Featured
ಕನ್ನಡ ರಾಜ್ಯೋತ್ಸವಕ್ಕೆ ಕೆಜಿಎಫ್ ಸಿನಿಮಾ ರೀ-ರಿಲೀಸ್ : ರಾಕಿಭಾಯ್ ಯಶ್ ಅಬ್ಬರ
ರೈಸಿಂಗ್ ಕನ್ನಡ : ರಾಕಿಂಗ್ ಸ್ಟಾರ್ ಯಶ್ಗೆ ಈಗ ಡಬಲ್ ಸಂಭ್ರಮ. ಎರಡನೇ ಮಗು ಆಗಿರೋ ಖುಷಿ ಒಂದು ಕಡೆಯಾದ್ರೆ, ಕನ್ನಡ ಚಿತ್ರರಂಗದ ಹೆಮ್ಮೆ ಎಂದೇ ಖ್ಯಾತಿ ಪಡೆದಿದ್ದ ಕೆಜಿಎಫ್ ಸಿನಿಮಾ ಮತ್ತೆ ರೀ-ರಿಲೀಸ್ ಆಗ್ತಿರೋದು ಮತ್ತೊಂದು ಖುಷಿ ವಿಚಾರ. ಯೆಸ್, ಕೆಜಿಎಫ್ ಚಾಪ್ಟರ್-2ಗಾಗಿ ಪ್ರೇಕ್ಷಕರು ಕಾತರದಿಂದ ಕಾಯ್ತಿದ್ರೆ, ಇತ್ತ ರಾಜ್ಯೋತ್ಸವ ಕೆಜಿಎಫ್ ಮೊದಲ ಪಾರ್ಟ್ ರೀ-ರಿಲೀಸ್ ಆಗ್ತಿದೆ..
ಕಳೆದ ವರ್ಷ ಐದು ಭಾಷೆಗಳಲ್ಲಿ ದೇಶಾದ್ಯಂತ ತೆರೆಕಂಡು ಸುಮಾರು 250 ಕೋಟಿ ಬಾಚಿದ್ದ ಸಿನಿಮಾ ಕೆಜಿಎಫ್. ಪ್ರಶಾಂತ್ ನೀಲ್ ಡೈರೆಕ್ಷನ್, ಯಶ್ ಆ್ಯಕ್ಟಿಂಗ್ಗೆ ಇಡೀ ಸಿನಿಮಾ ಪ್ರೇಕ್ಷಕರು ಮಾರುಹೋಗಿದ್ರು. ಕನ್ನಡದಲ್ಲೇ ಅಲ್ಲದೆ, ಹಿಂದಿಯಲ್ಲೂ ದೊಡ್ಡಮಟ್ಟದ ಕ್ರೇಜ್ ಹುಟ್ಟು ಹಾಕಿತ್ತು ಕನ್ನಡದ ಕೆಜಿಎಫ್. ಇದೀಗ ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಕೆಜಿಎಫ್ ಚಾಪ್ಟರ್ 1, ರೀ ರಿಲೀಸ್ ಆಗ್ತಿದೆ.
ಕೆಜಿಎಫ್ ರಿ ರಿಲೀಸ್ ಆಗ್ತಿರೋ ವಿಚಾರವನ್ನ ಚಿತ್ರತಂಡ ಸ್ಪಷ್ಟಪಡಿಸಿದ್ದು, ರಾಜ್ಯೋತ್ಸವಕ್ಕೆ ಬೆಳ್ಳಿ ತೆರೆಮೇಲೆ ಮತ್ತೊಮ್ಮೆ ರಾಕಿ ಭಾಯ್ ಅಬ್ಬರಿಸಲಿದ್ದಾರೆ. 30ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಕೆಜಿಎಫ್ ರಿಲೀಸ್ ಆಗ್ತಿದ್ದು, ವಿಶೇಷ ಎನ್ನುವಂತೆ, ಟಿಕೆಟ್ ದರದಲ್ಲಿ ಕಡಿತಗೊಳಿಸಲಾಗಿದೆ. ಬೆಂಗಳೂರಿನ ನಗರದ ಊರ್ವಶಿ, ಕಾವೇರಿ, ಸಂಪಿಗೆ ಸೇರಿ ಹಲವು ಮಲ್ಟಿಫ್ಲೆಕ್ಸ್ಗಳಲ್ಲೂ ಕೆಜಿಎಫ್ ತೆರೆ ಕಾಣ್ತಿದೆ. ವಿಶೇಷ ಅಂದ್ರೆ, 200, 300 ರೂಪಾಯಿ ಇದ್ದ ಟಿಕೆಟ್ ದರ, 30, 40 ಹಾಗೂ 50 ರೂಪಾಯಿಗೆ ಇಳಿಕೆ ಮಾಡಲಾಗಿದೆ.
ಸೋ, ಇನ್ಯಾಕೆ ತಡ, ಈಗಲೇ ಬುಕ್ ಮಾಡಿಕೊಳ್ಳಿ.. ಮತ್ತೊಮ್ಮೆ ಬಿಗ್ ಸ್ಕ್ರೀನ್ನಲ್ಲಿ ಕೆಜಿಎಫ್ ನೋಡೋಕೆ ರೆಡಿಯಾಗಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?