಸಿ, ಅದನ್ನು ಪ್ರೀತಿಸುತ್ತಾರೆ ಎಂದು ಆಶಿಸುತ್ತೇನೆ.
- ಫಹಾದ್ ಫಾಸಿಲ್, ನಟ ಮತ್ತು ನಿರ್ಮಾಪಕ

You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















