Featured
ಚಕ್ರವರ್ತಿ ಸೂಲಿಬೆಲೆ ದೇಶದ್ರೋಹಿನಾ..? ಬಿಜೆಪಿ ನಾಯಕರಿಗೆ ಏನಾಗಿದೆ..?
![](https://risingkannada.com/wp-content/uploads/2019/10/ಸೂಲಿಬೆಲೆ.jpg)
ಬೆಂಗಳೂರು : ಉತ್ತರ ಕರ್ನಾಟಕ ಪ್ರವಾಹಕ್ಕೆ ಕೇಂದ್ರ ಸರ್ಕಾರ ಕೊನೆಗೂ 1200 ಕೋಟಿ ಮಧ್ಯಂತರ ಪರಿಹಾರ ಕೊಟ್ಟಿರೋದು ಹಳೇ ಸುದ್ದಿ. ಇದು ರಾಜ್ಯ ಬಿಜೆಪಿ ಸರ್ಕಾರದ್ದೋ ಅಥವಾ ಬಿಜೆಪಿ ಸಂಸದರದ್ದೋ, ಅಥವಾ ಸಂತೋಷ್ ಅವರ ಸಾಧನೆಯಲ್ಲ. ಇದು ಪ್ರತಿಯೊಬ್ಬ ಕನ್ನಡಿಗರ ಹಾಗೂ ಮಾಧ್ಯಮಗಳ ಸಾಧನೆ ಅಂದ್ರೆ ತಪ್ಪಲ್ಲ.
ಯೆಸ್, ಪ್ರವಾಹ ಉಂಟಾಗಿ ಎರಡು ತಿಂಗಳಾದ್ರೂ ನಯಾ ಪೈಸೆ ನೀಡದ ಕೇಂದ್ರದ ವಿರುದ್ಧ ಇಡೀ ಕರ್ನಾಟಕ ಜನತೆ ಒಟ್ಟಾಗಿದ್ರು. ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನವೂ ನಡೆದಿತ್ತು. ಇದಕ್ಕೆ ತಕ್ಕಂತೆ ಸಾಮಾಜಿಕ ಹೋರಾಟಗಾರ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಕೂಡ ಅಚ್ಚರಿ ಎನ್ನುವಂತೆ ಬಿಜೆಪಿ ಸಂಸದರನ್ನ ತರಾಟಗೆ ತೆಗೆದುಕೊಂಡ್ರು. 25 ಸಂಸದರಿದ್ರೂ ಒಬ್ಬರೂ ಕೂಡ ಮಾತನಾಡಿಲ್ಲ. ನಿಮಗೆ ಯೋಗ್ಯತೆ ಇಲ್ಲ. ಸ್ವತಂ ಬಲದಿಂದ ಗೆಲ್ಲದ ಸಂಸದರ ಕಥೆಯೇ ಇಷ್ಟು ಎನ್ನುವಂತೆ ಕನ್ನಡಿಗರ ಆಕ್ರೋಶವನ್ನ ಸೂಲಿಬೆಲೆ ಹೊರಹಾಕಿದ್ರು.
ಚಕ್ರವರ್ತಿ ಸೂಲಿಬೆಲೆ ಕನ್ನಡಿಗರ ಆಕ್ರೋಶವನ್ನ ಹೊರಹಾಕ್ತಿದ್ದಂತೆ, ಇಷ್ಟು ದಿನ ಬಿಜೆಪಿ ನಿಷ್ಠಾವಂತ, ಮೋದಿ ಭಕ್ತ ಅಂತ ಕರೆಸಿಕೊಳ್ತಿದ್ದ ಚಕ್ರವರ್ತಿ ಸೂಲಿಬೆಲೆ ದಿಢೀರ್ ದೇಶದ್ರೋಹಿ ಆಗಿಬಿಟ್ರು. ಸ್ವತಃ ಬಿಜೆಪಿ ನಾಯಕರು, ಅದರಲ್ಲೂ ಕೇಂದ್ರ ಸಚಿವ ಸದಾನಂದಗೌಡರೇ ಚಕ್ರವರ್ತಿ ಸೂಲಿಬೆಲೆ ದೇಶದ್ರೋಹಿ ಅಂದ್ರು. ಮತ್ತೊಬ್ಬ ಸಂಸದ ಪ್ರತಾಪ್ ಸಿಂಹ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚಕ್ರವರ್ತಿ ಸೂಲಿಬೆಲೆ ತಮ್ಮ ಭಾಷಣದಲ್ಲಿ ಮೋದಿ ಪ್ರಸ್ತಾಪ ಮಾಡದೇ ಇದ್ರೆ ಯಾರು ಕೇಳಲ್ಲ ಅಂದ್ರು.
ಪಾಪ ಪ್ರತಾಪ್ ಸಿಂಹಗೆ ಗೊತ್ತಿದೆಯೋ..? ಗೊತ್ತಿಲ್ವೋ.? ನರೇಂದ್ರ ಮೋದಿ ಪ್ರಧಾನಿ ಆಗುವ ಮುನ್ನವೇ ಚಕ್ರವರ್ತಿ ಸೂಲಿಬೆಲೆ ಭಾಷಣಗಳಿಂದಲೇ ಫೇಮಸ್ ಆಗಿದ್ದವರು. ಅವರ ಮಾತು, ಅಂಕಣ ಇಡೀ ರಾಜ್ಯದ ಜನತೆಗೆ ಗೊತ್ತಿತ್ತು. ಇದು ಪ್ರತಾಪ್ ಸಿಂಹಗೇ ಗೊತ್ತಿಲ್ಲ ಅನ್ಸುತ್ತೆ. ಇದರ ಮಧ್ಯ, ಸರ್ಕಾರ ಯಾವುದೇ ಇರಲಿ. ತಪ್ಪು ಮಾಡಿದಾಗ ಪ್ರಶ್ನೆ ಮಾಡುವ ಹಕ್ಕು ಪ್ರತಿಯೊಬ್ಬ ನಾಗರೀಕನಿಗೆ ಇರುತ್ತೆ. ಆದ್ರೆ, ಬಿಜೆಪಿಯನ್ನ ಅದರಲ್ಲೂ ಮೋದಿಯನ್ನ ಟೀಕಿಸಿದ್ರೆ, ದೇವರನ್ನು ಟೀಕಿಸಿದಂತೆ ಎಂದು ಹೇಳ್ತಿರೋದು ಎಷ್ಟರ ಮಟ್ಟಿಗೆ ಸರಿ..?
ಅದೇನೇ ಇರಲಿ, ಚಕ್ರವರ್ತಿ ಸೂಲಿಬೆಲೆ ಮಾಡಿದ್ದು ಸರಿನಾ.? ತಪ್ಪಾ..? ನಿಮ್ಮ ಅಭಿಪ್ರಾಯವನ್ನ ಕಾಮೆಂಟ್ ಮಾಡಿ…
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?