Featured
ಪೋಲ್ಯಾಂಡ್ನಲ್ಲಿ ಕೋಟಿಗೊಬ್ಬ-3 ಚಿತ್ರತಂಡದ ಇಬ್ಬರು ಒತ್ತೆಯಾಳು : ಕಿಚ್ಚ ಸುದೀಪ್ಗೆ ಇದೆಂಥಾ ಸಂಕಷ್ಟ..!?
ರೈಸಿಂಗ್ ಕನ್ನಡ : ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರತಂಡ ಸಂಕಷ್ಟಕ್ಕೆ ಸಿಲುಗಿದೆ. ಇದುವರೆಗೆ ಯಾವುದೇ ಸಿನಿಮಾ ತಂಡ ಅನುಭವಿಸದ ಸಂಕಷ್ಟವನ್ನ ಸುದೀಪ್ ಟೀಮ್ ಅನುಭವಿಸುವಂತಾಗಿದೆ. ಇದು ಪಕ್ಕಾ ಸಿನಿಮಾ ಕಥೆಯಂತೆ ಇರೋದು ಮತ್ತೊಂದು ವಿಶೇಷ.
ಇಷ್ಟಕ್ಕೂ ಪೋಲ್ಯಾಂಡ್ನಲ್ಲಿ ಆಗಿದ್ದೇನು..?
ಕೋಟಿಗೋಬ್ಬ 3 ಚಿತ್ರದ ಚಿತ್ರೀಕರಣಕ್ಕೆ ಇತ್ತೀಚೆಗೆ ಸುದೀಪ್ ಸೇರಿದಂತೆ ಚಿತ್ರತಂಡ ಪೋಲ್ಯಾಂಡ್ಗೆ ಹೋಗಿತ್ತು. ಫಾರಿನ್ ಶೂಟಿಂಗ್ ಆಗಿದ್ದರಿಂದ, ಏಜೆನ್ಸಿಯೊಂದಕ್ಕೆ ಚಿತ್ರೀಕರಣದ ಜವಾಬ್ದಾರಿಯನ್ನ ನೀಡಲಾಗಿತ್ತು. ಇದಕ್ಕಾಗಿ 3 ಕೋಟಿ ಹಣ ಕೂಡ ನೀಡಲಾಗಿತ್ತು. ಆದ್ರೆ, ಚಿತ್ರೀಕರಣ ಮುಗಿದ್ಮೇಲೆ ಏಜೆನ್ಸಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದೆ. ಶೂಟಿಂಗ್ ಮುಗಿದು ಸುದೀಪ್ ವಾಪಸ್ ಆಗ್ತಿದ್ದಂತೆ, ಅತ್ತ ಚಿತ್ರತಂಡದ ಇಬ್ಬರನ್ನು ಏಜೆನ್ಸಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದೆ.
ಹೆಚ್ಚುವರಿ 45 ಲಕ್ಷ ಹಣ ನೀಡಿ, ಇಬ್ಬರು ಚಿತ್ರತಂಡದ ಸದಸ್ಯರನ್ನ ಬಿಡುಗಡೆ ಮಾಡಿಸಿಕೊಂಡು ಹೋಗುವಂತೆ ಏಜೆನ್ಸಿ ಹೇಳಿದೆ. ಇದರಿಂದ ಕಂಗಾಲಾಗಿರೋ ಚಿತ್ರತಂಡ ಈಗ ಬೆಂಗಳೂರು ಪೊಲೀಸ್ ಕಮೀಷನರ್ ಮೊರೆ ಹೋಗಿದ್ದಾರೆ. ಚಿತ್ರದ ನಿರ್ಮಾಪಕ ಸೂರಪ್ಪ ಬಾಬು, ಬೆಂಗಳೂರು ಕಮೀಷನರ್ ಭಾಸ್ಕರ್ ರಾವ್ಗೆ ಸಂಕಷ್ಟ ಹೇಳಿಕೊಂಡಿದ್ದು, ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
ಇಷ್ಟೇ ಅಲ್ಲದೆ, ಕೇಂದ್ರ ಸಚಿವ ಸದಾನಂದಗೌಡ, ನಟ, ರಾಜಕಾರಣಿ ಜಗ್ಗೇಶ್ಗೂ ಸಹಾಯ ಮಾಡುವಂತೆ ಮನವಿ ಮಾಡಲಾಗಿದೆ. ಕೋಟಿಗೊಬ್ಬ 3, ಚಿತ್ರದ ಬಹುತೇಕ ಚಿತ್ರೀಕರಣ ಫಾರಿನ್ನಲ್ಲೇ ನಡೆದಿದೆ. ಶಿವ ಕಾರ್ತಿಕ್ ನಿರ್ದೇಶನ ಮಾಡ್ತಿರೋ ಸಿನಿಮಾಗೆ ಸೂರಪ್ಪ ಬಾಬು ನಿರ್ಮಾಪಕರು.
ಒಟ್ಟಿನಲ್ಲಿ ಕಿಚ್ಚ ಸುದೀಪ್ಗೆ ಒಂದರ ಮೇಲೊಂದು ಸಮಸ್ಯೆಗಳು ಬರ್ತಿವೆ. ಪೈಲ್ವಾನ್ಗೆ ಪೈರಸಿ ಕಾಟ ಆಗಿತ್ತು. ಇದೀಗ ಕೋಟಿಗೊಬ್ಬ 3 ಸಿನಿಮಾಗೆ ಮುಂಬೈ ಮೂಲದ ಏಜೆನ್ಸಿ ಸಂಸ್ಥೆಯೇ ದೋಖಾ ಮಾಡಿದೆ. ಇದರಿಂದ ಹೇಗೆ ಪಾರಾಗ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?