Featured
ಸೀಸನ್ 13ರ ಐಪಿಎಲ್ ಫೈನಲ್: ಚೊಚ್ಚಲ ಟ್ರೋಫಿ ಮೇಲೆ ಕಣ್ಣಿಟ್ಟ ಡೆಲ್ಲಿ: ಪ್ರಶಸ್ತಿ ಉಳಿಸಿಕೊಳ್ಳಲು ಮುಂಬೈ ಹೋರಾಟ

ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಇವತ್ತು ಐಪಿಎಲ್ನ ಮೆಗಾ ಫೈನಲ್ನಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಹೋರಾಡಲಿದೆ.
ದುಬೈ ಅಂಗಳದಲ್ಲಿ ನಡೆಯಲಿರುವ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಚೊಚ್ಚಲ ಪ್ರಯತ್ನದಲ್ಲೆ ಐಪಿಎಲ್ ಟ್ರೋಫಿಗೆ ಗೆಲ್ಲಲು ಪಣತೊಟ್ಟಿದ್ರೆ ಇತ್ತ ನಾಲ್ಕು ಬಾರಿ ಚಾಂಪಿಯನ್ ಆಗಿರುವ ರೋಹಿತ್ ಶರ್ಮಾ ನೇತೃಥ್ವದ ಮುಂಬೈ ಇಂಡಿಯನ್ಸ್ ಐದನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯೋದಕ್ಕೆ ಪ್ಲ್ಯಾನ್ ಮಾಡಿದೆ.
ಎರಡೂ ತಂಡಗಳ ಮಹಾ ಕದನವನ್ನ ನೋಡಲು ಇಡೀ ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿದೆ. ಮೇಲ್ನೋಟಕ್ಕೆ ಡೆಲ್ಲಿ ಎದುರು ಮುಂಬೈ ಬಲಿಷ್ಠವಾಗಿದೆ. ಅಬುಧಾಬಿಯಲ್ಲಿ ನಡೆದಿದ್ದ ಲೀಗ್ನ ಮೊದಲ ಪಂದ್ಯದಲ್ಲಿ ಮುಂಬೈ 5 ವಿಕೆಟ್ಗಳ ಗೆಲುವು ದಾಖಲಿಸಿತ್ತು.ನಂತರ ದುಬೈನಲ್ಲಿ ನಡೆದ ಲೀಗ್ನ ಎರಡನೆ ಪಂದ್ಯದಲ್ಲಿ ಮುಂಬೈ 9 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತ್ತು.
ಇದಾದ ನಂತರ ಮೊನ್ನೆ ನಡೆದ ಕ್ವಾಲಿಫೈಯರ್1ರ ಪಂದ್ಯದಲ್ಲಿ ಮುಂಬೈ ಡೆಲ್ಲಿ ವಿರುದ್ಧ 57 ರನ್ಗಳ ಗೆಲುವು ಸಾಧಿಸಿತು. ಡೆಲ್ಲಿ ತಂಡ ಮುಂಬೈ ವಿರುದ್ಧ ಆಡಿರುವ ಮೂರು ಪಂದ್ಯಗಳನ್ನ ಕೈಚೆಲ್ಲಿರಬಹುದು ಆದರೆ ಡೆಲ್ಲಿ ಹುಡುಗರನ್ನ ಹಗುರವಾಗಿ ಪರಿಗಣಿಸುವಂತಿಲ್ಲ. ಯಾಕಂದ್ರೆ ಪೆಟ್ಟು ತಿಂದು ಏಟು ಕೊಡೋದು ಡೆಲ್ಲಿ ತಂಡದ ಜಾಯಮಾನ .ಲೀಗ್ನಲ್ಲಿ ಸನ್ರೈಸರ್ಸ್ ವಿರುದ್ಧ ಆಡಿದ 2 ಪಂದ್ಯಗಳಲ್ಲಿ ಸೋತಿದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊನ್ನೆ ಎಲಿಮಿನೇಟರ್ನಲ್ಲಿ ಸನ್ರೈಸರ್ಸ್ತಂಡಕ್ಕೆ ಶಾಕ್ ಕೊಟ್ಟಿತ್ತು.
ಒಟ್ಟಾರೇ ಕ್ರಿಕೆಟ್ ಜಗತ್ತಿನ ಚಿತ್ತ ದುಬೈ ಅಂಗಳದತ್ತ ನೆಟ್ಟಿದ್ದು ಯಾರು ಸೀಸನ್ 13ರ ಚಾಂಪಿಯನ್ ಆಗ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?