Featured
ಕುರುಬ ಸಮುದಾಯ ಎಸ್ಟಿ ಸೇರ್ಪಡೆಗೆ ಆಗ್ರಹ: ಕಾಗಿನೆಲೆ ಶ್ರೀಗಳ ಪಾದಯಾತ್ರೆಗೆ ಸಿದ್ದತೆ
![](https://risingkannada.com/wp-content/uploads/2020/10/eshwarappa-2.jpg)
ರೈಸಿಂಗ್ ಕನ್ನಡ:
ದಾವಣಗೆರೆ:
ವಾಲ್ಮೀಕಿ ಶ್ರೀಗಳ ಪಾದಯಾತ್ರೆ ಆಯ್ತು, ಈಗ ಕಾಗಿನೆಲೆ ಶ್ರೀಗಳ ಪಾದಯಾತ್ರೆಗೆ ಸಿದ್ದತೆ ನಡೆದಿದ್ದು, ಕುರುಬ ಸಮುದಾಯ ಎಸ್ಟಿ ಸೇರ್ಪಡೆಗೆ ಆಗ್ರಹಿಸಿ ಕರ್ನಾಟಕ ನಾಲ್ಕು ದಿಕ್ಕುಗಳಲ್ಲಿ ಸಮಾವೇಶ ನಡೆಸಿ ಪಾದಯಾತ್ರೆ ಮೂಲಕ ಬೆಂಗಳೂರಿನಲ್ಲಿ ರಣಕಹಳೆ ಮೊಳಗಿಸಲು ರೂಪರೇಷೆ ನಡೆದಿದೆ.
ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಿ ಎಂದು ವಾಲ್ಮೀಕಿ ಶ್ರೀಗಳು ಪಾದಯಾತ್ರೆ ನಡೆಸಿದ್ದರು. ಅದಾದ ಬಳಿಕ ಈಗ ಪರಿಶಿಷ್ಠ ಪಂಗಡಕ್ಕೆ ಕುರುಬ ಸಮಾಜ ಸೇರ್ಪಡೆಗೆ ಆಗ್ರಹಿಸಿ ಜನವರಿ 15 ರಿಂದ ಹಾವೇರಿಯ ಕಾಗಿನೆಲೆ ಗುರುಪೀಠದಿಂದ ಬೆಂಗಳೂರಿವರೆಗೆ ಕಾಗಿನಲೆ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಪಾದಯಾತ್ರೆ ನಡೆಸಲಿದ್ದು ಮೊದಲ ಹಂತವಾಗಿ ನವೆಂಬರ್ 8 ಮಹಿಳಾ ಸಮಾವೇಶ ಅದಾದ ಬಳಿಕ ರಾಜ್ಯದ ನಾಲ್ಕು ಕಡೆ ದಾವಣಗೆರೆ, ಗುಲ್ಬರ್ಗ, ಮೈಸೂರು, ಬಾಗಲಕೋಟೆಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಬಳಿಕ ಬೆಂಗಳೂರಿನಲ್ಲಿ ಫೆಬ್ರುವರಿ 7ರಂದು ಬೃಹತ್ ಸಮಾವೇಶ ನಡೆಯಲಿದ್ದು, ಮಕರ ಸಂಕ್ರಾತಿ ಬಳಿಕ ಕುರುಬರ ದಿಕ್ಕು ಬದಲಾಗಲಿದೆ ಎಂದು ಕಾಗಿನೆಲೆ ಶ್ರೀ ದಾವಣಗೆರೆಯಲ್ಲಿ ಹೇಳಿಕೆ ನೀಡಿದ್ದಾರೆ..
ಈಗಾಗಲೇ ಬೆಂಗಳೂರು ಅರಮನೆ ಮೈದಾನದಲ್ಲಿ ಜನಪ್ರತಿನಿಧಿ ಸಭೆ ನಡೆಸಲಾಗಿದ್ದು, ಇಂದು ದಾವಣಗೆರೆ ಜಿಲ್ಲೆಯ ಬೆಳ್ಳೂಡಿ ಕನಕ ಮಠದಲ್ಲಿ ಮಹಿಳಾ ಘಟಕದ ಸಭೆ ಹಮ್ಮಿಕೊಂಡಿದ್ದು, ಸಚಿವ ಈಶ್ವರಪ್ಪ, ಮಾಜಿ ಸಚಿವ ಎಚ್ ಎಂ ರೇವಣ್ಣ, ಈಶ್ವರನಂದಪುರಿ ಸ್ವಾಮಿಜಿ ಭಾಗವಹಿಸಿದ್ರು.. ಕುರುಬರಿಗೆ ಎಸ್ಟಿ ಮೀಸಲಾತಿ ಅವಶ್ಯಕವಾಗಿದೆ, ಜೊತೆಗೆ ಹಲವು ಸಮಾಜಗಳು ಎಸ್ಟಿ ಸೇರ್ಪಡೆಗೆ ಅವಶ್ಯ ಇದೆ. ಈಗ ಕುರುಬ ಸಮಾಜಕ್ಕೆ ಎಸ್ಟಿ ನೀಡಬೇಕು, ಈ ಬಗ್ಗೆ ಕಾಗಿನೆಲೆ ಶ್ರೀ ಸ್ವಾಮಿಜಿಯವರ ನೇತೃತ್ವದಲ್ಲಿ ಹೋರಾಟ ನಡೆಯಲಿದೆ ಎಂದ್ರು.. ಇನ್ನೂ ಮಾಜಿ ಸಚಿವ ಎಚ್ ಎಂ ರೇವಣ್ಣ ಮಾತನಾಡಿ, ಸಿದ್ದರಾಮಯ್ಯ ನವರು ಎಲ್ಲಾ ಸಮಾಜದ ನಾಯಕ, ಕುರುಬ ಸಮಾಜದ ಹೋರಾಟಕ್ಕೆ ಅವರ ಬೆಂಬಲ ಇದೆ ಎಂದು ತಿಳಿಸಿದ್ರು..
ಒಟ್ಟಾರೆ ಇತ್ತ ಕುರುಬ ಸಮುದಾಯ ಎಸ್ಟಿಗೆ ಸೇರ್ಪಡೆ ಬೇಡಿಕೆ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಕಾಗಿನೆಲೆ ಶ್ರೀಗಳು, ಈಶ್ವರಪ್ಪ ನೇತೃತ್ವದಲ್ಲಿ ಭಾರೀ ಹೋರಾಟಕ್ಕೆ ಸಿದ್ದತೆಗಳು ನಡೆದಿದೆ.. ಇನ್ನೊಂದೆಡೆ ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ನಾಯಕ ಸಮಾಜ ಪ್ರತಿಭಟನೆ, ಪಂಚಮಸಾಲಿ ಸಮಾಜಕ್ಕೆ 2A ಬೇಡಿಕೆ ಹೋರಾಟಗಳು ಜೋರಾಗುತ್ತಿದ್ದು ಸರ್ಕಾರ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇದೆ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?