Featured
ಕೊರೊನಾ ವಿರುದ್ಧ ಫೀಲ್ಡ್ಗಿಳಿದ ಜನ – ಬೆಂಗಳೂರು ಜಿಲ್ಲೆಗಳು ಸಂಪೂರ್ಣ ಸ್ತಬ್ಧ- ಹಲವು ಜಿಲ್ಲೆಗಳಲ್ಲಿ ಸ್ವಯಂ ಲಾಕ್ಡೌನ್..!
ರೈಸಿಂಗ್ ಕನ್ನಡ:
ಕೊರೊನ ವಿರುದ್ಧದ ಹೋರಾಟಕ್ಕೆ ಜನರು ಕೈ ಜೋಡಿಸುತ್ತಿದ್ದಾರೆ. ಮಹಾಮಾರಿ ವೈರಸ್ ಅನ್ನು ದೇಶದಿಂದಲೇ ಹೊರಹಾಕಬೇಕೆಂದು ಪಣ ತೊಟ್ಟಿದ್ದಾರೆ. ಸರ್ಕಾರ ದೃಢ ಮತ್ತು ಕಠಿಣ ನಿರ್ಧಾರಗಳನ್ನು ಮಾಡಿಕೊಂಡಿದೆ. ಆದರೆ ಈ ಬಾರಿ ಜನರೇ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಸರ್ಕಾರ ಲಾಕ್ಡೌನ್ ಮಾಡದೇ ಇದ್ರೂ ತಾವೇ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸ್ವಯಂ ಲಾಕ್ಡೌನ್ ಮಾಡ್ತಿದ್ದಾರೆ.
ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೊರೊನಾ ತಡೆಗಟ್ಟಲು ಸರ್ಕಾರ ಲಾಕ್ಡೌನ್ ಮಾಡಿದೆ. ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಸೇವೆಗಳು ಬಂದ್ ಆಗಿವೆ. ಜನರು ಕೂಡ ಸರ್ಕಾರದ ಲಾಕ್ಡೌನ್ ಆದೇಶಕ್ಕೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ಬಾರಿಯ ಲಾಕ್ಡೌನ್ಗಿಂತಲೂ ಈ ಬಾರಿಯ ಲಾಕ್ಡೌನ್ ಶಿಸ್ತುಬದ್ಧವಾಗಿ ಕಾಣುತ್ತಿದೆ.
ಜುಲೈ 16ರಿಂದ ಹಲವು ಜಿಲ್ಲೆಗಳು ಬಂದ್ ಆಗಲಿವೆ. ದಕ್ಷಿಣ ಕನ್ನಡ, ಧಾರಾವಾಡ ಮತ್ತು ರಾಯಚೂರಿನ ಸಿಂಧನೂರಿನಲ್ಲಿ ಈಗಾಗಲೇನ ಲಾಕ್ಡೌನ್ ಘೋಷಣೆ ಆಗಿದೆ. ಹಲವು ಜಿಲ್ಲಾಡಳಿತಗಳು ಕೂಡ ಲಾಕ್ಡೌನ್ ಸಿದ್ಧತೆಯಲ್ಲಿವೆ. ಈ ಮಧ್ಯೆ ಕೊಡಗು, ಮೈಸೂರು ಭಾಗದ ಹಲವೆಡೆ ಸ್ವಯಂ ಲಾಕ್ಡೌನ್ ನಡೆಯುತ್ತಿದೆ.
ಬೆಳಗಾವಿ ಜಿಲ್ಲೆಯ ಐದು ತಾಲ್ಲೂಕು ಲಾಕಡೌನ್ ಆಘಲಿದೆ. ಅಥಣಿ,ಕಾಗವಾಡ, ನಿಪ್ಪಾಣಿ, ಗೋಕಾಕ್, ಮೂಡಲಗಿ ಲಾಕಡೌನ್ಗೆ ಜನರಿಂದ ಸಂಪೂರ್ಣ ಬೆಂಬಲ ಸಿಕ್ಕಿದೆ. ವಾಹನ, ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದೆ. ರಾಮದುರ್ಗ, ಬೈಲಹೊಂಗಲದಲ್ಲಿ ಷರತ್ತು ಬದ್ಧ ಲಾಕಡೌನ್ ನಡೆಯುತ್ತಿದೆ. ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆ ವರೆಗೂ ವ್ಯಾಪಾರ ವಹಿವಾಟಕ್ಕೆ ಅವಕಾಶ ನೀಡಲಾಗಿದೆ. ಇನ್ನೂ ಚಿಕ್ಕೋಡಿ ತಾಲ್ಲೂಕು ಕೂಡಾ ಸ್ವಯಂ ಪ್ರೇರಣೆಯಿಂದ ಬಂದಾಗಲಿದೆ.
ರಾಮನಗರದ ಮಾಗಡಿಯಲ್ಲು ಸ್ವಯಂ ಪ್ರೇರಣೆಯಿಂದ ಲಾಕ್ಡೌನ್ ನಡೆಯುತ್ತಿದೆ. ಕೊಡಗಿನ ಶುಂಠಿಕೊಪ್ಪ, ಕುಶಾಲನಗರ ಮತ್ತು ಸೋಮವಾರ ಪೇಟೆಯಲ್ಲೂ ಜನ ಸ್ವಯಂ ಲಾಕ್ಡೌನ್ ಮಾಡಿಕೊಂಡು ಬೆಳಗ್ಗೆ 7ರಿಂದ ಮಧ್ಯಾಹ್ನ 2ರ ತನಕ ವ್ಯಾಪಾರ ವಹಿವಾಟು ಮಡುತ್ತಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರು ಕೂಡ ಸ್ವಯಂ ಲಾಕ್ಡೌನ್ ಮಾಡ್ತಿದೆ.
ಮಂಡ್ಯ ಜಿಲ್ಲೆಯ ಕೆಲವು ಭಾಗ, ತುಮಕೂರಿನ ಕೆಲವು ತಾಲೂಕುಗಳಲ್ಲೂ ಸ್ವಯಂಪ್ರೇರಿತ ಲಾಕ್ಡೌನ್ ನಡೆಯುತ್ತಿದೆ. ಉತ್ತರ ಕರ್ನಾಟಕದ ಹಲವು ಕಡೆ ಸರ್ಕಾರ ಲಾಕ್ಡೌನ್ ಆದೇಶ ಮಾಡದೇ ಇದ್ರೂ ಜನರು ಕೊರೊನಾ ಕೊಲ್ಲಲು ಸ್ವಯಂ ಪ್ರೇರಿತ ಲಾಕ್ಡೌನ್ ಮಾಡ್ತಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಜನರೇ ಫೀಲ್ಡ್ಗೆ ಇಳಿದಿರುವುದರಿಂದ ಕೊರೊನಾ ವಿರುದ್ಧದ ಹೋರಾಟ ಯಶಸ್ಸು ಸಾಧಿಸಬಹುದು ಅನ್ನುವ ನಂಬಿಕೆ ಎಲ್ಲರದ್ದು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?