Featured
ಸ್ಪೀಡ್ ಪೋಸ್ಟ್ನಲ್ಲಿ ಬರಲಿದೆ ಕಾಶಿ ಪ್ರಸಾದ- ಶ್ರಾವಣ ಮಾಸದಲ್ಲಿ ವಿಶ್ವನಾಥನ ದರ್ಶನಕ್ಕಿಲ್ಲ ಅನುಮತಿ
ರೈಸಿಂಗ್ ಕನ್ನಡ ವೆಬ್ ಡೆಸ್ಕ್:
ಕಾಶಿಯಾತ್ರೆಗೆ ಹಿಂದೂ ಸಂಸ್ಕೃತಿಯಲ್ಲಿ ಬೇರೆಯದ್ದೇ ಸ್ಥಾನವಿದೆ. ಈ ಪವಿತ್ರಯಾತ್ರೆ ಮಾಡಲು ಪ್ರತೀ ವರ್ಷ ಕೋಟ್ಯಾಂತರ ಜನ ಕಾಶಿಗೆ ಬರುತ್ತಾರೆ. ಅದರಲ್ಲೂ ಶ್ರಾವಣ ಮಾಸದಲ್ಲಿ ಕಾಶಿಯಾತ್ರೆ ಮತ್ತು ವಿಶ್ವನಾಥ ಸ್ವಾಮಿಯ ದರ್ಶನ ಅಂದ್ರೆ ಅದಕ್ಕೆ ವಿಶೇಷ ಪ್ರಾಶಸ್ತ್ಯವಿದೆ. ಶ್ರಾವಣ ಮಾಸದಲ್ಲಿ ಪ್ರತೀ ವರ್ಷ ಕೋಟ್ಯಾಂತರ ಭಕ್ತರು ಕಾಶಿಯಾತ್ರೆ ಮಾಡಿ ಪುಣ್ಯ ಕಟ್ಟಿಕೊಳ್ಳುತ್ತಾರೆ. ಆದರೆ ಈ ಬಾರಿ ಕೊರೊನಾ ಹಾವಳಿಯಿಂದ ಕಾಶಿಯಾತ್ರೆಗೆ ಅವಕಾಶವಿಲ್ಲ. ವಿಶ್ವನಾಥನ ದರ್ಶನ ಪಡೆಯಲು ಅವಕಾಶವೂ ಇಲ್ಲ.
ಕೊರೊನಾದಿಂದ ಕಾಶಿಯಾತ್ರೆ ಮಾತ್ರ ಸಾಧ್ಯವಿಲ್ಲ. ಆದ್ರೆ ಭಕ್ತರು ಕಾಶಿ ವಿಶ್ವನಾಥನ ಪ್ರಸಾದ ಪಡೆದುಕೊಳ್ಳಬಹುದು. ಕಾಶಿಗೆ ಬೇಟಿ ನೀಡಲು ಸಾಧ್ಯವಿಲ್ಲದಿರುವ ಈ ಕಾಲದಲ್ಲಿ ಕಾಶಿ ವಿಶ್ವನಾಥ ದೇಗುಲ ಮತ್ತು ಅಂಚೆ ಇಲಾಖೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ನಿಮ್ಮ ಮನೆ ಬಾಗಿಲಿಗೆ ಪುಣ್ಯ ಪ್ರಸಾದ ಬರಲಿದೆ. ಸ್ಪೀಡ್ ಪೋಸ್ಟ್ ಮೂಲಕ ಪ್ರಸಾದ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಶ್ರಾವಣ ಮಾಸದ ಸೋಮವಾರದಿಂದ ಈ ವ್ಯವಸ್ಥೆ ಜಾರಿಯಾಗಲಿದೆ.
ಪ್ರಸಾದಕ್ಕೆ ನೀವೇನು ಮಾಡಬೇಕು..?
ಅಂದಹಾಗೇ ಆನ್ಲೈನ್ನಲ್ಲಿ ಪೂಜೆ, ಅದು ಇದು ಅಂತ ಕೇಳಿದ್ದೀರಾ. ಆದ್ರೆ ಕಾಶಿ ವಿಶ್ವನಾಥನ ಪ್ರಸಾದ ನಿಮ್ಮ ಮನೆಗೆ ಬರಬೇಕಾದರೆ ಸಣ್ಣ ಕೆಲಸ ಮಾಡಬೇಕು. ನೀವು ಭಾರತದ ಯಾವುದೇ ಅಂಚೆ ಕಚೇರಿಗೆ ತೆರಳಿ 251 ರೂಪಾಯಿಗಳ ಎಲೆಕ್ಟ್ರಾನಿಕ್ ಮನಿ ಆರ್ಡರ್ ಅಂದರೆ ಇಎಂಒ ಮಾಡಬೇಕು. ಅದನ್ನು ವಾರಾಣಾಸಿಯ ಪೂರ್ವ ವಿಭಾಗದ ಸೂಪರಿಟೆಂಡೆಂಟ್ ಅಂಚೆ ಕಚೇರಿಗೆ ಕಳುಹಿಸಬೇಕು. ಈ ಕೆಲಸ ಮಾಡಿದ 3 ದಿನಗಳ ಬಳಿಕ ಸ್ಪೀಡ್ ಪೋಸ್ಟ್ನಲ್ಲಿ ಕಾಶಿ ವಿಶ್ವನಾಥನ ಪ್ರಸಾದ ನಿಮಗೆ ತಲುಪಲಿದೆ.
ಪ್ರಸಾದಲ್ಲಿ ಏನೇನು ಇರಲಿದೆ..?
ಕಾಶಿಯಿಂದ ಸ್ಪೀಡ್ ಪೋಸ್ಟ್ ಮೂಲಕ ಬರುವ ಪ್ರಸಾದದಲ್ಲಿ ವಿಶ್ವನಾಥ ದೇವಾಲಯದ ಜ್ಯೋತಿರ್ಲಿಂಗ, ಮಹಾ ಮೃತುಂಜಯ ಮಹಾ ಯಂತ್ರ, ಶಿವ ಚಾಲೀಸಾ, ರುದ್ರಾಕ್ಷಿ, ಡ್ರೈ ಫ್ರೂಟ್ಸ್, ವಿಭೂತಿ ಮತ್ತು ಒಂದು ಪ್ಯಾಕೆಟ್ ಸಿಹಿತಿಂಡಿ ಹಾಗೂ ದೇವರ ಫೋಟೋಗಳಿರಲಿದೆ. ಒಟ್ಟಿನಲ್ಲಿ ಕರೊನಾ ಕಾಲದಲ್ಲಿ ಕಾಶಿ ಪ್ರಸಾದ ತಿಂದು ಪುಣ್ಯ ಕಟ್ಟಿಕೊಳ್ಳಬೇಕು ಅಂತ ಯೋಚನೆ ಮಾಡುತ್ತಿರುವವರು ಇದರ ಉಪಯೋಗ ಪಡೆದುಕೊಳ್ಳಿ..!
You may like
ಗ್ಯಾನವಾಪಿಯಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ನೀಡಿದ್ದೇಕೆ ಹೈಕೋರ್ಟ್..?
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?