Featured
ದುಬೈನಲ್ಲಿ ಆರ್ ಸಿಬಿ, ಚೆನ್ನೈ ನಡುವೆ ಬಿಗ್ ಫೈಟ್: ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಆರ್ಸಿಬಿ
![](https://risingkannada.com/wp-content/uploads/2020/10/rcb-vs-csk-1.jpg)
ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಐಪಿಎಲ್ನ 44ನೇ ಪಂದ್ಯದಲ್ಲಿ ಆರ್ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ದುಬೈ ಅಂಗಳದಲ್ಲಿ ಐಪಿಎಲ್ನ ಬದ್ಧ ವೈರಿಗಳು ಗೆಲುವಿಗಾಗಿ ಹೋರಾಡಲಿದ್ದು ಹೈ ಸ್ಕೋರಿಂಗ್ ಮ್ಯಾಚ್ ಆಗಿರಲಿದೆ. ಈ ಕದನದಲ್ಲಿ ಆರ್ಸಿಬಿ ಗೆದ್ದರೆ ಪ್ಲೇ ಆಫ್ಗೆ ಹೋಗಲಿದೆ. ಇನ್ನು ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯಿಂದ ಹೊರ ಬಿದ್ದಿದ್ದು ಪ್ರತಿಷ್ಠೆಗಾಗಿ ಆಡಲಿದೆ. ಬೌಲಿಂಗ್ ಬ್ಯಾಟಿಂಗ್ ಎರಡರಲ್ಲೂ ಮಿಂಚುತ್ತಿರುವ ಆರ್ಸಿಬಿ ಹಿಂದೆಂದಿಗಿಂತಲೂ ಬಲಿಷ್ಠವಾಗಿ ಕಾಣುತ್ತಿದೆ.
ಈ ಬಾರಿಯ ಟೂರ್ನಿಯಲ್ಲಿ 10 ಪಂದ್ಯಗಳನ್ನಾಡಿರುವ ಆರ್ಸಿಬಿ 7ರಲ್ಲಿ ಗೆದ್ದು 3 ರಲ್ಲಿ ಸೋತು 14 ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ಕೆಲವು ದಿನಗಳ ಹಿಂದೆ ಇದೇ ದುಬೈ ಅಂಗಳದಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್ಸಿಬಿ ಚೆನ್ನೈ ತಂಡವನ್ನ 37 ರನ್ಗಳಿಂದ ಬಗ್ಗು ಬಡಿದು ಗೆಲುವು ದಾಖಲಿಸಿತ್ತು. ಇದೀಗ ಆರ್ಸಿಬಿ ಚೆನ್ನೈ ತಂಡವನ್ನ ಮತ್ತೊಮ್ಮೆ ಸೋಲಿಸಲು ಸಜ್ಜಾಗಿದೆ. ಐಪಿಎಲ್ನಲ್ಲಿ ಆರ್ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಇದುವೆರೆಗೂ 26 ಬಾರಿ ಮುಖಾಮುಖಿಯಾಗಿವೆ ಇದರಲ್ಲಿ ಆರ್ಸಿಬಿ 9 ಬಾರಿ ಗೆದ್ದರೆ ಚೆನ್ನೈ ತಂಡ 16 ಬಾರಿ ಗೆದ್ದು ಪರಾಕ್ರಮ ಮೆರೆದಿದೆ. ಅಂಕಿ ಅಂಶ ಏನೇ ಹೇಳಿದರೂ ಈ ಬಾರಿ ಆರ್ಸಿಬಿ ಇತಿಹಾಸವನ್ನ ಬದಲಿಸಿದೆ.
ಇವತ್ತಿನ ಪಂದ್ಯದ ಮತ್ತೊಂದು ವಿಶೇಷವೆಂದರೆ ಗೋ ಗ್ರೀನ್ ಅಭಿಯಾನದಡಿ ಚೆನ್ನೈ ವಿರುದ್ಧಧ ಪಂದ್ಯದಲ್ಲಿ ವಿರಾಟ್ ಪಡೆ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಇದು ಆರ್ಸಿಬಿ ಅಭಿಮಾನಿಗಳಿಗೆ ಇನ್ನಿಲ್ಲದ ಖುಷಿ ಕೊಟ್ಟಿದೆ. ಇನ್ನು ತಂಡದ ಪ್ಲೇಯಿಂಗ್ ಇಲೆವೆನ್ ಬಗ್ಗೆ ಹೇಳೊದಾದರೆ ಪ್ಲೇ ಆಫ್ಗೆ ಹೋಗಲು ಇನ್ನೊಂದು ಗೆಲುವು ಬೇಕಾಗಿರುವುದರಿಂದ ಕ್ಯಾಪ್ಟನ್ ವಿರಾಟ್ ಎಕ್ಸ್ಪೆರಿಮೆಂಟ್ ಮಾಡುವು ಸಾಧ್ಯತೆ .ಅವಕಾಶಕ್ಕಾಗಿ ಕಾಯುತ್ತಿರುವ ಅನುಭವಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ಗೆ ಆಡುವ ಹನ್ನೊಂದರ ಬಳಗಲದಲ್ಲಿ ಆಡಲು ಅವಕಾಶ ಸಿಗುತ್ತಾ ಅನ್ನೊದನ್ನ ಕಾದು ನೋಡಬೇಕಿದೆ.
ಇನ್ನೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟೂರ್ನಿಯಿಂದಲ್ಲೇ ಹೊರ ಬಿದ್ದಿರುವುದರಿಂದ ನಾಯಕ ಧೋನಿ ಯುವ ಆಟಗಾರರಿಗೆ ಅವಕಾಶ ಕೊಡಬಹುದು. ಒಟ್ಟರೆ ಸೂಪರ್ ಸಂಡೇ ಫೈಟ್ನಲ್ಲಿ ಯಾರು ಗೆಲ್ಲುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?