Featured
ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಮಾತ್ರ ಪರಿಹಾರ ಅಲ್ಲ: ಸಚಿವ ಪ್ರಭು ಚೌಹಾಣ್
ರೈಸಿಂಗ್ ಕನ್ನಡ:
ಬೀದರ್:
ಕೋರೋನಾ ಆರ್ಭಟಕ್ಕೆ ಬ್ರೇಕ್ ಹಾಕಲು ಲಾಕ್ ಡೌನ್ ಪರಿಹಾರವಲ್ಲ ಎಂದು ಪಶುಸಂಗೊಪನ ಸಚಿವ ಪ್ರಭುಚೌಹಾಣ್ ಹೇಳಿದ್ದಾರೆ. ಬೀದರ್ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಖ್ಯಂಮತ್ರಿ ಯಡಿಯೂರಪ್ಪ ಜೊತೆ ನಡೆಸಿದ ವಿಡಿಯೋ ಕಾನ್ಪರೆನ್ಸ್ನಲ್ಲಿ ಜಿಲ್ಲಾಧಿಕಾರಿ ರಾಮಚಂದ್ರ ಹಾಗೂ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭುಚೌಹಾಣ್ ಭಾಗಿಯಾಗಿದ್ದರು.ಸುಮಾರು ಒಂದು ಗಂಟೆಗಳ ಕಾಲ ಸಿಎಂ ಜೊತೆ ವಿಡಿಯೋ ಕಾನ್ಫರೆನ್ ನಲ್ಲಿ ಭಾಗಿಯಾಗಿದ್ದು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೊಂಕಿತರ ಪ್ರಕರಣ ತಡೆಯಲು ಬೇಕಾದ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಭುಚೌಹಾಣ್ ಕೋರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಮಾತ್ರ ಪರಿಹಾರವಲ್ಲಾ ಎಂದು ಹೇಳಿದರು. ಇಂದು ಮೂರು ಗಂಟೆಗೆ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಲಿದ್ದೇನೆ, ಸಭೆಯ ನಂತರ ಲಾಕ್ ಡೌನ್ ಕುರಿತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಕೋವಿಡ್ ನಿಯಂತ್ರಣ ಕುರಿತಂತೆ ಜನ ಮುನ್ನೆಚ್ಚರಿಕೆ ವಹಿಸಬೇಕಿದೆ. ಬೀದರ್ ಜಿಲ್ಲೆ ಮಹರಾಷ್ಟ್ರ, ತೆಲಂಗಾಣ ಗಡಿ ಜಿಲ್ಲೆ ಯಾಗಿದ್ದು ಎರಡು ರಾಜ್ಯಗಳಿಗೆ ಸಂಪರ್ಕಕಲ್ಪಿಸುವ ಜಿಲ್ಲೆ ನಮ್ಮದಾಗಿದೆ. ಹೀಗಾಗಿ ಜನತೆ ಹೆಚ್ವಿನ ಮುಂಜಾಗ್ರತ ವಹಿಸಬೇಕಿದೆ.ಮುಖ್ಯಮಂತ್ರಿ ಯೂರಪ್ಪ ಅವರಿಗೆ ಈಬಗ್ಗೆ ಮಾಹಿತಿ ನೀಡಿದ್ದೆನೆ ಎಂದರು.
ಇನ್ನು ಲಾಕ್ ಡೌನ್ ಬಗ್ಗೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಬಿಎಸ್ ವೈ ಸೂಚಿಸಿದ್ದಾರೆ,ಹೀಗಾಗಿ ಮೂರು ಗಂಟೆಗೆ ಎಲ್ಲಾ ಜನ ಪ್ರತಿನಿಧಿಗಳ ಜೊತೆ ಸಭೆ ನಡೆಸಿ ನಂತರ ಲಾಕ್ ಡೌನ್ ಕುರಿತ ನಿರ್ಧಾರ ಪ್ರಕಟಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭುಚೌಹಾಣ್ ಹೇಳಿದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?