Featured
ಸಂಜಯ್ ದತ್ ಹುಟ್ಟು ಹಬ್ಬಕ್ಕೆ ಕೆಜಿಎಫ್ 2 ಭರ್ಜರಿ ಗಿಫ್ಟ್: ಸೂಪರ್ ಸ್ಟಾರ್ ಸಂಜಯ್ ದತ್ ಸಂತಸ
ರೈಸಿಂಗ್ ಕನ್ನಡ :
ಸಿನಿಮಾ ಡೆಸ್ಕ್
ಕೆಜಿಎಫ್ 2 ಸಿನಿಮಾ ಎಲ್ಲರನ್ನ ತುದಿಗಾಲಲ್ಲಿ ನಿಲ್ಲಿಸಿದೆ. ಇದೀಗ ಸಿನಿಮಾ ಪೋಸ್ಟರ್ ಸಿನಿಮಾ ರಸಿಕರ ಕುತೂಹಲವನ್ನ ಹೆಚ್ಚಿಸಿದೆ.
ಜುಲೈ 29, ಬಾಲಿವುಡ್ ನಟ ಸಂಜಯ್ ದತ್ ಅವರ ಹುಟ್ಟುಹಬ್ಬ. ಸಂಜಯ್ ದತ್ ಅವರ ಹುಟ್ಟುಹಬ್ಬದ ಸಂಭ್ರಮವನ್ನ ಹೆಚ್ಚಿಸುವುದಕ್ಕಾಗಿ ಕೆಜಿಎಫ್ 2 ಚಿತ್ರ ತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ.ಇದರೊಂದಿಗೆ ಚಿತ್ರ ಹೇಗಿದೆ ಎನ್ನುವ ಹಿಂಟ್ ಸಿಕ್ಕಿದೆ.
ಎಲ್ಲರನ್ನ ಇಂಪ್ರೆಸ್ ಮಾಡಿರುವ ಪೋಸ್ಟರ್ನಲ್ಲಿ ಅಧೀರ ಪಾತ್ರ ಮಾಡಿರುವ ಸಂಜಯ್ ದತ್ ಅವರ ಪಾತ್ರವಿದೆ.ಅಧೀರ ಖಡ್ಗವನ್ನ ತಲೆಗೆ ಒ್ತತಿ ಕೂತಿದ್ದಾನೆ. ಅಧೀರನ ಮುಖದ ಮೇಲೆ ದೇವನಾಗರಿ ಲಿಪಿಯನ್ನ ಬರೆಯಲಾಗಿದೆ.ಅಧೀರನ ಕಾಸಸ್ಟ್ಯೂಮ್ ಗಮನ ಸೆಳೆಯುತ್ತದೆ.
ಅಧೀರನ ಪಾತ್ರ ಮಾಡಲು ಸಂಜಯ್ ದತ್ ಮೈಸೂರಿಗೆ ಆಗಮಿಸಿದ್ದರು.
ಭರ್ಜರಿ ಗಿಫ್ಟ್‌ಗೆ ಸಂಜಯ್ ದತ್ ಸಂತಸ
ಕೆಜಿಎಫ್ ಚಿತ್ರತಂಡ ನೀಡಿರೋ ಬರ್ತ್‌ಡೇ ಗಿಫ್ಟ್‌ಗೆ ಸೂಪರ್ ಸ್ಟಾರ್ ಸಂಜಯ್ ದತ್ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಇನ್ಸ್‌ಟಾಗ್ರಾಮ್ ಪೇಜ್‌ನಲ್ಲಿ ರಿಯಾಕ್ಷನ್ ನೀಡಿರೋ ಸಂಜುಬಾಬಾ, ಇಂತದ್ದೊಂದು ಚಿತ್ರದಲ್ಲಿ ಅಭಿನಯಿಸಿದ್ದಕ್ಕೆ ಸಂತಸವಿದೆ. ಇದು ನನ್ನ ಅದೃಷ್ಟ ಎಂದಿದ್ದಾರೆ. ಅಲ್ಲದೇ, ಹುಟ್ಟಹುಬ್ಬಕ್ಕೆ ಇದಕ್ಕಿಂತ ಮಿಗಿಲಾದ ಯಾವುದೇ ಉಡುಗೊರೆಯನ್ನೂ ನಿರೀಕ್ಷಿಸೋದಕ್ಕೆ ಸಾಧ್ಯವಿಲ್ಲ ಎಂದು ಚಿತ್ರತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ಅಲ್ಲದೇ ಪ್ರಶಾಂತ್ ನೀಲ್, ರಾಕಿ ಭಾಯ್ ಯಶ್, ವಿಜಯ್ ಕಿರಗುಂದೂರ್, ಲಿಖಿತಾ, ಪ್ರದೀಪ್ ಹೇಗೆ ಚಿತ್ರತಂಡದ ಎಲ್ಲಾ ಸದಸ್ಯರ ಹೆಸರನ್ನೂ ಪ್ರಸ್ತಾಪಿಸಿದ್ದು, ಸಂಪೂರ್ಣ ಚಿತ್ರತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ಒಟ್ಟಿನಲ್ಲಿ ಅಧೀರಾ ಪಾತ್ರದ ಈ ಲುಕ್‌ನೊಂದಿಗೆ ಆ ಕ್ಯಾರೆಕ್ಟರ್‌ನ ಭೀಕರತೆ ಎಷ್ಟಿದೆ ಅನ್ನೋದು ಗೊತ್ತಾಗುತ್ತಿದೆ. ಚಿತ್ರ ಆದಷ್ಟು ಬೇಗ ಬರಲಿ ಅಂತ ಆಶಿಸೋಣ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?