Featured
ರಾಜ್ಯದಲ್ಲೂ ಶೀಘ್ರವೇ ಮದ್ಯ ನಿಷೇಧ..! ಸಿಎಂ ಯಡಿಯೂರಪ್ಪ ಶಾಕಿಂಗ್ ನಿರ್ಧಾರ

ತುಮಕೂರು/ಬೆಂಗಳೂರು : ಯೆಸ್, ಹೀಗಂತ ಸ್ವತಃ ಸಿಎಂ ಯಡಿಯೂರಪ್ಪ ಅವರೇ ಹೇಳ್ತಿದ್ದಾರಂತೆ. ರಾಜ್ಯದಲ್ಲಿ ಮದ್ಯ ನಿಷೇಧ ಮಾಡುವ ಬಗ್ಗೆ ಸಿಎಂ ಯಡಿಯೂರಪ್ಪ ಚಿಂತನೆ ಮಾಡಿದ್ದಾರೆ ಎಂದು ತುಮಕೂರಿನಲ್ಲಿ ಸಂಸದ ಜಿ.ಎಸ್.ಬಸವರಾಜು ಹೇಳಿಕೆ ನೀಡಿದ್ದಾರೆ. ನನ್ನ ಕಾಲದಲ್ಲಿ ಹೇಗಾದರೂ ಮಾಡಿ ಮದ್ಯವನ್ನು ಬ್ಯಾನ್ ಮಾಡಲೇ ಬೇಕು ಎಂದು ಯಡಿಯೂರಪ್ಪ ಚಿಂತನೆ ನಡೆಸ್ತಿದ್ದಾರೆಂದು ಎಂದು ಸಂಸದ ಜಿ.ಎಸ್. ಬಸವರಾಜು ಹೇಳಿದ್ದಾರೆ.
ಮದ್ಯ ನಿಷೇಧದ ಕುರಿತು ನನ್ನ ಜೊತೆ ಯಡಿಯೂರಪ್ಪ ಮಾತ್ನಾಡಿದ್ದಾರೆ. ಬ್ಯಾನ್ ಮಾಡೋದ್ರಿಂದ ಉಂಟಾಗುವ ಬೊಕ್ಕಸದ ಹೊರೆಯನ್ನು ಹೇಗೆ ತುಂಬುಬೇಕು..? ಯಾವ ರೀತಿ ಸರಿದೂಗಿಸಬೇಕು ಎಂಬುದರ ಕುರಿತು ಯಡಿಯೂರಪ್ಪ ಚರ್ಚೆ ನಡೆಸಿದ್ದಾರೆ ಎಂದು ಸಂಸದ ಬಸವರಾಜು ಹೇಳಿದ್ರು.
ಇದೇ ವಿಚಾರವಾಗಿ ಮಾತ್ನಾಡಿದ ಸಂಸದ ಬಸವರಾಜು, ಮದ್ಯ ನಿಷೇಧದ ವಿಚಾರವಾಗಿ ನಾವೂ ಕೂಡ ಸಂಸತ್ತಿನಲ್ಲಿ ದನಿ ಎತ್ತುತ್ತೇವೆ. ಪ್ರಧಾನಿ ಮೋದಿಯವರು ನಿರ್ದೇಶನ ಕೊಟ್ಟು ಮದ್ಯವನ್ನ ನಿಲ್ಲಿಸಬಹುದು. ಗುಜರಾತ್ ಮತ್ತು ಬಿಹಾರದಲ್ಲಿ ಪಾನ ನಿಷೇಧವಾಗಿದೆ. ಅದೇ ರೀತಿ ನಮ್ಮಲ್ಲೂ ನಾವು ಮದ್ಯ ನಿಷೇಧವನ್ನು ಬೆಂಬಲಿಸೋದಾಗಿ ಹೇಳಿದ್ರು.
ಹಾಗಿದ್ರೆ, ಸಿಎಂ ಯಡಿಯೂರಪ್ಪ ನಿಜವಾಗಲು ರಾಜ್ಯದಲ್ಲೂ ಗುಜರಾತ್ ಮಾದರಿಯಂತೆ ಮದ್ಯ ನಿಷೇಧ ಮಾಡ್ತಾರಾ..? ಕಾದುನೋಡೋಣ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















