Connect with us

Featured

ಊರಿನ ಜನರ ಭಯಕ್ಕೆ ಹೆದರಿ ಪ್ರೇಮಿಗಳ ಆತ್ಮಹತ್ಯೆ: ವಿಜಯಪುರದಲ್ಲಿ ಮನಕಲಕುವ ಘಟನೆ

ರೈಸಿಂಗ್ ಕನ್ನಡ :

Puranik Aston
ಪುರಣಿಕ ಮಠ

ವಿಜಯಪುರ :

ಊರಿನ ಜನರ ಭಯಕ್ಕೆ ಹೆದರಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಮ್ಮಟನಗರಿ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ನಡೆದಿದೆ.

ಶಿವಕುಮಾರ ಚೌಧರಿ‌(19) ಹಾಗೂ ಶಬಾನಾ ಮುಜಾವರ (13) ಸಾವನಪ್ಪಿದ ಪ್ರೇಮಿಗಳು. ಕಳೆದ ಕೆಲ‌ ದಿನಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದ ಶಿವಕುಮಾರ್ ಹಾಗೂ ಶಬಾನಾ, ಪ್ರತಿದಿನ ಗ್ರಾಮದ ಯಾವುದಾದರೂ ಒಂದು ಸ್ಥಳದಲ್ಲಿ ಭೇಟಿ ಮಾಡುತ್ತಿದ್ದರು. ಇಬ್ಬರು ಬೇರೆ ಬೇರೆ ಧರ್ಮಕ್ಕೆ ಸೇರಿದರಾಗಿದ್ದ ಕಾರಣ ಯಾರಿಗೂ ತಮ್ಮ ಪ್ರೀತಿಯ ವಿಷಯ ಹೇಳಿರಲಿಲ್ಲ.

ಮೂಲತಃ ಬನ್ನಿಹಟ್ಟಿ ಗ್ರಾಮದವನಾದ ಶಿವಕುಮಾರ್ ಕಲಬುರ್ಗಿಯಲ್ಲಿರುವ ಅಜ್ಜಿಯ ಮನೆಯಲ್ಲಿದ್ದಕೊಂಡು ವಿದ್ಯಾಬ್ಯಾಸ ಮಾಡುತ್ತಿದ್ದ. ಶಬಾನಾ ಕೂಡಾ ಸಿಂದಗಿಯ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.‌‌ ಲಾಕ್ ಡೌನ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜಿಗೆ ರಜೆ ಇದ್ದ ಕಾರಣ, ಇಬ್ಬರೂ ಊರಿಗೆ ಬಂದಿದ್ದರು.‌ ಇಲ್ಲೇ ಇಬ್ಬರಿಗೂ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿದೆ.

Advertisement
ಆತ್ಮಹತ್ಯೆ ಮಾಡಿಕೊಂಡ ಬಾವಿ

ನಿತ್ಯವೂ ಊರಲ್ಲಿ ಕದ್ದುಮುಚ್ಚಿ ಸುತ್ತಾಡುತ್ತಿದ್ದರು. ಶನಿವಾರ ಶಬಾನಾ ಅಜ್ಜನ ಕೈಗೆ ಸಿಕ್ಕಾಕೊಂಡ ಬಳಿಕ ರಾತೋರಾತ್ರಿ ಮನೆಯಿಂದ ಪರಾರಿಯಾಗಿ ಸಾವಿನ ದಾರಿ ಹಿಡಿದಿದ್ದರು. ಇತ್ತ ಇಬ್ಬರು ಮನೆಯಿಂದಾ ನಾಪತ್ತೆಯಾದ ಬಳಿಕವೇ ಊರಲ್ಲಿ ಎಲ್ಲರಿಗೂ ವಿಷಯ ಗೊತ್ತಾಗಿದೆ. ಇಡೀ ದಿನ ಊರು ತುಂಬಾ ಇಬ್ಬರನ್ನೂ ಹುಡುಕಾಡಿದ ಮನೆಯವರಿಗೆ ಇಬ್ಬರ ಬಗ್ಗೆಯೂ ಸುಳಿವೇ ಸಿಗದ ಕಾರಣ ಇಬ್ಬರು ಪರಾರಿಯಾಗಿರಬೇಕು ಎಂದು ಸುಮ್ಮನಾಗಿದ್ದರು.

Puranik Full
ಪುರಣಿಕ ಮಠ

ಮರು ದಿನ ಬೆಳಿಗ್ಗೆ ತೋಟದ ಮನೆಗೆ ಬಂದಿದ್ದ ಶಿವಕುಮಾರ್ ಅವರ ಸಹೋದರ ಬಾವಿಯ ಬಳಿ ಬಂದಾಗ  ಶಬಾನಾ ಹಾಗೂ ಶಿವಕುಮಾರ್ ‌ಚಪ್ಪಲಿ, ಮೊಬೈಲ್ ಹಾಗೂ ಬಟ್ಟೆ ಪತ್ತೆಯಾಗಿವೆ. ಕೂಡಲೇ ಕುಟುಂಬಸ್ಥರಿಗೆ ವಿಷಯ ತಿಳಿದು ಸ್ಥಳಕ್ಕಾಗಮಿಸಿ ಬಾವಿಯಲ್ಲಿ ಹುಡುಕಾದಾಗ ಮೊದಲು ಶಬಾನಾ‌ ಶವ ಸಿಕ್ಕಿದೆ. ಬಳಿಕ ಶಿವಕುಮಾರ ಮೃತದೇಹ ಪತ್ತೆಯಾಗಿದ್ದು, ವಯಸ್ಸಲ್ಲದ ವಯಸಲ್ಲಿ ಪ್ರೀತಿ, ಪ್ರೇಮ ಅಂತೆಲ್ಲ ಆಸೆ ಹೊತ್ತು ಸಾವಿನ ಮನೆ ಸೇರಿದ್ದಾರೆ.

ಕುಟುಂಬಸ್ಥರು ಕಣ್ಣಿರಲ್ಲಿ ಕೈತೊಳೆಯುವಂತಾಗಿದೆ. ಸದ್ಯ ಈ ಕುರಿತು‌ ದೇವರ ಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಳಿ ಬದುಕಬೇಕಾಗಿದ್ದ ಎರಡು ಜೀವಗಳು ಪ್ರೀತಿಯ ಹಿಂದೆ ಬಿದ್ದು ದಾರುಣ ಅಂತ್ಯ ಕಂಡಿರುವುದು ನಿಜಕ್ಕೂ ದುರಂತವೇ ಸರಿ.

ಬೆಂಗಳೂರು8 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು8 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು8 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು8 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು8 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು8 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು8 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು8 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured11 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ