Featured
ಶಾರ್ಜಾ ಅಂಗಳದಲ್ಲಿ ಆರ್ಸಿಬಿಗೆ ಸನ್ ರೈಸರ್ಸ್ ಸವಾಲು: ಪ್ಲೇ ಆಫ್ ಗೆ ಇನ್ನೊಂದೇ ಹೆಜ್ಜೆ

ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಐಪಿಎಲ್ನ 52ನೇ ಪಂದ್ಯದಲ್ಲಿ ಇಂದು ಆರ್ಸಿಬಿ ಸನ್ರೈಸರ್ಟ್ ತಂಡವನ್ನ ಎದುರಿಸಲಿದೆ. ಐತಿಹಾಸಿಕ ಶಾರ್ಜಾ ಅಂಗಳದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್ಸಿಬಿ ಪ್ಲೇ ಆಫ್ಗೆ ಹೋಗಲು ಇನ್ನೊಂದು ಗೆಲುವು ಬೇಕಾಗಿದ್ದು ಗೆಲ್ಲಲ್ಲೇಬೇಕಾದ ಒತ್ತಡ ಎದುರಿಸುತ್ತಿದೆ.
ಟೂರ್ನಿಯಲ್ಲಿ ಆರ್ ಸಿಬಿ 12 ಪಂದ್ಯಗಳಿಂದ 8ರಲ್ಲಿ ಗೆಲುವು ಸಾಧಿಸಿ 4ರಲ್ಲಿ ಸೋಲು ಕಂಡಿದೆ. ಇನ್ನು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಸನ್ರೈಸರ್ಸ್ ತಂಡ ನೆಟ್ ರೇಟ್ ಆಧಾರದ ಮೇಲೆ ಪ್ಲೇ ಆಫ್ ಕನಸು ಕಾಣುತ್ತಿದೆ.ಶಾರ್ಜಾ ಅಂಗಳದಲ್ಲಿ ಆರ್ಸಿಬಿ ಆಡಿದ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದು ಬೀಗಿದೆ.

ಇನ್ನು ಸನ್ರೈಸರ್ಸ್ ಹೈದ್ರಾಬಾದ್ ಈ ಅಂಗಳದಲ್ಲಿ ವಿರುದ್ಧ ಸೋಲು ಕಂಡಿದೆ ಹೀಗಾಗಿ ಆರ್ಸಿಬಿ ಇದು ಪ್ಲಸ್ ಪಾಯಿಂಟ್ ಆಗಿದೆ. ಕಳೆದ ಎರಡು ಪಂದ್ಯಗಳಿಂದ ಸೋತಿರುವ ರಾಯಲ್ ಚಾಲಂಜರ್ಸ್ ಮಾಡಿದ ತಪ್ಪುಗಳಿಂದ ಪಾಠ ಕಲಿಯಬೇಕಾಗಿದೆ. ಆಯಾ ಕೋಟಾಕ್ಕೆ ಸೂಕ್ತ ಆಟಗಾರನಿಗೆ ಅವಕಾಶ ಕೊಟ್ಟು ಸನ್ರೈಸರ್ಸ್ ಮೇಲೆ ಸವಾಲಿ ಮಾಡಬೇಕಿದೆ.
ಮುಖ್ಯವಾಗಿ ತಂಡದ ಮಿಡ್ಲ್ ಆರ್ಡರ್ ಬ್ಯಾಟಿಂಗ್ ಲೈನ್ ಅಪ್ನಲ್ಲಿ ಸಿಡಿಯಬೇಕಿದೆ. ತಂಡದ ಮಿಸ್ಟರ್ 360 ಎಬಿಡಿ ವಿಲಿಯರ್ಸ್ ಮತ್ತೆ ಅಬ್ಬರದ ಬ್ಯಾಟಿಂಗ್ ಮಾಡಬೇಕಿದೆ. ಇಂಜುರಿ ಸಮಸ್ಯೆ ಎರಡೂ ತಂಡಗಳನ್ನ ಕಾಡಿದೆ. ಆರ್ಸಿಬಿ ಪರ ನವದೀಪ್ ಸೈನಿ ಆಡೋದು ಅನುಮಾನದಿಂದ ಕೂಡಿದ್ರೆ. ಕಳೆದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಅಬ್ಬರಿಸಿದ್ದ ಸನ್ರೈಸರ್ಸ್ ತಂಡ ವೃದ್ದಿಮನ್ ಸಾಹಾ ಇಂಜುರಿಗೆ ಒಳಗಾಗಿದ್ದಾರೆ ಹೀಗಾಗಿ ಆರ್ಸಿಬಿಗೆ ಇದು ಅಡ್ವಾಂಟೇಜ್ ಆಗಲಿದೆ.
ಇದಲ್ಲದೇ ಕಳೆದ ಪಂದ್ಯದಲ್ಲಿ ಆರ್ಸಿಬಿ ಸನ್ರೈಸರ್ಸ್ ತಂಡವನ್ನ ಬಗ್ಗುಬಡಿದಿತ್ತು ಇದು ಆರ್ಸಿಬಿ ತಂಡದ ಆತ್ಮ ವಿಶ್ವಾಸವನ್ನ ಇನ್ನಷ್ಟು ಹೆಚ್ಚಿಸಿದೆ. ಒಟ್ಟಿನಲ್ಲಿ ರನ್ ಮಳೆ ಸುರಿಯುವ ಶಾರ್ಜಾ ಅಂಗಳದಲ್ಲಿ ಆರ್ಸಿಬಿ ಸನ್ ರೈಸರ್ಸ್ ಮಹಾ ಕದನಲ್ಲಿ ಯಾರು ಗೆಲ್ಲುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?