ರೈಸಿಂಗ್ ಕನ್ನಡ :
ದುನಿಯಾ ವಿಜಯ್ ಅಭಿನಯದ ಸಲಗ ಸಿನಿಮಾ ಸಖತ್ ಸಕ್ಸಸ್ ಆಗಿದೆ. ಭರ್ಜರಿಯಾಗಿ ಕಲೆಕ್ಷನ್ ಮಾಡೋದ್ರ ಜೊತೆ ಸೂಪರ್ ಹಿಟ್ ಕೂಡ ಆಗಿದೆ. ಈ ನಡುವೆ, ಜನ ಮೊದಲಿನಂತೆ ಥಿಯೇಟರ್ಗಳಿಗೆ ಹೋಗ್ತಿಲ್ಲ ಅನ್ನೋ ಮಾತು ಕೇಳಿ ಬರ್ತಿದೆ. ಇಷ್ಟೆಲ್ಲದರ ಮಧ್ಯೆ, ಸಲಗ ಸಿನಿಮಾ ಬೇಗ ottಗೆ ಬರುತ್ತೆ. OTTಯಲ್ಲಿ ಬಿಡುಗಡೆ ಆಗುತ್ತೆ. ಹೀಗಾಗಿ ಥಿಯೇಟರ್ಗೆ ಯಾಕೆ ಹೋಗ್ಬೇಕು ಅನ್ನೋ ವದಂತಿ ಜೋರು ಸದ್ದು ಮಾಡಿದೆ.
ಈ ರೀತಿಯ ವದಂತಿ ಹಾಗೂ ಸುಳ್ಳು ಸುದ್ದಿಯಿಂದ ದುನಿಯಾ ವಿಜಿ ತುಂಬಾನೇ ಬೇಜಾರ್ ಆಗಿದ್ದಾರೆ. ಹೀಗಾಗಿನೇ ದುನಿಯಾ ವಿಜಯ್, ಇದಕ್ಕೆ ಸ್ಪಷ್ಟನೆ ನೀಡಿದ್ದು, ಸಲಗ ಸಕ್ಸಸ್ ಸಹಿಸದವರು ಈ ರೀತಿ ಮಾಡಿದ್ದಾರೆಂದು ಆಕ್ರೋಶವನ್ನ ಹೊರಹಾಕಿದ್ದಾರೆ…