Featured
ಕೆಜಿಎಫ್ 2 ಚಿತ್ರ ರಿಲೀಸ್ಗೆ ಮೂಹರ್ತ ಫಿಕ್ಸ್
ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ಚಿತ್ರ ಪ್ರೇಮಿಗಳಿಗೆಲ್ಲಾ ಒಂದು ಸಿಹಿ ಸುದ್ದಿ ಸಿಕ್ಕಿದೆ. ಎಲ್ಲರೂ ಕಾತರದಿಂದ ಕಾಯುತ್ತಿರುವ ಕೆಜಿಎಫ್ ಚಾಪ್ಟರ್ 2 ಚಿತ್ರ ರಿಲೀಸ್ ಯಾವಾಗ ಅನ್ನೋದು ರಿವೀಲ್ ಆಗಿದೆ.
ಕೊರೊನಾ ಲಾಕ್ ಡೌನ್ ನಂತರ ಮೊನ್ನೆಯಷ್ಟೆ ನಿರ್ದೇಶಕ ಪ್ರಶಾಂತ್ ನೀಲ್ ನೇತೃತ್ವದ ಕೆಜಿಎಫ್ 2 ಚಿತ್ರ ತಂಡ ಉಡುಪಿಯ ಮೆಲ್ಪೆ ಬೀಚ್ನಲ್ಲಿ ಅದ್ದೂರಿಯಾಗಿ ಸೆಟ್ಸ್ ಹಾಕಿ ನಟ ಯಶ್ ಮತ್ತು ನಟಿ ಶ್ರೀನಿಧಿ ಅವರನ್ನ ಹಾಕಿಕೊಂಡು ಭರ್ಜರಿಯಾಗಿ ಚಿತ್ರಿಕರಣ ಮಾಡಿತ್ತು. ಸದ್ಯ ಕ್ಲೈಮ್ಯಾಕ್ಸ್ ಹಂತದ ಚಿತ್ರಿಕರಣವನ್ನ ಪೂರೈಸುತ್ತಿದೆ.ಇದು ಯಶ್ ಅಭಿಮಾನಿಗಳಿಗೆ ಇನ್ನಿಲ್ಲದ ಖುಷಿ ಕೊಟ್ಟಿತ್ತು.
ಇದೀಗ ಕೆಜಿಎಫ್ ಚಿತ್ರ ತಂಡ ಮತ್ತೊಂದು ಸಿಹಿ ಸುದ್ದಿ ಕೊಟ್ಟಿದೆ.ಮುಂದಿನ ಜನವರಿ 14ಕ್ಕೆ ಕೆಜಿಎಫ್ ಚಾಪ್ಟರ್ 2 ರಿಲೀಸ್ಆಗಲಿದೆ ಎಂದು ತಿಳಿದು ಬಂದಿದೆ. 2021 ರಲ್ಲಿ ರಿಲೀಸ್ ಆಗಲಿರುವ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಆಗಿದೆ.
ಬಹುತೇಕ ಜನವರಿ 14 ರಂದು ರಿಲೀಸ್ ಆಗೋದು ಕನ್ಫರ್ಮ್ ಆಗಿದೆ. ಕೊರೊನಾ ಬ್ರೇಕ್ ನಡುವೆಯೂ ಕೆಜಿಎಫ್ 2 ಸಿನಿಮಾ ತೆರೆ ಬೇಗ ಬರುತ್ತಿರುವುದು ಚಿತ್ರ ಪ್ರೇಮಿಗಳನ್ನ ತುದಿಗಾಲಲ್ಲಿ ನಿಲ್ಲಿಸಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?