Jr NTR ಜೊತೆ KGF ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾ ಪಕ್ಕಾ..!
ಹೈದರಾಬಾದ್ : ಕೆಜಿಎಫ್ ಸಿನಿಮಾ ಬಿಡುಗಡೆಯಾದ ದಿನದಿಂದ ಸಾಕಷ್ಟು ಚರ್ಚೆಯಲ್ಲಿ ಇದ್ದ ಸುದ್ದಿ ಈಗ ಪಕ್ಕಾ ಆಗಿದೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್, ಕೆಜಿಎಫ್ ಚಾಪ್ಟರ್ 2 ಬಳಿಕ ತೆಲುಗಿನಲ್ಲಿ ಸಿನಿಮಾ ಮಾಡ್ತಾರೆ ಅನ್ನೋ ಗುಸು ಗುಸು ಕೇಳಿ ಬರ್ತಿತ್ತು. ಒಮ್ಮೆ ಸೂಪರ್ ಸ್ಟಾರ್ ಮಹೇಶ್ ಬಾಬು, ಮತ್ತೊಮ್ಮೆ ಜ್ಯೂನಿಯರ್ ಎನ್ಟಿಆರ್ ಹೆಸರು ಕೂಡ ಕೇಳಿ ಬಂದಿತ್ತು. ಆದ್ರೀಗ, ಪ್ರಶಾಂತ್ ನೀಲ್, ಜ್ಯೂನಿಯರ್ ಎನ್ಟಿಆರ್ ಸಿನಿಮಾ ಪಕ್ಕಾ ಆಗಿದೆ.
ಈಗಾಗಲೇ ಮೈತ್ರಿ ಮೂವಿ ಮೇಕರ್ಸ್ ನಿರ್ದೇಶಕ ಪ್ರಶಾಂತ್ ನೀಲ್ಗೆ ಅಡ್ವಾನ್ಸ್ ಹಣ ನೀಡಿದೆಯಂತೆ. ಕೆಜಿಎಫ್ 2 ಚಿತ್ರದ ಬಳಿಕ ಪ್ರಶಾಂತ್ ಕಥೆ ರೆಡಿ ಮಾಡಲಿದ್ದಾರೆ. ಸದ್ಯ ಜ್ಯೂನಿಯರ್ ಎನ್ಟಿಆರ್ ಕೂಡ RRR ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ, ಎನ್ಟಿಆರ್ಗೂ ಕೂಡ ಮೈತ್ರಿ ಮೂವಿ ಮೇಕರ್ಸ್ ಅಡ್ವಾನ್ಸ್ ನೀಡಿ ಬುಕ್ ಮಾಡಿಕೊಂಡಿದೆ. ಎಲ್ಲವೂ ಅಂದುಕೊಂಡಂತೆ ಆದ್ರೆ, ಪ್ರಶಾಂತ್ ನೀಲ್ ಶೀಘ್ರದಲ್ಲೇ ಜ್ಯೂನಿಯರ್ ಎನ್ಟಿಆರ್ಗೆ ಕಥೆ ಹೇಳಲಿದ್ದಾರೆ.
ಪ್ರಶಾಂತ್ ನೀಲ್ ಹಾಗೂ ಎನ್ಟಿಆರ್ ಸಿನಿಮಾ ಬಗ್ಗೆ ಟ್ವೀಟ್ ಮಾಡಿರೋ ನಿರ್ಮಾಪಕ ನವೀಣ್ ಯರ್ನೇನಿ, ನಾವು ಪ್ರಶಾಂತ್ ನೀಲ್ ಮತ್ತು ಎನ್ಟಿಆರ್ ಜೊತೆ ಮಾತುಕತೆ ನಡೆಸಿದ್ದೇವೆ. ಒಮ್ಮೆ ಪ್ರಶಾಂತ್ ನೀಲ್, ಎನ್ಟಿಆರ್ಗೆ ಕಥೆ ಹೇಳಿದ ಮೇಲೆ ಎಲ್ಲವೂ ಫೈನಲ್ ಆಗುತ್ತೆ ಎಂದಿದ್ದಾರೆ. ಅಲ್ಲದೆ, ಎನ್ಟಿಆರ್ RRR, ಪ್ರಶಾಂತ್ KGFನಲ್ಲಿ ಬ್ಯುಸಿಯಾಗಿದ್ದಾರೆ. ಬಹುಶಃ 2020ರಲ್ಲಿ ನಮ್ಮ ಸಿನಿಮಾ ಸೆಟ್ಟೇರಬಹುದು ಎಂದಿದ್ದಾರೆ.