Featured
ಮೇಲುಕೋಟೆಗೆ ಆಗಮಿಸಿದ ಮಧ್ಯಪ್ರದೇಶ ಸಿಎಂ – ಆತ್ಮೀಯವಾಗಿ ಬರಮಾಡಿಕೊಂಡ ಸಚಿವ ಡಾ. ನಾರಾಯಣ ಗೌಡ
ರೈಸಿಂಗ್ ಕನ್ನಡ :
ಮಂಡ್ಯ :
ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಕರ್ನಾಟಕ ಪ್ರವಾಸದಲ್ಲಿದ್ದಾರೆ. ಶಿವರಾಜ್ ಸಿಂಗ್ ಚೌಹಾಣ್ ಅವರು ಶುಕ್ರವಾರದ ಶುಭದಿನದಲ್ಲಿ ಮೇಲುಕೋಟೆಗೆ ಆಗಮಿಸಿದ್ರು. ಮೇಲುಕೋಟೆ ಚೆಲುವರಾಯ ಸ್ವಾಮಿಯ ದರ್ಶನಕ್ಕೆ ಆಗಮಿಸಿದ್ದ ಮಧ್ಯ ಪ್ರದೇಶ ಸಿಎಂ ಅವರನ್ನ, ಉಸ್ತುವಾರಿ ಸಚಿವರಾದ ಡಾ. ನಾರಾಯಣ ಗೌಡ ಸ್ವಾಗತಿಸಿದ್ರು.
ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಅವರ ಪತ್ನಿ ಸಾಧ್ನಾ ಬೆಟ್ಟದೊಡೆಯ ಯೋಗಾನರಸಿಂಹಸ್ವಾಮಿಗೆ ಅಭಿಷೇಕ ಮಾಡಿಸಿದರು. ಕುಟುಂಬ ಸಮೇತರಾಗಿ ಬಂದ ಚೌಹಾಣ್, ಚೆಲುವನಾರಾಯಣ ಸ್ವಾಮಿಯ ದರ್ಶನ ಪಡೆದರು. ತಿರುನಾರಾಯಣಸ್ವಾಮಿ ಮತ್ತು ಯದುಗಿರಿ ನಾಯಕಿ ಅಮ್ಮನವರು, ರಾಮಾನುಜರ ದರ್ಶನ ಪಡೆದರು.
ಶಿವರಾಜ್ ಸಿಂಗ್ ಚೌವಾಣ್ ಮೇಲುಕೋಟೆಗೆ ಬಂದಿರೋದು ಇದೇ ಮೊದಲೇನಲ್ಲ. ಇಲ್ಲಿ ನಡೆಯುವ ಪ್ರಮುಖ ಉತ್ಸವ ಅಥವಾ ಮಹೋತ್ಸವಗಳಲ್ಲಿ ಸೇವೆ ಮಾಡುವ ಮೂಲಕ ಚೆಲುವನಾರಾಯಣನ ಕೈಂಕರ್ಯದಲ್ಲಿ ಭಾಗಿಯಾಗುವ ಬಯಕೆ ಇದೆ ಅನ್ನೋದನ್ನ ಅವರು ಈ ಮೊದಲೇ ಹೇಳಿದ್ದರು.
ತಮ್ಮ ಕಳೆದ ವರ್ಷದ ಭೇಟಿಯಲ್ಲಿ ರಾಮಾನುಜರ ದಿವ್ಯಕ್ಷೇತ್ರದ ದರ್ಶನದಿಂದ ಪುನೀತ ಭಾವ ಉಂಟಾಗಿದೆ ಎಂದು ತಿಳಿಸಿದ್ದರು. ದೇವವಾಸ್ಥನಕ್ಕೆ ತೆರಳುವ ಮೊದಲು ಚೌಹಾಣ್ ದಂಪತಿ, ಜೀಯರ್ ಮಠಕ್ಕೂ ಭೇಟಿಕೊಟ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?