Featured
ರಾಜ್ಯದಲ್ಲಿ ಜೀನ್ಸ್, ಟೀ ಶರ್ಟ್, ಮಿನಿ ಸ್ಕರ್ಟ್ ಬ್ಯಾನ್..! ಏನಿದು ಸರ್ಕಾರದ ಆದೇಶ..?
ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರ ವಿವಾದಾತ್ಮಕ ಹಾಗೂ ಶಾಕಿಂಗ್ ನಿರ್ಧಾರವನ್ನ ತೆಗೆದುಕೊಂಡಿದೆ. ಇನ್ಮುಂದೆ ಕರ್ನಾಟಕ ಸರ್ಕಾರದ ಸಚಿವಾಲಯದ ನೌಕರರು ಬೇಕಾಬಿಟ್ಟಿ ಡ್ರೆಸ್ ಧರಿಸುವಂತಿಲ್ಲ. ಯಾಕಂದ್ರೆ, ಸರ್ಕಾರದ ಸಚಿವಾಲಯದ ಸಿಬ್ಬಂದಿಗೆ ಡ್ರೆಸ್ ಕೋಡ್ ನಿಗದಿ ಮಾಡಿದ ರಾಜ್ಯ ಬಿಜೆಪಿ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರದ ಆದೇಶದ ಪ್ರಕಾರಣ, ಸರ್ಕಾರದ ಘನತೆಗೆ ಧಕ್ಕೆ ಬಾರದಂತೆ ಉಡುಗೆ ತೊಡಬೇಕಂತೆ. ಸಭ್ಯ ಉಡುಗೆ ತೊಡಬೇಕಂತೆ. ಆ ಪ್ರಕಾರವಾಗಿ ಪುರುಷ ನೌಕರರು ಪ್ಯಾಂಟ್ ಶರ್ಟ್, ಪೈಜಾಮಾ, ಖುರ್ತಾ ಧರಿಸಬಹುದು. ಆದ್ರೆ, ಜೀನ್ಸ್ ಪ್ಯಾಂಟ್ ಹಾಕುವಂತಿಲ್ಲ.
ಇನ್ನು, ಮಹಿಳಾ ನೌಕರರು, ಮಹಿಳಾ ಅಧಿಕಾರಿಗಳು ಸೀರೆ, ಚೂಡಿಧಾರ್ ಮಾತ್ರ ಧರಿಸಬೇಕು. ಉಳಿದಂತೆ ಯಾವುದೇ ರೀತಿಯ ಆಧುನಿಕ, ಮಾಡರ್ನ್ ಡ್ರೆಸ್ ಧರಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಅಂದ್ರೆ, ಜೀನ್ಸ್, ಟೀ ಶರ್ಟ್, ಮಿನಿ ಸ್ಕರ್ಟ್ ತೊಡುವಂತಿಲ್ಲ ಎಂದು ರಾಜ್ಯ ಸರ್ಕಾರದ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.
ಸರ್ಕಾರದ ಈ ನಡೆ ವಿವಾದಕ್ಕೀಡು ಮಾಡಿದೆ. ಸೀರೆ ಅಥವಾ ಚೂಡಿಧಾರ್ಗಿಂತಲೂ ಈಗಿನ ಜೀನ್ಸ್, ಶರ್ಟ್ನಲ್ಲೇ ಮಹಿಳೆಯರು ಅಥವಾ ಯುವತಿಯರು ಕಂಫರ್ಟ್ ಆಗಿರ್ತಾರೆ. ಜೊತೆ ಜೀನ್ಸ್ ಈಗಿನ ಫ್ಯಾಷನ್ ಆಗಿ ಉಳಿದಿಲ್ಲ. ಅದು ಕೂಡ ಪ್ಯಾಂಟ್ನಂತೆಯೇ ಜೀನ್ಸ್ ಬೆರೆತು ಹೋಗಿದೆ. ಆದ್ರೆ, ಸಭ್ಯತೆ ಅಸ್ತ್ರ ಬಳಸಿ ಬಿಜೆಪಿ ಸರ್ಕಾರ ಈ ರೀತಿಯ ಸುತ್ತೋಲೆ ಹೊರಡಿಸಿರೋದು ವಿವಾದಕ್ಕೆ ಕಾರಣವಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?