Featured
ಲಿಪ್ಲಾಕ್ ದೃಶ್ಯದಲ್ಲಿ ಹರಿಪ್ರಿಯಾ – ಸೃಜನ್ ಲೋಕೇಶ್ : ನೀರ್ ದೋಸೆ ಜೊತೆ ಮುತ್ತಿನ ಮಜಾ ಟಾಕೀಸ್
![](https://risingkannada.com/wp-content/uploads/2019/09/haripriya01.jpg)
ರೈಸಿಂಗ್ ಕನ್ನಡ ಸಿನಿಮಾ : ನೀರ್ ದೋಸೆ ಬೆಡಗಿ ಹರಿಪ್ರಿಯಾ ಮತ್ತೊಮ್ಮೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಬಾರಿ, ಮಾತಿನ ಮಲ್ಲ, ಮಜಾ ಟಾಕೀಸ್ ಸೃಜನ್ ಲೋಕೇಶ್ ಲಿಪ್ಗೆ ಲಿಪ್ ಕೊಟ್ಟು ಲಾಕ್ ಮಾಡಿದ್ದಾರೆ. ಯೆಸ್, ನೀವು ಈ ಫೋಟೋ ನೋಡಿದ್ರೆ ಗೊತ್ತಾಗುತ್ತೆ, ನೀರ್ ದೋಸೆ ಬೆಡಗಿ ಜೊತೆ ಸೃಜನ್ ಮಾಡ್ತಿರೋ ಮಜಾ ಹೇಗಿದೆ ಅಂತ.
ಇದು ಎಲ್ಲಿದ್ದೆ ಇಲ್ಲಿ ತನಕ ಸಿನಿಮಾದ ಹಾಡಿನಲ್ಲಿ ಬರೋ ಲಿಪ್ ಕಿಸ್. ಭಾನುವಾರವಷ್ಟೇ ಸಿನಿಮಾದ ಟೈಟಲ್ ಸಾಂಗ್ ರಿಲೀಸ್ ಆಗಿದ್ದು, ಇದ್ರಲ್ಲಿ ಹರಿಪ್ರಿಯಾ, ಸೃಜನ್ ಲೋಕೇಶ್ ಲಿಪ್ ಲಾಕ್ ಸೀನ್ ಇದೆ. ಸೃಜನ್ ಇದೇ ಮೊದಲ ಬಾರಿಗೆ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡಿದ್ರೆ, ಹರಿಪ್ರಿಯಾ ಮತ್ತೊಮ್ಮೆ ಗ್ಲಾಮರ್ ಪತ್ರದಲ್ಲಿ ಮಿಂಚೋಕೆ ರೆಡಿಯಾಗಿದ್ದಾರೆ.
![](https://risingkannada.com/wp-content/uploads/2019/09/haripriya-1.jpg)
ಎಲ್ಲಿದ್ದೆ ಇಲ್ಲಿ ತನಕ ಸಿನಿಮಾ ಈಗಾಗಲೇ ಬಹುತೇಕ ಸಿನಿಮಾ ಶೂಟಿಂಗ್ ಮುಗಿಸಿಕೊಂಡಿದೆ. ಸೃಜನ್ ಮೊದಲ ಬಾರಿಗೆ ನಿರ್ಮಾಣ ಮಾಡ್ತಿರೋ ಸಿನಿಮಾ ಇದಾಗಿದ್ದು, ತೇಜಸ್ವಿ ಡೈರೆಕ್ಟ್ ಮಾಡ್ತಿದ್ದಾರೆ. ಟೈಟಲ್ ಹಾಡಿಗೆ ಅರ್ಜುನ್ ಜನ್ಯ ಮ್ಯೂಸಿಕ್ ನೀಡಿದ್ದು, ಸೋನು ನಿಗಮ್ ಹಾಡಿದ್ದಾರೆ. ಒಟ್ನಲ್ಲಿ, ಕನ್ನಡ ಸಿನಿಮಾ ರಂಗದಲ್ಲಿ ಮತ್ತೊಮ್ಮೆ ಮುತ್ತಿನ ಮಜಾ ಬಗ್ಗೆ ಚರ್ಚೆ ಶುರುವಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?