Featured
ರೈತ ಸಂಘಟನೆಯ ಜಿಲ್ಲಾಧ್ಯಕ್ಷರಾಗಿ ಕೊತ್ತವಾಲ ಶರಣಪ್ಪ ನೇಮಕ
ರೈಸಿಂಗ್ ಕನ್ನಡ:
ನಾಗರಾಜ್. Y. ಕೊಪ್ಪಳ
ಭಾರತೀಯ ಕೃಷಿ ಕಾರ್ಮಿಕ ಮತ್ತು ರೈತ ಸಂಘಟನೆಯ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ಶರಣಪ್ಪ ಕೊತ್ತವಾಲ ನೇಮಕಗೊಂಡಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಎಂ.ಎಸ್.ಪಾಟೀಲ್ ನೇಮಕ ಆದೇಶ ನೀಡಿ, ಕೊಪ್ಪಳ ಜಿಲ್ಲೆಯಲ್ಲಿ ಸಂಘಟನೆಯ ಮೂಲಕ ಬಡವರು ಮತ್ತು ನಿರ್ಗತಿಕರಿಗೆ ಸರ್ಕಾರದ ಯೋಜನೆ ತಲುಪುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು. ಶರಣಪ್ಪ ಕೊತ್ತವಾಲ ಮಾತನಾಡಿ, ಕೊಪ್ಪಳ ಜಿಲ್ಲೆ, ಹೋರಾಟಕ್ಕೆ ಹೆಸರು ಮಾಡಿದೆ. ಜೊತೆಗೆ ಜಿಲ್ಲೆಯಲ್ಲಿ ರೈತರು ಮತ್ತು ಕಾರ್ಮಿಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಜೊತೆಗೆ ತುಂಗಭದ್ರಾ ಜಲಾಶಯ ನಿರ್ಮಾಣದ ಪ್ರಮುಖ ಉದ್ದೇಶ ನೀರಾವರಿ ಮತ್ತು ಕುಡಿವ ನೀರು ನೀಡುವುದಾಗಿದೆ. ಆದರೆ, ಇತ್ತೀಚೆಗೆ ಟಿ.ಬಿ. ಡ್ಯಾಂ ಮತ್ತು ತುಂಗಭದ್ರಾ ಎಡದಂಡೆ ಯೋಜನೆ ಅಧಿಕಾರಿಗಳ ಕಳ್ಳಾಟದಿಂದ ಕಾರ್ಖಾನೆಗಳೇ ಹೆಚ್ಚು ನೀರು ಪಡೆದು, ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದರ ವಿರುದ್ಧವೂ ಸಂಘಟನೆ ಮುಂದಾಳತ್ವದಲ್ಲಿ ಹೋರಾಟ ಮಾಡಲಾಗುವುದು ಎಂದರು. ಸಂಘಟನೆ ಪದಾಧಿಕಾರಿಗಳಾದ ಮಧುಮತಿ ಪೂಜಾರ, ಎಸ್.ಎ.ಖಾದ್ರಿ, ಅಮರೇಗೌಡ ಯರಡೋಣ, ಪಂಪಾಪತಿ ಕನಕಗಿರಿ, ವೀರೇಶ ಚಳ್ಳೂರ, ರಮೇಶ ನಾಯಕ ಸೇರಿ ಇತರರು ಇದ್ದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?