ಟ್ರೆಂಡಿಂಗ್
ಮಸ್ಕ್ ಹಿಂದಿಕ್ಕಿ ಮತ್ತೆ ವಿಶ್ವದ ಶ್ರೀಮಂತ ಎಂಬ ಪಟ್ಟ ಪಡೆದ ಜೆಫ್ ಬಿಜೋಸ್
![](https://risingkannada.com/wp-content/uploads/2024/03/jeff.jpg)
ಅಮೆಜಾನ್ ಕಂಪನಿ ಸಂಸ್ಥಾಪಕ ಜೆಫ್ ಬಿಜೋಸ್ ಮತ್ತೆ ವಿಶ್ವದ ನಂಬರ್ ಒನ್ ಶ್ರೀಮಂತ ಪಟ್ಟಕ್ಕೇರಿದ್ದಾರೆ. 2017ರಲ್ಲಿ ಮೊಟ್ಟ ಮೊದಲ ಬಾರಿಗೆ ಜೆಫ್ ಬಿಜೋಸ್, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಹಿಂದಿಕ್ಕಿ ವಿಶ್ವದ ಅತ್ಯಂತ ಶ್ರೀಮಂತ ಎಂಬ ಪಟ್ಟಕ್ಕೇರಿದ್ದರು.
![](https://risingkannada.com/wp-content/uploads/2024/03/jeff-amazone-1024x1024.jpg)
ಬ್ಲೂಮ್ ಬರ್ಗ್ ಸೂಚ್ಯಂಕದ ಪ್ರಕಾರ ಜೆಫ್ ಬಿಜೋಸ್ 200 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ. ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ 197 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದು ವಿಶ್ವದ ಎರಡನೇ ಶ್ರೀಮಂತ ಎಂಬ ಖ್ಯಾತಿ ಗಳಿಸಿದ್ದಾರೆ. ಕಳೆದೊಂದು ವರ್ಷದಲ್ಲಿ ಜೆಫ್ ಬಿಜೋಸ್ ಆಸ್ತಿ 23 ಬಿಲಿಯನ್ ಡಾಲರ್ ಆಸ್ತಿ ಗಳಿಸಿದ್ದರೆ, ಎಲಾನ್ ಮಸ್ಕ್ ಇದೇ ಅವಧಿಯಲ್ಲಿ ಸುಮಾರು 40 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದ್ದಾರೆ.
![](https://risingkannada.com/wp-content/uploads/2024/03/jef-bezos-1024x1024.jpg)
ಭಾರತದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಈ ಪಟ್ಟಿಯಲ್ಲಿ 11 ಮತ್ತು 12ನೇ ಸ್ಥಾನದಲ್ಲಿದ್ದಾರೆ. ಎಲಾನ್ ಮಸ್ಕ್ ಮತ್ತು ಜೆಫ್ ಬಿಜೋಸ್ ನಡುವಿನ ಆಸ್ತಿಯ ಅಂತರ ಮತ್ತಷ್ಟು ಹೆಚ್ಚಾಗಬಹುದು ಎಂದು ಬ್ಲೂಮ್ ಬರ್ಗ್ ಸಂಸ್ಥೆ ಹೇಳಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?