Connect with us

ಸಿನಿಮಾ

ಕಾಂತಾರ ಗುಟ್ಟು ರಟ್ಟು, ಮಾಡಿದ್ರಾ.?ರಿಷಭ್ ಶೆಟ್ಟಿ ..?

ಸಿನಿಮಾ : ನಿರ್ದೇಶಕನಾಗಿ ಅಷ್ಟೇ ಅಲ್ಲ ನಾಯಕ ನಟನಾಗಿಯೂ ಗೆದ್ದವರು ರಿಷಬ್ ಶೆಟ್ಟಿ. ಕಾಂತಾರ ಚಿತ್ರದ ಮೂಲಕ ಕನ್ನಡದ ಕಹಳೆಯನ್ನ ಮೊಳಗಿಸಿದ ರಿಷಬ್ ಶೆಟ್ಟಿ, ನಿನಿನ್ನೆಯ ಸಂದರ್ಭದಲ್ಲಿ ಭಾಗವಹಿಸಿದ್ದರು. ಸೌತ್ & ನಾರ್ತ್ ಇಂಡಿಯಾ ಸಮಾಗಮಕ್ಕೆ ಸಾಕ್ಷಿಯಂತೆ ಇದ್ದ ಈ ಕಾರ್ಯಕ್ರಮದಲ್ಲಿ ತಮ್ಮ ಮನದ ಮಾತನ್ನೂ ಹಂಚಿಕೊಂಡರು. ಕಾಂತಾರ ಕಥೆ ಇಂದು ನಿನ್ನೆ ಹುಟ್ಟಿದ್ದಲ್ಲ, ಅನೇಕ ವರ್ಷಗಳಿಂದ ಎದೆಯಲ್ಲಿ ಕಾಪಿಟ್ಟುಕೊಂಡ ಕಥೆ ಎಂದರು ರಿಷಬ್ ಶೆಟ್ಟಿ.

ವರುಣ್ ಧವನ್ ಅವರ ಪ್ರೀತಿಯ ಆಹ್ವಾನದ ಮೇರೆಗೆ ವೇದಿಕೆಯನ್ನೇರಿದ ರಿಷಬ್ ಶೆಟ್ಟಿ ಕನ್ನಡದಲ್ಲಿ ಮಾತು ಆರಂಭಿಸಿದರು. ಆ ನಂತರ ಯಕ್ಷಗಾನದಿಂದಲೇ ನಟನೆಗಿಳಿದಿದ್ದಾಗಿ ಹೇಳಿದರು. ಮೊದಲಿಂದ ನಮ್ಮ ಊರಿನ ಜನಪದ ಕತೆಗಳನ್ನು ಹೇಳುವ ಹಂಬಲ ನನ್ನಲ್ಲಿ ಇತ್ತು ಎಂದ ರಿಷಬ್ ಶೆಟ್ಟಿ, ಕಾಲೇಜ್ ನಲ್ಲಿದ್ದಾಗ ಕಾಂತಾರ ಚಿತ್ರದ ಕಥೆ ಎರಡು ಭಾಗದಲ್ಲಿ ನನ್ನ ತಲೆಯಲ್ಲಿ ಓಡ್ತಾನೇ ಇತ್ತು ಎಂದರು. ಇನ್ನೂ ಅದಾದ ನಂತರ ನಾನು ಚಿತ್ರರಂಗಕ್ಕೆ ಬಂದೆ. ಚಿತ್ರ ಮಾಡುವ ಕಲೆ ಅರಿತುಕೊಂಡೆ. ಕಾಂತಾರ ಚಿತ್ರದ ಚಿತ್ರಕಥೆಯನ್ನೂ ಸಿದ್ದ ಪಡಿಸಿಕೊಂಡೆ, ನನ್ನ ಸೌಭಾಗ್ಯ ಸರಿಯಾದ ಸಮಯಕ್ಕೆ ಹೊಂಬಾಳೆ ಸಂಸ್ಥೆ ನನಗೆ ಸಿಕ್ಕಿತು ಎಂದರು ರಿಷಬ್ ಶೆಟ್ಟಿ.

ಇನ್ನೂ ಇದೇ ಸಮಯದಲ್ಲಿ ಕಾಂತಾರ ಚಿತ್ರದ ಮೊದಲ ಭಾಗದ ಗುಟ್ಟನ್ನೂ ರಟ್ಟು ಮಾಡಿದ ರಿಷಬ್ ಶೆಟ್ಟಿ, ‘ಕಾಂತಾರ 2’ಗಾಗಿ ನಮ್ಮ ಊರಿನ ಬಳಿಯೇ ದೊಡ್ಡದಾದ ಸೆಟ್ ನಿರ್ಮಾಣ ಮಾಡಿದ್ದೇವೆ. ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದೆ ಎಂದರು. ‘ಕಾಂತಾರ’ ಸಿನಿಮಾದ ಚಿತ್ರೀಕರಣ ಮಾಡುವಾಗಲೇ ಸೀಕ್ವೆಲ್ ಮಾಡುವ ಪ್ಲ್ಯಾನ್ ಇತ್ತು. ‘ಕಾಂತಾರ’ ಸಿನಿಮಾ ಬಿಡುಗಡೆ ಆದ ಬಳಿಕ ಭಾರತದ ಪ್ರೇಕ್ಷಕರು ಆ ಸಿನಿಮಾಕ್ಕೆ ಕೊಟ್ಟ ಗೌರವ ಬಹಳ ದೊಡ್ಡದು. ಅದು ನನ್ನ ಪುಣ್ಯವೆಂದೇ ನಾನು ಭಾವಿಸಿದ್ದೀನಿ ಎಂದು ತಲೆ ಬಾಗಿದರು ರಿಶಬ್ ಶೆಟ್ಟಿ.

ಕಾರ್ಯಕ್ರಮದಲ್ಲಿ ರಿಷಬ್ ಮಾತ್ರ ಅಲ್ಲ ಹೊಂಬಾಳೆ ಫಿಲ್ಮ್ಸ್​ನ ಸಹ ನಿರ್ಮಾಪಕ ಆಗಿರುವ ಚೆಲುವೇ ಗೌಡ ಕೂಡ ಇದ್ದರು. ರಿಷಬ್ ನಂತರ ಅವರು ಕೂಡ ಚಿತ್ರದ ಕುರಿತು ಕೆಲ ಮಾಹಿತಿ ಹಂಚಿಕೊಂಡರು.’ಕಾಂತಾರ’ ಅಥವಾ ಇನ್ಯಾವುದೇ ಕತೆಯನ್ನು ನಾವು ಆಯ್ಕೆ ಮಾಡುವಾಗ ನಾವು ಪ್ರೇಕ್ಷಕರಿಗೆ ಏನು ಭಿನ್ನವಾಗಿ ನೀಡುತ್ತಿದ್ದೇವೆ ಎಂಬುದನಷ್ಟೇ ನಾವು ನೋಡುತ್ತೇವೆ ಎಂದ ಚೆಲುವೇ ಗೌಡ , ಕಾಂತಾರ ನಮ್ಮ ನೆಲದ ಕತೆ ಅದರಲ್ಲಿಯೂ ಕರಾವಳಿ ಭಾಗದ ಸಂಸ್ಕೃತಿ ಈ ಕತೆಯನ್ನು ಸಾಧ್ಯವಾದಷ್ಟು ಜನರಿಗೆ ತಲುಪಿಸುವ ಪ್ರಯತ್ನ ನಾವು ಮಾಡಿ, ಅದ್ರಲ್ಲಿ ಯಶಸ್ವಿಯೂ ಆಗಿದ್ದಾಗಿ ಹೇಳಿದರು.

ಅಂದ ಹಾಗೇ ಕಾಂತಾರ ಸಿನಿಮಾ ಈಗಾಗಲೇ ಅಮೆಜಾನ್ ಪ್ರೈಂನಲ್ಲಿದೆ. ಇನ್ನೂ ವಿಶೇಷ ಅಂದರೆ ರಿಷಬ್ ಶೆಟ್ಟಿ ಕಾಂತಾರ ಮೊದಲ ಭಾಗದ ಚಿತ್ರೀಕರಣ ಇನ್ನೂ ಆರಂಭವನ್ನೇ ಮಾಡಿಲ್ಲ. ಆದರೆ ಅದಕ್ಕೂ ಮೊದಲೇ ಕಾಂತಾರ ಪ್ರಿಕ್ವೆಲ್ ನ ಹಕ್ಕುಗಳನ್ನ ಅಮೆಜಾನ್ ಖರೀದಿಸಿದೆ.

ಅಮೆಜಾನ್ ಹಾಗೂ ಹೊಂಬಾಳೆ ನಡುವೆ ನಡೆದ ಡೀಲ್ ಎಷ್ಟು ಕೋಟಿಗೆ ಕುದುರಿದೆ ಅನ್ನುವುದು ಸದ್ಯಕ್ಕೆ ನಿಗೂಡ ರಹಸ್ಯ ಒಟ್ಟಿನಲ್ಲಿ ಕನ್ನಡ ಚಿತ್ರಗಳಿಗೆ ಒಟಿಟಿಯಲ್ಲಿ ಬೆಲೆ ಇಲ್ಲ ಅನ್ನುವ ಮಾತಿನ ನಡುವೆ, ಕಾಂತಾರ ಚಿತ್ರದ ಮೊದಲ ಭಾಗದ ಹಕ್ಕುಗಳು ಬಿಕರಿಯಾಗಿವೆ. ಅದು ಚಿತ್ರದ ಚಿತ್ರೀಕರಣಕ್ಕೂ ಮುನ್ನವೇ.

Advertisement

ಬಹುಶ: ಕನ್ನಡ ಚಿತ್ರದ ಚಿತ್ರೀಕರಣಕ್ಕೂ ಮುನ್ನವೇ ಒಟಿಟಿ ಅಂಗಳದಲ್ಲಿ ಇಂಥಹದ್ದೊಂದು ಡೀಲ್ ಹಿಂದೆ ನಡೆದ ಉದಾಹರಣೆ ಚಂದನವನದಲ್ಲಿ ಇಲ್ಲ. ಈ ಅರ್ಥದಲ್ಲಿ ಕನ್ನಡ ಚಿತ್ರರಂಗದ ಮಟ್ಟಿಗೆ ಇದು ಕೂಡ ಒಂದು ದಾಖಲೆ. ಕನ್ನಡ ಚಿತ್ರರಂಗ ಹೆಮ್ಮೆ ಪಡಲು ಇಷ್ಟು ಸಾಕಲ್ಲವೇ..?

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ