Featured
ಕುವೈತ್ ಸಂಸತ್ತಿನಲ್ಲಿ ಹೊಸ ಮಸೂದೆ ಅಂಗೀಕಾರ- 10 ಲಕ್ಷ ಭಾರತೀಯರಿಗೆ ಗಢಗಢ
![](https://risingkannada.com/wp-content/uploads/2020/07/Kuwait.jpg)
ರೈಸಿಂಗ್ ಕನ್ನಡ, ನ್ಯೂಸ್ ಡೆಸ್ಕ್:
ಕೊರೊನಾ ವೈರಸ್ ಸೋಂಕು ಈಗ ಎಲ್ಲರ ಬದುಕಿನಲ್ಲಿ ಆಟ ಆಡುತ್ತಿದೆ. ಭಾರತದಲ್ಲಿರುವ ಮಲ್ಟಿ ನ್ಯಾಷನಲ್ ಕಂಪನಿಗಳು ಈಗಾಗಲೇ ಪಿಂಕ್ ಸ್ಲಿಪ್ ನೀಡುತ್ತಿವೆ. ಈಗ ವಿದೇಶದಲ್ಲಿ ಕೆಲಸ ಮಾಡುವ ಭಾರತೀಯರೂ ಜಾಬ್ಲೆಸ್ ಆಗುವ ಸಾಧ್ಯತೆ ಹೆಚ್ಚಿದೆ. ಭಾರತೀಯರೇ ಹೆಚ್ಚಾಗಿ ಕೆಲಸ ಮಾಡುತ್ತಿರುವ ಕುವೈತ್ನಲ್ಲಿ ಕೆಲಸ ಕಳೆದುಕೊಳ್ಳುವುದು ಬಹುತೇಕ ಪಕ್ಕಾ ಆಗಿದೆ. ಕುವೈತ್ನ ರಾಷ್ಟ್ರೀಯ ಸಂಸತ್ತು ವಲಸಿಗರ ಕೋಟಾ ಮಸೂದೆಯನ್ನು ಅಂಗೀಕರಿಸಿದೆ. ಇದು ಕುವೈತ್ನಲ್ಲಿ ಉದ್ಯೋಗ ಮಾಡುತ್ತಿರುವ ಸುಮಾರು 10 ಲಕ್ಷ ಭಾರತೀಯರ ಭವಿಷ್ಯವನ್ನು ಅಲ್ಲಾಡುವಂತೆ ಮಾಡಿದೆ.
![](https://risingkannada.com/wp-content/uploads/2020/07/rising-kannada-add-29.png)
ಕುವೈತ್ ಸಂಸತ್ತು ಅಂಗೀಕರಿಸಿದ ಮಸೂದೆಯ ಪ್ರಕಾರ ವಲಸಿಗರ ಪ್ರಮಾಣವನ್ನು ಶೇಕಡಾ 70ರಿಂದ ಶೆಕಡಾ 30ಕ್ಕೆ ಇಳಿಸಲು ಉದ್ದೇಶಿಸಲಾಗಿದೆ. ಇದು ಕುವೈತ್ನ ಉದ್ಯೋಗ ಕ್ಷೇತ್ರದಲ್ಲಿರುವ ಅಸಮತೋಲನವನ್ನು ಭವಿಷ್ಯದ ದೃಷ್ಟಿಯಿಟ್ಟುಕೊಂಡು ಸರಿಪಡಿಸುವ ಉದ್ದೇಶ ಹೊಂದಿದೆ ಎಂದು ಅಲ್ಲಿನ ಸರಕಾರ ಹೇಳುತ್ತದೆ.
ವಲಸಿಗ ಮಸೂದೆಯ ಅಂಗೀಕಾರದ ಬಳಿಕ ಹೊಸ ಕಾನೂನು ರೂಪುಗೊಳ್ಳುತ್ತಿದೆ. ಇದರಲ್ಲಿ ಕುವೈತ್ ತನ್ನ ಜನಸಂಖ್ಯೆಯ ಶೇಕಡಾ 15ರಷ್ಟು ಉದ್ಯೋಗವನ್ನು ಮಾತ್ರ ವಲಸಿಗರಿಗೆ ನೀಡಬಹುದು. ಶೇಕಡಾ 15ಕ್ಕಿಂದ ಹೆಚ್ಚಿರುವ ಭಾರತೀಯ ಉದ್ಯೋಗಿಗಳನ್ನು ಸ್ವದೇಶಕ್ಕೆ ಕಳುಹಿಸುವ ಕಾರ್ಯಸೂಚಿ ಮತ್ತು ಕಾರ್ಯತಂತ್ರವನ್ನು ರೂಪಿಸುವ ಜವಾಬ್ದಾರಿಯನ್ನು ಸಮಿತಿಯೊಂದಕ್ಕೆ ವಹಿಸಲಾಗಿದೆ.
ಲೆಕ್ಕಾಚಾರದಂತೆ ಕುವೈತ್ನಲ್ಲಿ ಅತೀ ಹೆಚ್ಚು ಭಾರತೀಯರೇ ನೆಲೆಸಿದ್ದಾರೆ. ಕುವೈತ್ ಜನಸಂಖ್ಯೆ 4 ಕೋಟಿ 80 ಲಕ್ಷ ಇದೆ. ಈ ಪೈಕಿ ಕೋಟಿ 3 ಕೋಟಿ 40ಲಕ್ಷ ಜನರು ವಲಸಿಗರೇ ಆಗಿದ್ದಾರೆ. ವಲಸಿಗರ ಕಾನೂನು ಜಾರಿಯಾದರೆ ಕುವೈತ್ನಲ್ಲಿ ವಲಸಿಗರ ಸಂಖ್ಯೆ 1 ಕೋಟಿ 45 ಲಕ್ಷಕ್ಕೆ ಇಳಿಯಲಿದೆ. ಹೀಗಾದರೆ ಕುವೈತ್ನಲ್ಲಿ ನೆಲೆಸಿರುವ ಸುಮಾರು 10 ಲಕ್ಷಕ್ಕೂ ಅಧಿಕ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ.
ಕುವೈತ್ ಬೆನ್ನಲ್ಲೇ ಉಳಿದ ಅರಬ್ ದೇಶಗಳು ಕೂಡ ವಲಸಿಗರ ಕಾನೂನು ತಿದ್ದುಪಡಿಗೆ ಯೋಚನೆ ಮಾಡುತ್ತಿದೆ. ಒಂದು ವೇಳೆ ಎಲ್ಲಾ ಅರಬ್ ದೇಶಗಳಲ್ಲಿ ಈ ತರಹದ ಕಾನೂನು ಜಾರಿಗೆ ಬಂದರೆ ಲಕ್ಷಾಂತರು ಭಾರತೀಯರು ಕೆಲಸ ಕಳೆದುಕೊಳ್ಳುವುದು ಗ್ಯಾರೆಂಟಿ.
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?
ಪ್ರಭಾಸ್ ಫ್ಯಾನ್ಸ್ ದಿಲ್ ಖುಷ್ : ಈ ವರ್ಷ ರಾಧೆ ಶ್ಯಾಮ್.. ಮುಂದಿನ ವರ್ಷ ಸಲಾರ್ ರಿಲೀಸ್ಗೆ ಮುಹೂರ್ತ ಫಿಕ್ಸ್