Featured
ಉಡುಪಿಯಲ್ಲಿ ಕೆಜಿಎಫ್ 2 ಭರ್ಜರಿ ಶೂಟಿಂಗ್: ಯಶ್ ನೋಡಲು ಬಂದ ಅಭಿಮಾನಿಗಳಿಗೆ ನಿರಾಸೆ
ರೈಸಿಂಗ್ ಕನ್ನಡ:
ಉಡುಪಿ:
ರಾಕಿ ಭಾಯಿ ಯಶ್ ಅಭಿನಯದ ಕೆಜಿಎಫ್ 2 ಹವಾ ಶುರು ಆಗಿದ್ದು, ಕೆಜಿಎಫ್ 2 ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ಉಡುಪಿಯಲ್ಲಿ ನಡೆಯುತ್ತಿದೆ..ಚಿತ್ರದ ಜಬರ್ದಸ್ತ್ ಸೀಕ್ವೆನ್ಸ್ ಗಾಗಿ ಅದ್ದೂರಿ ಸೆಟ್ ಹಾಕಲಾಗಿದ್ದು, ಚಿತ್ರೀಕರಣ ಬರದಿಂದ ನಡೆಯುತ್ತಿದೆ..
ಕಪ್ಪು ಬಣ್ಣದ 8 – 10 ಕಾರುಗಳು.. ಅರಬ್ಬಿ ಸಮುದ್ರದ ತಟದಲ್ಲಿ ಐದಾರು ಬೋಟುಗಳು.. ಬ್ರೌನ್ ಅಂಡ್ ವೈಟ್ ಡ್ರೆಸ್ ನಲ್ಲಿ ಮಿಂಚುತ್ತಿರುವ ರಾಕಿಂಗ್ ಸ್ಟಾರ್ ಯಶ್.. ಕೊರೊನ ಲಾಕ್ಡೌನ್ ಮುಗಿಸಿದ ನಂತರ ಕೆಜಿಎಫ್ ಚಿತ್ರತಂಡ ಚಿತ್ರೀಕರಣ ಜೋರಾಗಿ ನಡೆಸುತ್ತಿದೆ. ಪ್ರಶಾಂತ್ ನೀಲ್ ಬೆಟಾಲಿಯನ್ ಉಡುಪಿ ಜಿಲ್ಲೆ ಮಲ್ಪೆ ಸಮೀಪದ ಪಡುಕೆರೆ ಕಡಲಕಿನಾರೆಯಲ್ಲಿ ಶೂಟಿಂಗ್ ನಡೆಯುತ್ತಿದೆ. ಚಿತ್ರದ ನಾಯಕ ಯಶ್ ಮತ್ತು ನಾಯಕಿ ಶ್ರೀನಿಧಿ ಶೆಟ್ಟಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.
ಎಂಟು ಹತ್ತು ಪಜೇರೋ ಕಾರುಗಳು ಗಿರ್ ಗಿರ್ ಅಂತ ರೌಂಡ್ ಹೊಡೀತಿದ್ರೆ ನಡುವೆ ಯಶ್ ಬಿಳಿ ಅಂಗಿ ಬ್ರೌನ್ ಪ್ಯಾಂಟ್ ನಲ್ಲಿ ಮಿರ ಮಿರ ಮಿಂಚುತಿದ್ದರು. ಪಕ್ಕದಲ್ಲಿ ಶ್ರೀನಿಧಿ ಗೋಲ್ಡನ್ ಮತ್ತು ಬ್ಲ್ಯಾಕ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಸೀಕ್ವೆನ್ಸ್ ಒಂದನ್ನು ಪಡುಕೆರೆ ಕಡಲಕಿನಾರೆಯಲ್ಲಿ ಚಿತ್ರೀಕರಿಸಲಾಯಿತು.
2 ಗ್ಯಾಂಗ್ ಸ್ಟರ್ ಗುಂಪುಗಳು ಅರಬ್ಬಿ ಸಮುದ್ರದಲ್ಲಿ ಮುಖಾಮುಖಿಯಾಗುವ ದೃಶ್ಯವನ್ನು ಕೂಡ ಈ ಸಂದರ್ಭದಲ್ಲಿ ಸೆರೆಹಿಡಿಯಲಾಯಿತು. ಅರಬ್ಬಿ ಸಮುದ್ರದಲ್ಲಿ ಒಟ್ಟು ಮೂರು ಮೀನುಗಾರಿಕಾ ಬೋಟ್ ಗಳನ್ನು ಕೆಜಿಎಫ್2 ಚಿತ್ರಕ್ಕೆ ಬಳಸಲಾಗಿದೆ.
ರಾಕಿ ಬಾಯ್ ನನ್ನು ನೋಡಬೇಕು ಸೆಲ್ಫಿ ತೆಗಿಬೇಕು ಅಂತ ನೂರಾರು ಮಂದಿ ಪಡುಕೆರೆ ಕಡಲಕಿನಾರೆಗೆ ಬಂದಿದ್ದರು. ಆದರೆ ಆದರೆ ಸಮುದ್ರತೀರದಲ್ಲಿ ಸುಮಾರು ನೂರು ಮಂದಿ ಬೌನ್ಸರ್ ಗಳು ಮೊಬೈಲ್ ಚಿತ್ರೀಕರಣ ನಡೆಸದಂತೆ ತಡೆದರು ಯಶ್ ಅವರನ್ನು
ಹತ್ತಿರದಿಂದ ನೋಡಬೇಕು ಎಂದು ದೂರದ ಊರುಗಳಿಂದ ಬಂದಿದ್ದ ಯುವಕ-ಯುವತಿಯರಿಗೆ ನಿರಾಶೆಯಾಯಿತು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?