Featured
ಲಾಕ್ ಡೌನ್ ನಿಯಮ ಉಲ್ಲಂಘಸಿದವರಿಗೆ ಯಾದಗಿರಿಯಲ್ಲಿ ಪೊಲೀಸರಿಂದ ಬಿಸಿ ಬಿಸಿ ಕಜ್ಜಾಯ
ರೈಸಿಂಗ್ ಕನ್ನಡ:
ಯಾದಗಿರಿ:
ಕೊರೋನಾ ಮಹಾ ಸ್ಫೋಟಕ್ಕೆ ಇಡೀ ರಾಜ್ಯವೆ ಸ್ಥಬ್ದವಾಗಿದೆ, ಜನರು ಆತಂಕದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಆದ್ರೆ ಯಾದಗಿರಿಯಲ್ಲಿ ಲಾಕ್ ಡೌನ್ ಜಾರಿಯಾಗಿದ್ರು. ಜನರು ಮಾತ್ರ ಡೋಂಟ್ ಕೇರ್ ಎನ್ನುವಂತೆ ಓಡಾಟ ನಡೆಸುತ್ತಿದ್ದಾರೆ. ಲಾಕ್ ಡೌನ್ ನಿಯಮ ಉಲ್ಲಂಘಿಸಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಗಂಟೆಯಿಂದ ಲಾಕ್ ಡೌನ್ ಜಾರಿಯಾಗಿದೆ. ಜನರು ಮನೆಯಿಂದ ಯಾರು ಹೊರಬರದಂತೆ ಸೂಚಿಸಲಾಗಿದೆ. ಇಷ್ಟದರೂ ಇಲ್ಲಿನ ಸಾರ್ವಜನಿಕರಿಗೆ ಕೊರೊನಾ ಭಯ ಇಲ್ಲವೆಂಬತ್ತೆ, ಮಾಸ್ಕ್ ಹಾಕಿಕೊಳ್ಳದೆ ಗುಂಪು ಗುಂಪಾಗಿ ರಸ್ತೆಯಲ್ಲಿ ಓಡಾಟ ನಡೆಸುತ್ತಿದ್ದಾರೆ.
ರಸ್ತೆಯಲ್ಲಿ ಸುಖ ಸುಮ್ಮನೆ ಓಡಾಟ ನಡೆಸುತ್ತಿದ್ದವರಿಗೆ ನಗರ ಪಿ.ಎಸ್. ಐ ಕೃಷ್ಣಾ ಸುಬೇದಾರ ಬಿಸಿ ಬಿಸಿ ಕಜ್ಜಾಯ ನೀಡಿದ್ದಾರೆ. ಇನ್ನು ನಗರದ ಅಲ್ಲಲ್ಲಿ ಕಿರಣಿ ಅಂಗಡಿ, ಪಾನ್ ಶಾಪ್ ಗಳು ತೆಗೆದುಕೊಂಡಿದ್ದು, ಜನರು ಬೀದಿಗೆ ಬಂದು ಖರಿದಿಯಲ್ಲಿ ತೋಡಗಿದ್ದರು. ಪೊಲೀಸರು ದಾಳಿ ಮಾಡಿ ಜನರನ್ನು ಚದುರಿಸಿ ಮನೆಗೆ ಕಳಿಸಿದ್ದಾರೆ. ಅಲ್ಲದೆ ಅಂಗಡಿ ಮಾಲಿಕರಿಗೂ ಕಾನೂನು ಉಲ್ಲಂಘಿಸಿ ಅಂಗಡಿ ತೆಗೆದರೆ, ಕೇಸ್ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.
ಅಲ್ಲದೆ ಇದೇ ವೇಳೆ ಮಾಸ್ಕ್ ಇಲ್ಲದೆ ಗುಂಪು ಗುಂಪಾಗಿ ಓಡಾಟ ನಡೆಸುತ್ತಿದ್ದ ಯುವಕರಿಗೆ ಬೆನ್ನತ್ತಿ ಪೊಲೀಸರು ಲಾಠಿ ರುಚಿ ತೊರಿಸಿ, ಬಸ್ಕಿ ಹೊಡಿಸಿ ಲಾಕ್ ಡೌನ್ ಜಾಗೃತಿ ಮೂಡಿಸಿದ್ರು. ಇಷ್ಟೆಲ್ಲಾ ನೋವು ಅನುಭವಿಸಿದ್ರು ನಮ್ ಜನರಿಗೆ ಇನ್ನಾದರೂ ಬುದ್ಧಿ ಬರುತ್ತಾ ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ.
ತಮ್ಮ ಜೀವವನ್ನೂ ಲೆಕ್ಕಿಸದೆ ಕೊರೊನಾ ವಿರುದ್ದ ಹೊರಾಡುತ್ತಿರುವ ಪೊಲೀಸರಿಗೆ ನಮ್ಮದೊಂದು ಸಲಾಂ ಹೇಳಬೇಕಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?