Connect with us

Featured

ಕೆಲೋಜಿ ಕುಟುಂಬದಿಂದ ಭೂ ಕಬಳಿಕೆ: ಆರೋಪ‌ ಶುದ್ದ ಸುಳ್ಳೆಂದ ಸಂತೋಷ ಕೆಲೋಜಿ -ಕರ್ನಾಟಕ ಭೂ ನ್ಯಾಯ ಮಂಡಳಿ ಅಂಗಳದಲ್ಲಿ ಪ್ರಕರಣ

ರೈಸಿಂಗ್​ ಕನ್ನಡ:

ನಾಗರಾಜ್​. Y. ಕೊಪ್ಪಳ

ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಹೃದಯಭಾಗದಲ್ಲಿರುವ ಆನೆಗೊಂದಿ ರಸ್ತೆಯ ಸುಮಾರು 22.33 ಎಕರೆ ದಾನರೂಪದ ಜಾಗವನ್ನು ಕೆಲೋಜಿ ಕುಟುಂಬ ಕಬಳಿಕೆ ಮಾಡಿದೆ ಎಂದು ಕೊಪ್ಪಳ ಜಿಲ್ಲಾ ಭ್ರಷ್ಟಾಚಾರ ಅವ್ಯವಹಾರ ಹೋರಾಟ ಸಮಿತಿಯ ಗಂಗಾವತಿ ತಾಲೂಕು ಮುಖಂಡ ಸೈಯದ್ ಅಲಿ ಆರೋಪಿಸಿದರು‌.

Advertisement

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಬುಧವಾರ ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಅವರು, ಗಂಗಾವತಿಯ ಸರ್ವೇ ನಂಬರ್ 202ರ 22.33 ಎಕರೆ ಜಾಗವನ್ನು ಮೂಲ ಹಕ್ಕುದಾರ ಜೈರಾಮಾಚಾರ್ ಅವರು ಸುತ್ತಮುತ್ತಲಿನ ಪ್ರೇಕ್ಷಣೀಯ, ಐತಿಹಾಸಿಕ ಹಾಗೂ ಧಾರ್ಮಿಕ ತಾಣಗಳಿಗೆ ಬರುವ ಯಾತ್ರಾರ್ಥಿಗಳಿಗೆ, ನಿರ್ಗತಿಕರಿಗೆ, ಬಡವರಿಗೆ ಅನುಕೂಲ ಕಲ್ಪಿಸುವ ಸಾಮಾಜಿಕ ಕಳಕಳಿ ಇಟ್ಟುಕೊಂಡು 1974-75ರಲ್ಲಿ ಅಂದಿನ ಗಂಗಾವತಿ ಪುರಸಭೆಗೆ ದಾನರೂಪದಲ್ಲಿ ನೀಡಿದ್ದರು ಎಂದು ಅವರು ದಾಖಲೆ ಬಿಡುಗಡೆಗೊಳಿಸಿದರು.

1990ರವರೆಗೆ ಅದು ಪುರಸಭೆ (ಇಂದಿನ ನಗರಸಭೆ) ಆಸ್ತಿಯಾಗಿತ್ತು. ಆನಂತರ ರಾಜಕೀಯವಾಗಿ, ಆರ್ಥಿಕವಾಗಿ ಬಲಾಢ್ಯವಾಗಿರುವ ಕೆಲೋಜಿ ಕುಟುಂಬ ಈ ಆಸ್ತಿಯ ಮೇಲೆ ಕಣ್ಣು ಹಾಕಿ, “ಕೆಲೋಜಿ ತುಳಸಪ್ಪ ಧರ್ಮಶಾಲಾ ಚಾರಿಟಿ ಟ್ರಸ್ಟ್ “ಹೆಸರಿನಲ್ಲಿ ಟ್ರಸ್ಟ್ ಡೀಡ್ ಮಾಡಿಕೊಂಡು ಸರಕಾರಕ್ಕೆ ದಾನದ ರೂಪದಲ್ಲಿ ಬಂದ ಆಸ್ತಿಯನ್ನು ಅತಿಕ್ರಮಿಸಿಕೊಂಡಿದೆ. ಅಲ್ಲಿ ಈಗ ವಾಣಿಜ್ಯ ಸಂಕೀರ್ಣಗಳನ್ನು ಕಟ್ಟಿಕೊಂಡು, ಸರಕಾರಕ್ಕೆ ವಂಚಿಸುತ್ತಿದ್ದಾರೆ.

ಸೈಯದ್ ಅಲಿ, ಕೊಪ್ಪಳ ಜಿಲ್ಲಾ ಭ್ರಷ್ಟಾಚಾರ ಅವ್ಯವಹಾರ ಹೋರಾಟ ಸಮಿತಿಯ ಗಂಗಾವತಿ ತಾಲೂಕು ಮುಖಂಡ

ಗಂಗಾವತಿ ನಗರಸಭೆಗೆ ಟ್ರಸ್ಟ್ ಡೀಡ್ ಮರೆಮಾಚಿದ್ದು 2014ರಲ್ಲಿ‌ ಜಾಗದ ದಾಖಲೆಗಳನ್ನು ಪರಿಶೀಲಿಸಿಲಿದಾಗ ಬೆಳಕಿಗೆ ಬಂದಿದೆ. 2018ರಲ್ಲಿ ಮುಟೇಷನ್ ನಂಬರ್ 5-5-42/5-5-41ರ ಅನ್ವಯ ಈ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ತಡೆಯಾಜ್ಞೆ ನೀಡಲಾಗಿದೆ. ಜೊತೆಗೆ ಕೆಲೋಜಿ ಕುಟುಂಬ ಸೃಷ್ಟಿಸಿದ ಎಲ್ಲಾ ದಾಖಲೆಗಳು ಅಕ್ರಮ ಎಂದು ತಿಳಿಸಿರುವುದಲ್ಲದೇ ಜಾಗಕ್ಕೆ ಸಂಬಂಧಿಸಿದ ಮೂಲ ದಾಖಲೆಗಳನ್ನು ನಗರಸಭೆಗೆ ಸಲ್ಲಿಸುವಂತೆ ನೋಟೀಸ್ ನೀಡಿದೆ ಎಂದು ವಿವರಿಸಿದರು.

Advertisement

ದಾಖಲೆ ಸಮರದ ತರುವಾಯವೂ ಕೆಲೋಜಿ ಕುಟುಂಬ ನಗರಸಭೆಗೆ ಯಾವುದೇ ಮೂಲ ದಾಖಲೆಗಳನ್ನು ಸಲ್ಲಿಸದೇ, ಕರ್ನಾಟಕ ಭೂ ನ್ಯಾಯ ಮಂಡಳಿಯಲ್ಲಿ ವಿಷಯವನ್ನಿಟ್ಟು ಕಾಲವಿಳಂಬಕ್ಕೆ ಹೊಂಚು ಹಾಕಿದೆ. ಈಗಾಗಲೇ ನಗರಸಭೆ ಅಧಿಕಾರಿಗಳು ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಕ್ಕೆ ಸ್ಥಳ ಪರಿಶೀಲನೆ ಮತ್ತು ಪಂಚನಾಮೆ‌‌ ನಡೆಸಿದ ವಿವರವಾದ ವರದಿ ಸಲ್ಲಿಸಿದ್ದಾರೆ. ಆದಾಗ್ಯೂ ಕೆಲೋಜಿ ಕುಟುಂಬ ವಿಳಂಬಧೋರಣೆ ಅನುಸರಿಸುತ್ತಿದೆ ಎಂದು ಅವರು ದೂರಿದರು.

ಸೈಯದ್ ಅಲಿ ಮಾಡಿರುವ ಎಲ್ಲ ಆರೋಪಗಳು ಶುದ್ದ ಸುಳ್ಳು. ಆತನಿಗೆ ಮಾಡಲು ಬೇರೆ ಕೆಲಸವಿಲ್ಲ. ಆರ್‌ಟಿಐನಡಿ ಅರ್ಜಿ ಸಲ್ಲಿಸಿ, ದಿನಕ್ಕೆ ಸಾವಿರ ರೂಪಾಯಿ ಮನೆಗೆ ಒಯ್ಯುವುದೇ ಆತನ ಉದ್ಯೋಗ. ನಮ್ಮ ಕುಟುಂಬ ಯಾವುದೇ ಕಾನೂನು ಬಾಹಿರ ಕೃತ್ಯ ಎಸಗಿಲ್ಲ. ಗಂಗಾವತಿಯ ಬಸ್ ನಿಲ್ದಾಣ ಇರುವ ಜಾಗ ಮೂಲತಃ ನಮ್ಮದು. ಧರ್ಮಛತ್ರಕ್ಕಾಗಿ ದಾನವಾಗಿ ಕೊಟ್ಟ ಜಾಗವನ್ನು ಬಸ್ ನಿಲ್ದಾಣಕ್ಕೆ ಮಾಡಿಕೊಳ್ಳುವುದಾಗಿ ತಿಳಿಸಿ ಪರಿಹಾರವನ್ನು ಕೊಡುವುದಾಗಿ ತಿಳಿಸಿತ್ತು. ಆಗ ನಮ್ಮ ಕುಟುಂಬ ಪರಿಹಾರದ ಬದಲಿಗೆ ಬೇರೆಡೆ ಜಾಗ ಕೇಳಿದ್ದರಿಂದ ಸರ್ವೇ ನಂಬರ್ 202ರಲ್ಲಿ ಒಂದು ಎಕರೆ ಜಾಗವನ್ನು ಸರಕಾರ ನಮಗೆ ಕೊಟ್ಟಿದೆ. ಆ ಜಾಗದಲ್ಲಿ ನಾವು ದೇವಸ್ಥಾನ ಕಟ್ಟಿದ್ದೇವೆ. ನಮ್ಮದೇ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿದರೆ ತಪ್ಪೇನು? ಈ ಬಗ್ಗೆ ನಾನು ಯಾವ ಹೋರಾಟಕ್ಕೂ ಸಿದ್ಧ

– ಸಂತೋಷ್ ಕೆಲೋಜಿ, ಗಂಗಾವತಿ

Advertisement

ಒಟ್ಟಿನಲ್ಲಿ ಗಂಗಾವತಿಯಲ್ಲಿ ಕೆಲೋಜಿ ಕುಟುಂಬ ಮತ್ತಯ ಸಯ್ಯದ್​ ಆಲಿ ನಡುವಿ ಸಮರ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ಹೋಗುತ್ತದೆ ಅನ್ನುವುದುನ್ನ ಕಾದು ನೋಡಬೇಕಿದೆ.

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ