Featured
ಕನ್ನಡ ಧ್ವಜಾರೋಹಣ ಮಾಡಿದ್ದು ನನ್ನ ಭಾಗ್ಯ : ಕಷ್ಟ ನೆನೆದು ಡಿಕೆ ಶಿವಕುಮಾರ್ ಹೇಳಿದ್ದೇನು..?
![](https://risingkannada.com/wp-content/uploads/2019/10/dkshi-02.jpeg)
ಬೆಂಗಳೂರು : ಕನ್ನಡ ರಾಜ್ಯೋತ್ಸವದ ಇವತ್ತಿನ ದಿನ ಕನ್ನಡ ಧ್ವಜಾರೋಹಣ ಮಾಡಿದ್ದು ನನ್ನ ಭಾಗ್ಯ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನ ಗಾಂಧಿನಗರದ ಕರವೇ ಕಚೇರಿಯಲ್ಲಿ ಡಿಕೆ ಶಿವಕುಮಾರ್, ಕನ್ನಡ ಧ್ವಜಾರೋಹಣ ಮಾಡಿದ್ರು. ಈ ವೇಳೆ ಮಾತ್ನಾಡಿದ ಡಿಕೆಶಿ, ಗಾಂಧಿನಗರದ ಪ್ರತಿಯೊಂದು ಹಾವ, ಭಾವ ಅರಿತುಕೊಂಡು ಬಂದವನು ನಾನು. ಕಷ್ಟ ಕಾಲದಲ್ಲಿ ಅರೆಸ್ಟ್ ಆದಾಗ ಅವನು ತಪ್ಪು ಮಾಡಿದ್ದಾನೋ ಬಿಟ್ಟಿದ್ದಾನೋ ಅನ್ನೋದು ನೋಡದೇ ಎಲ್ಲವೂ ನಡೆಯಿತು. ಆಗ ಹೋರಾಟ ಮಾಡಿದ್ದು ನಾರಾಯಣಗೌಡ ಎಂದು ಹೇಳಿದ್ರು.
![](https://risingkannada.com/wp-content/uploads/2019/11/dkshi-01.jpg)
ನಾನು ಹೋರಾಟ ಮಾಡಿ ಅಂತಾನೂ ಯಾರಿಗೂ ಹೇಳಿರಲಿಲ್ಲ. ಕೆಲವು ಮುಖಂಡರು ಜೈಲಿಗೆ ಕಳಿಸುತ್ತೇವೆ ಅಂತಾ ಹೇಳ್ತಾ ಇದ್ರು. ಅವರ ಹೆಸರು ಹೇಳೋದು ಬೇಡ. ಆಗ ನನಗೆ ಏನೆಲ್ಲಾ ಆಮಿಷ ಬಂದಿತ್ತು ಅನ್ನೋದನ್ನು ಕೂಡ ಹೇಳೋದು ಬೇಡ. ನನ್ನನ್ನ ಬಂಧಿಸಿದಾಗ ಹೋರಾಟ ಮಾಡಿ ಇತಿಹಾಸ ಸೃಷ್ಟಿಸಿದ್ದೀರಿ. ಸರಿ, ತಪ್ಪು ಅನ್ನೋದನ್ನ ಜನರೇ ತೀರ್ಮಾನ ಮಾಡಲಿ. ಪೊಲೀಸರು ದೇವೇಗೌಡರ ಮೇಲೆ ಹೇಗೆ ಒತ್ತಡ ತಂದ್ರು. ನಾರಾಯಣಗೌಡರಿಗೆ ಏನೆಲ್ಲಾ ಧಮಕಿ ಹಾಕಿದ್ರು ಅನ್ನೋದು ಗೊತ್ತಿದೆ ಎಂದು ಡಿಕೆ ಶಿವಕುಮಾರ್ ನೋವಿನಿಂದಲೇ ಹೇಳಿದ್ರು.
ಪ್ರತಿಭಟನೆಗೂ ಮುನ್ನ, ಅಂದು ಮಧ್ಯರಾತ್ರಿ ನಾರಾಯಣಗೌಡರ ಬಳಿ ಹೋಗಿ ಪೊಲೀಸರು ಬಾಂಡ್ ಬರೆಸಿಕೊಳ್ತಾರೆ. ಏನೇ ಹೆಚ್ಚು ಕಡಿಮೆ ಆದ್ರೂ ನೀವೇ ಜವಾಬ್ದಾರಿ ಅಂತಾ ಬರೆಸಿಕೊಳ್ತಾರೆ. ಜೈಲಿನಿಂದ ಬಂದ ಬಳಿಕ ಕರವೇ ಕಚೇರಿಗೆ ಬರಬೇಕಿತ್ತು. ಆದ್ರೆ ಪಕ್ಷದ ಕಚೇರಿಗೆ ಹೋಗಿದ್ದರಿಂದ ಬರಲು ಆಗಲಿಲ್ಲ. ಮನಷ್ಯನಿಗೆ ಉಪಕಾರ ಸ್ಮರಣೆ ಬೇಕು. ನಮ್ಮ ಬೇರು, ಮರವನ್ನ ಮರೆತರೆ ಹಣ್ಣು, ನೆರಳು ಏನೂ ಸಿಗಲ್ಲ ಎಂದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?