Featured
ಐತಿಹಾಸಿಕ ತೀರ್ಪನ್ನ ಸ್ವಾಗತಿಸುತ್ತೇನೆ: ಎಲ್.ಕೆ.ಅಡ್ವಾಣಿ ಸಂತಸ

ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಜೆಪಿಯ ಭೀಷ್ಮ ಎಲ್.ಕೆ.ಅಡ್ವಾಣಿ ವಿಜಯ ಸಾಧಿಸಿದ್ದಾರೆ.
ಮೂರು ದಶಕಗಳ ಕಾಲ ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿಗಾಗಿ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ಕಾದಿದ್ದರು. 28 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ, ವಿಶೇಷ ನ್ಯಾಯಲಯದ ತೀರ್ಪಿನಿಂದ ಸಂತಸವಾಗಿದೆ ಮತ್ತು ಅತಂತ್ಯ ಮಹತ್ವ ಪೂರ್ಣವಾಗಿದೆ ಎಂದಿದ್ದಾರೆ.
ತೀರ್ಪನ್ನ ನೋಡಿ ಖುಷಿಯಾಗಿದೆ, ತುಂಬ ಸಂತಸ ಆಗಿದೆ. ಕೈಜೋಡಿಸಿ ಎಲ್ಲರಿಗೂ ವಂದನೆ ತಿಳಿಸಿದ್ದಾರೆ.
ಬಾಬರಿ ಮಸೀದಿ ಧ್ವಂಸ ಪ್ರಕರಣ ಘಟನೆ ಪೂರ್ವ ನಿಯೋಜಿತ ಕೃತ್ಯ ಅಲ್ಲ. ಆಕಸ್ಮಿಕವಾಗಿ ನಡೆದಿರುವ ಘಟನೆ ನ್ಯಾಯಾಧೀಶ ಎಸ್.ಕೆ.ಯಾದವ್ ತೀರ್ಪು ಸಾಬೀತು ಮಾಡಲು ಯಾವುದೇ ಸಾಕ್ಷಿಗಳಿಲ್ಲ ಎಂದಿದ್ದಾರೆ.
ತೀರ್ಪು ಬರುತ್ತಿದ್ದಂತೆ ಎಲ್.ಕೆ.ಅಡ್ವಾಣಿ ಮನೆಯಲ್ಲಿ ಸಿಹಿ ತಿಂಡಿ ಹಂಚಿ ಸಂಭ್ರಮಿಸಲಾಯಿತು. ನಂತರ ಎಲ್ಕೆ.ಅಡ್ವಾಣಿ,ಐತಿಹಾಸಿಕ ತೀರ್ಪನ್ನ ಸ್ವಾಗತಿಸುತ್ತೇನೆ.
ರಾಮಜನ್ಮ ಭೂಮಿಯಲ್ಲಿ ನಾನು ವೈಯಕ್ತಿಕವಾಗಿ ಮತ್ತು ಬಿಜೆಪಿ ಇಟ್ಟಿರುವ ನಂಬಿಕೆ ಮತ್ತು ಬದ್ಧತೆಗೆ ಸಿಕ್ಕ ಜಯವಾಗಿದೆ ಎಂದರು.
ಇನ್ನು ರಾಮಜನ್ಮಭೂಮಿ ಹೋರಾಟದಲ್ಲಿ ಕೈ ಜೋಡಿಸಿದ ಮತ್ತೊರ್ವ ಬಿಜೆಪಿ ನಾಯಕ ಮುರಳಿ ಮನೋಹರ್ ಜೋಶಿ, ಇದು ಐತಿಹಾಸಿಕ ತೀರ್ಪು. 1992ರ ಅಯೋಧ್ಯೆ ಘಟನೆ ಯಾವುದೇ ತೀರ್ಪು ನಡೆದಿಲ್ಲ ಅನ್ನೋದನ್ನ ತೀರ್ಪು ಸಾಬೀತು ಮಾಡಿದೆ.
ನಮ್ಮ ಱಲಿ, ಕಾರ್ಯಕ್ರಮ ಪಿತೂರಿಯ ಭಾಗವಾಗಿರಲಿಲ್ಲ.ನ್ಯಾಯಾಲಯದ ತೀರ್ಪು ನಮಗೆ ಖುಷಿ ಕೊಟ್ಟಿದೆ. ಇನ್ನೇನಿದ್ದರೂ ಮಂದಿರ ನಿರ್ಮಾಣದತ್ತ ನಮ್ಮ ಗಮನ ಎಂದು ತಿಳಿಸಿದರು.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?
















