ಟಾಪ್ ನ್ಯೂಸ್
ನೆಟ್ ಫ್ಲಿಕ್ಸ್, ಅಮೆಜಾನ್ ಗೆ ಸೆಡ್ಡು ಹೊಡೆಯಲು ಜಿಯೋ, ಡಿಸ್ನಿ ರೆಡಿ..!

ಭಾರತದಲ್ಲಿ ಸದ್ಯಕ್ಕಿರೋ ಒಟಿಟಿ ಆ್ಯಪ್ ಗಳಲ್ಲಿ ನೆಟ್ ಫ್ಲಿಕ್ಸ್, ಅಮೆಜಾನ್ ಗೆ ಸೆಡ್ಡು ಹೊಡೆಯುವ ಸಾಮರ್ಥ್ಯ ಬೇರಾವುದೇ ಆ್ಯಪ್ ಗಿಲ್ಲ. ಡಿಸ್ನಿ ಪ್ಲಸ್ ಹಾಟ್ ಸ್ಟಾರ್, ಜಿಯೋ ಸಿನಿಮಾ, ಜೀಫೈವ್, ಸೋನಿ ಲಿವ್ ಆ್ಯಪ್ಗಳು ತಕ್ಕ ಮಟ್ಟಿಗೆ ಒಟಿಟಿ ದೈತ್ಯರಾದ ನೆಟ್ ಫ್ಲಿಕ್ಸ್, ಅಮೆಜಾನ್ ಗೆ ಸೆಡ್ಡು ಹೊಡೆಯಲು ಯಶಸ್ವಿಯಾಗಿವೆ. ಆದರೆ, ಎರಡು ಕಂಪನಿಗಳನ್ನು ಹಿಂದಿಕ್ಕಲು ಯಾರಿಂದಲೂ ಸಾಧ್ಯವಾಗಿಲ್ಲ. ಈಗ ಆ ಕಾಲ ಬದಲಾಗುವ ಸಮಯ ಬಂದಿದೆ. ಏಕೆಂದರೆ, ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಜಿಯೋ ಸಿನಿಮಾ ಹೂಡಿಕೆ ಮಾಡುವ ಒಪ್ಪಂದಕ್ಕೆ ಎರಡು ಕಂಪನಿಗಳು ಸಹಿ ಹಾಕಿವೆ.

ಇದರ ಪ್ರಕಾರ ಜಿಯೋ ಸಿನಿಮಾ ಮತ್ತು ಹಾಟ್ ಸ್ಟಾರ್ ಮಾಲೀಕತ್ವ ಹೊಂದಿರುವ ವಯಾಕಾಂ.18 ಮತ್ತು ವಾಲ್ಟ್ ಡಿಸ್ನಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಶೀಘ್ರದಲ್ಲೇ ಎರಡು ಆ್ಯಪ್ ಗಳು ಒಂದಾಗಲಿವೆ. ಇದಕ್ಕಾಗಿ ವಯಾಕಾಂ.18 ಮಾಲೀಕತ್ವ ಹೊಂದಿರುವ ರಿಲಯನ್ಸ್ ಸಮೂಹ 11,500 ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದಾಗಿದೆ. ಈ ಮೂಲಕ ಇಷ್ಟು ದಿನ ಟೆಲಿಕಾಂ ವಲಯದಲ್ಲಿ ನಡೆಯುತ್ತಿದ್ದ ದರ ಕದನ ಒಟಿಟಿಯಲ್ಲೂ ಶುರುವಾಗುವ ಮುನ್ಸೂಚನೆ ನೀಡಿದೆ. ಏಕೆಂದರೆ ಜಿಯೋ ಯಾವುದೇ ವಲಯಕ್ಕೆ ಕಾಲಿಟ್ಟರೂ ಅಲ್ಲಿ ಕಡಿಮೆ ದರ ನಿಗದಿ ಪಡಿಸುವ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯುವ ತಂತ್ರ ಪ್ರಯೋಗಿಸುತ್ತದೆ. ಒಟಿಟಿ ವಲಯದಲ್ಲಿಯೂ ಇದೇ ತಂತ್ರ ಪ್ರಯೋಗಿಸುವ ಸಾಧ್ಯತೆ ಇದ್ದು, ಅಮೆಜಾನ್ ಮತ್ತು ನೆಟ್ ಫ್ಲಿಕ್ಸ್ ಗೆ ಹೊಸ ಆತಂಕ ಶುರುವಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?