Featured
ಸುಮಲತಾ ವಿರುದ್ಧ ಮಂಡ್ಯದ ರೈತ ಮಹಿಳೆ ಆಕ್ರೋಶ : ಯಾಕೆ ಗೊತ್ತಾ..?

ಮಂಡ್ಯ : ಇಡೀ ದೇಶಾದ್ಯಂತ ಸದ್ಯ RCEP ಒಪ್ಪಂದದ ಚರ್ಚೆ ನಡೀತಿದೆ. ಕರ್ನಾಟಕ ಸೇರಿದಂತೆ ದೇಶಾದ್ಯಂತ ಇದರ ವಿರುದ್ಧ ಹೋರಾಟ ನಡೀತಿದೆ. ಅದರಲ್ಲೂ ನಮ್ಮ ಮಂಡ್ಯ ಹಾಗೂ ರಾಜ್ಯದ ಇತರೆ ಜಿಲ್ಲೆಗಳಲ್ಲಿ ರೈತರು ಬೀದಿಗೆ ಇಳಿದು ಮಳೆ, ಬಿಸಿಲು ಎನ್ನದೆ ಹೋರಾಟ ನಡೆಸ್ತಿದ್ದಾರೆ. ಆದ್ರೆ, ಮಂಡ್ಯ ಸಂಸದೆ ಸುಮಲತಾ ಈ ಒಪ್ಪಂದದ ವಿರುದ್ಧ ಮಾತನಾಡಿಲ್ಲ. ಕೇಂದ್ರದ ನಡೆಯನ್ನು ಖಂಡಿಸಿಲ್ಲ ಎಂದು ಮಂಡ್ಯ ರೈತ ಮಹಿಳೆ ಆಕ್ರೋಶ ಹೊರಹಾಕಿದ್ದಾರೆ.
ಮಂಡ್ಯದಲ್ಲಿ ನಡೆಯುತ್ತಿರೋ ಪ್ರತಿಭಟನೆಯಲ್ಲಿ ಭಾಗಿಯಾಗಿರೋ ರೈತ ಮಹಿಳೆ, ಸುಮಲತಾ ವಿರುದ್ಧ ಕಿಡಿಕಾರಿದ್ದಾರೆ. ರೈತರೊಂದಿಗೆ ತಾನು ಇರ್ತೀನಿ ಎಂದಿದ್ದ ಸ್ವಾಭಿಮಾನಿ ಸುಮಲತಾ ಈಗ ಎಲ್ಲಿದ್ದೀರಿ..? ಸುಮಲತಾ ಅವರು ನಾನು ಮಳವಳ್ಳಿ ಹುಚ್ಚೇಗೌಡರ ಸೊಸೆ, ನಿಮ್ಮೊಂದಿಗೆ ಇರ್ತೀನಿ ಎಂದಿದ್ರಿ..? ಈಗ ಎಲ್ಲಿದ್ದೀರಿ ಎಂದು ರೈತ ಮಹಿಳೆ ಪ್ರಶ್ನೆ ಮಾಡಿದ್ದಾರೆ..?
ಹೊಟ್ಟೆಗೆ ಹಿಟ್ಟಿಲ್ಲದೆ, ಮಕ್ಕಳು, ಜಾನುವಾರುಗಳನ್ನ ಬಿಟ್ಟು ಮಹಿಳೆಯರು,
ರೈತರು ಮಳೆಯಲ್ಲೇ ಪ್ರತಿಭಟನೆ ಮಾಡ್ತಿದ್ದೇವೆ. ಸುಮಲತಾ ಎಲ್ಲಿದ್ದೀರಿ..? ನೀವು ಎಸಿ ಹಾಕಿಕೊಂಡು
ಮಲಗಿದ್ದೀರಾ ಎಂದು ರೈತ ಮಹಿಳೆ ಪ್ರಶ್ನೆ ಮಾಡಿರೋದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯಶ್, ದರ್ಶನ್ ಕರೆದುಕೊಂಡು ಬಂದು ನಮಗೆ ನ್ಯಾಯ ಕೊಡಿಸಿ ಎಂದು ಸುಮಲತಾ ವಿರುದ್ಧ ಘೋಷಣೆ ಕೂಗಿದ್ದಾರೆ. ಇದನ್ನೇ ಈಗ ಹಲವರು ವೈರಲ್ ಮಾಡಿದ್ದಾರೆ.
ಇಷ್ಟೆಲ್ಲಾ ಆದ್ಮೇಲೆ, ರೈತ ಮಹಿಳೆ ಹಾಗೂ ರೈತರ ಹೋರಾಟಕ್ಕೆ ಸಂಸದೆ ಸುಮಲತಾ ಪ್ರತಿಕ್ರಿಯೆ ಕೊಡ್ತಾರಾ..? ರೈತರ ಬೆಂಬಲಕ್ಕೆ ನಿಲ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?