Featured
ಸೌರವ್ ಗಂಗೂಲಿ ಪಶ್ಚಿಮ ಬಂಗಾಳದ ಬಿಜೆಪಿ ಸಿಎಂ ಅಭ್ಯರ್ಥಿ..? : ದೀದಿ ವರ್ಸಸ್ ದಾದಾಗಿರಿ..?

ನವದೆಹಲಿ : ಬಿಸಿಸಿಐ ಅಧ್ಯಕ್ಷರಾಗಿರೋ ಸೌರವ್ ಗಂಗೂಲಿ, ಮುಂದೆ ರಾಜಕೀಯಕ್ಕೆ ಬಂದು ಮುಖ್ಯಮಂತ್ರಿ ಆಗ್ತಾರಾ..? ಸದ್ಯ ಹೀಗೊಂದು ಕುತೂಹಲ ಮತ್ತು ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ. ಅದಕ್ಕೆ ತಕ್ಕಂತೆ ಬಿಜೆಪಿ ಕೂಡ ಸೌರವ್ ಗಂಗೂಲಿಗೆ ಮುಖ್ಯಮಂತ್ರಿ ಹುದ್ದೆ ಕೊಟ್ಟರು ಅಚ್ಚರಿಯಿಲ್ಲ ಅನ್ನೋ ಮಾತುಗಳು ಕೇಳಿ ಬರ್ತಿವೆ.
ಯೆಸ್, ಮಾಜಿ ಕ್ರಿಕೆಟಿಗ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಂತೆ. ಸದ್ಯ ಪಶ್ಚಿಮ ಬಂಗಳಾದಲ್ಲಿ ಮಮತಾ ಬ್ಯಾನರ್ಜಿ ವರ್ಸಸ್ ಮೋದಿ ಅಥವಾ ಅಮಿತ್ ಶಾ ಎನ್ನುವಂತಾಗಿದೆ. ಅದನ್ನ ದೀದಿ ವರ್ಸಸ್ ದಾದಾ ಮಾಡಲು ಬಿಜೆಪಿ ರಾಷ್ಟ್ರೀಯ ನಾಯಕರು ಚಿಂತನೆ ನಡೆಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ದೀದಿಯನ್ನ ಕಟ್ಟಿಹಾಕಲು ದಾದಾಗಿರಿ ಬೇಕು ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ. ಗಂಗೂಲಿಗೆ ಬಂಗಾಳದಲ್ಲಿ ಅತೀ ಹೆಚ್ಚಿನ ಫಾಲೋಯಿಂಗ್ ಇದೆ. ಹೀಗಾಗಿ, ಗಂಗೂಲಿಯನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ರೆ, ಬಂಗಾಳವನ್ನ ವಶ ಪಡಿಸಿಕೊಳ್ಳೋದು ತುಂಬಾ ಸುಲಭ ಅನ್ನೋ ಮಾತು ವಿಶ್ಲೇಷಕರದ್ದು.
ಇನ್ನು 10 ತಿಂಗಳ ಕಾಲ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಇರಲಿದ್ದಾರೆ. ಆಮೇಲೆ ಅವರ ಅವಧಿ ಮುಗಿಯಲಿದೆ. ಬಳಿಕ ಬಿಜೆಪಿ ಸೇರ್ಪಡೆಯಾಗಿ, ಬಂಗಾಳದಲ್ಲಿ ದಾದಾಗಿರಿ ಶುರು ಮಾಡಲಿದ್ದಾರಂತೆ. ಹೇಗೂ 2021ಕ್ಕೆ ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ನಡೆಯಲಿದ್ದು, ಆ ವೇಳೆಗೆ ಸರಿಯಾಗಿ ದಾದಾ ಬಂಗಾಳದಲ್ಲಿ ಪ್ರವರ್ದಮಾನಕ್ಕೆ ಬರುವಂತೆ ಮಾಡುವುದು ಬಿಜೆಪಿ ಪ್ಲಾನ್. ನೋಡೋಣ, ಈ ಪ್ಲಾನ್ ಮುಂದೆ ಏನಾಗುತ್ತೆ ಅನ್ನೋದನ್ನ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















