ರೈಸಿಂಗ್ ಕನ್ನಡ:
ಐಸ್ ಕ್ರೀಂ ತನ್ನಬೇಕು ಅನ್ನೊ ಆಸೆ ಇದೆಯಾ..? ಯುವಕರಿಗಂತೂ ಐಸ್ಕ್ರೀಸಂ ಅಂದ್ರೆ ಪಂಚಪ್ರಾಣ. ಎಲ್ಲೋ ಒಂದು ಮೂಲೆಯಲ್ಲಿ ಕುಳಿತು ಐಸ್ ಕ್ರೀಂ ತಿನ್ನುತ್ತಾ ಇದ್ರೆ ಒಂತಾ ಮಜಾ ಸಿಗುತ್ತದೆ. ಆದ್ರೆ ಕೊರೊನಾ ಭಯದಲ್ಲಿ ಐಸ್ ತಿನ್ನಲು ಕೂಡ ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ ಇದೆ. ದೊಡ್ಡ ದೊಡ್ಡ ಬ್ರಾಂಡೆಡ್ ಐಸ್ಕ್ರೀಂ ಅಂಗಡಿಗಳು ಓಪನ್ ಇದ್ರು ಒಳಗೆ ಹೋಗಿ ಕೊಂಡು ಕೊಳ್ಳೋದಕ್ಕೆ ಭಯ. ಇನ್ನೇನು ಮಾಡೋದು ಅಂತ ಯೋಚ್ನೇನಾ..? ಹಾಗಾದರೆ ಅದಕ್ಕೊಂದು ಸಿಂಪಲ್ ದಾರಿ ಇದೆ.
ಕೆಎಂಎಫ್ ಐಸ್ಕ್ರೀಂ ನಿಮ್ಮ ಐಸ್ಕ್ರೀಂ ದಾಹವನ್ನು ತಣಿಸಲು ರೆಡಿ ಇದೆ. ನೀವೇಲ್ಲೂ ಹೋಗಬೇಕಿಲ್ಲ. ನಂದಿನ ಹಾಲಿನ ಬೂತ್ಗಳಿಗೆ ತೆರಳಿ, ಮನೆಗೆ ತಂದು ಕುಟುಂಬದ ಜೊತೆ ಐಸ್ಕ್ರೀಂ ಸವಿಯಬಹುದು. ಐಸ್ಕ್ರೀಂ ಪಾರ್ಲರ್ಗಳಿಗೆ ಹೋದ್ರೆ ಕೊರೊನಾ ಭಯ ಇರೋದ್ರಿಂದ ಕೆಎಂಎಫ್ನ ನಂದಿನ ಐಸ್ಕ್ರೀಂ ಅದಕ್ಕೊಂದು ಪರ್ಯಾ ಮಾರ್ಗ.
ವಿವಿಧ ವೆರೈಟಿ ಮತ್ತು ತೂಕದಲ್ಲಿ ನಂದಿನಿ ಐಸ್ಕ್ರೀಂಗಳು ಲಭ್ಯವಿದೆ. ಅಂದಹಾಗೇ ಈ ಐಸ್ಕ್ರೀಂಗಳ ಬೆಲೆಯೂ ಇತರೆ ಐಸ್ಕ್ರೀಂಗಳಿಗಿಂತ ತುಂಬಾ ಕಡಿಮೆ. ಮ್ಯಾಂಗೋ ಫ್ಲೇವರ್ನ ನಂದಿನಿ ಐಸ್ ಕ್ರೀಂನ 1.25ಕೆ.ಜಿ ಬಾಕ್ಸ್ಗೆ ಜಸ್ಟ್ 170 ರೂಪಾಯಿ. ಉಳಿದ ಬ್ರಾಂಡ್ಗಳಲ್ಲಿ ಕೇವಲ 375 ಗ್ರಾಂ ಪ್ಯಾಕ್ ಬೇಕು ಅಂದ್ರೆ 130 ರೂಪಾಯಿ ಕೊಡಬೇಕು. ಕೆಎಂಎಪ್ ನಂದಿನಿ ಐಸ್ಕ್ರೀಂ ತೆಗೆದುಕೊಂಡ್ರೆ ಕ್ವಾಲಿಟಿನೂ ಸಿಗಲಿದೆ, ಕ್ವಾಂಟಿಟಿನೂ ಸಿಗಲಿದೆ.
ಕೆಎಂಎಫ್ ಐಸ್ ಕ್ರೀಮ್ ಸ್ಥಾವರಗಳು 92 ಬಗೆಯ ನಂದಿನಿ ಐಸ್ ಕ್ರೀಮ್ ಗಳನ್ನು ತಯಾರಿಸುತ್ತಿದ್ದು, ಸಗಟು ಮಾರಾಟಗಾರರ ಮೂಲಕ ಕರ್ನಾಟಕದಾದ್ಯಂತ ಮಾರುಕಟ್ಟೆಗೆ ವಿತರಿಸುತ್ತಿದೆ ಮತ್ತು ನೆರೆಯ ರಾಜ್ಯಗಳಲ್ಲಿ ನಂದಿನಿ ಐಸ್ ಕ್ರೀಮ್ ವ್ಯವಹಾರವನ್ನು ವಿಸ್ತರಿಸಲಾಗುತ್ತಿದೆ. ಇನ್ಯಾಕೆ ತಡ ಕೆಎಂಎಫ್ ನಂದಿನಿ ಐಸ್ಕ್ರೀಂ ಪರ್ಚೇಸ್ ಮಾಡಿ, ಸವಿದು ಎಂಜಾಯ್ ಮಾಡಿ…!
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?